ಮುಂಬಯಿ, ಸುಜಾತ ಪ್ರವೀಣ್ ಮೂಲ್ಯ ವಿಧಿವಶ
ಮುಂಬಯಿ : ಸಾಯನ್ ನ ನಿವಾಸಿ ಉಧ್ಯಮಿ, ಕುಲಾಲ ಸಂಘ ಮುಂಬಯಿಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ಮೂಲ್ಯ ಇವರ ಪತ್ನಿ ಸುಜಾತ ಪ್ರವೀಣ್ ಮೂಲ್ಯ (27 ) ಅವರು ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದು 3 ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಚಿಕಿತ್ಸೆಗಾಗಿ ಚೆಂಬೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಅಲ್ಲಿ ಶಸ್ತ್ರ ಚಿಕಿತ್ಸೆ ಮಾಡುವುದು ಅನಿವಾರ್ಯ ಎಂದು ಹೇಳಿದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮೂರು ದಿನಗಳ ನಂತರ, ಮೇ. 24 ರಂದು ಇವರನ್ನು ಆಸ್ಪತ್ರೆಯಿಂದ ಬಿಡುಗಡೆ್ಗೊಳಿಸಿ ಮನೆಗೆ ಕಳುಹಿಸಲಾಯಿತು. ಮನೆಗೆ ಬಂದ ತಕ್ಷಣ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದು ಮುಂಬಯಿಯ ಹೃದಯ ಭಾಗದಲ್ಲಿ ಅವರ ಮನೆ ಇದ್ದರೂ ಸಹ ಸಕಾಲದಲ್ಲಿ ಅಂಬುಲೆನ್ಸ್ ಸೇವೆ ಸಿಗದೆ ಆಸ್ಪತ್ರೆಗೆ ತಲಪಲು ತಡವಾಯಿತು. ಅಲ್ಲಿ ವೈದ್ಯರು ತಪಾಸಣೆ ನಡೆಸಲು ತಡಮಾಡಿದ್ದು ಮೇ. 24 ರಂದು ನಡು ರಾತ್ರಿ ಮಹಿಳೆ ವಿಧಿವಶರಾದರು.
ಕುಲಾಲ ಸಂಘ ಮುಂಬಯಿಯ ಸಿ ಎಸ್ ಟಿ- ಮುಲುಂಡ್ ಸ್ಥಳೀಯ ಸಮಿತಿಯ ಸಕ್ರಿಯ ಕಾರ್ಯಕರ್ತ ದಯಾನಂದ ಮೂಲ್ಯರವರ ಸಹೋದರ ಪ್ರವೀಣ್ ಮೂಲ್ಯ ಅವರ ಪತ್ನಿ ಸುಜಾತ ಪ್ರವೀಣ್ ಮೂಲ್ಯ ಇವರು ಮುಂಬಯಿ ಚೆಂಬೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದು ಇವರ ಅನಿರೀಕ್ಷಿತ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣ ಎಂದು ಅವರ ಮನೆಯವರಿಂದ ತಿಳಿದು ಬಂದಿದೆ. ಒಂದು ವೇಳೆ ಆಸ್ಪತ್ರೆಯ ವೈದ್ಯರು ಸರಿಯಾದ ಸಮಯದಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರೆ ಅವರು ಬದುಕುತ್ತಿದ್ದರು ಎಂದು ಅವರ ಸಂಮಂಧಿಕರು ತಿಳಿಸಿದರು.
ಎರಡು ವರ್ಷದ ಗಂಡು ಮಗುವಿನ ತಾಯಿಯಾಗಿರುವ ಸುಜಾತ ಅವರನ್ನು ಪತಿ ಪ್ರವೀಣ್ ಮೂಲ್ಯ, ದಯಾನಂದ್ ಮೂಲ್ಯ ಮತ್ತು ಸಂಬಂಧಿಕರು, ಕುಲಾಲ ಸಂಘ ಮುಂಬಯಿಯ ಕಾರ್ಯಕರ್ತರು ಸುಜಾತ ಅವರ ಜೀವ ಉಳಿಸುವುದಕ್ಕೆ ಅಪಾರ ಶ್ರಮ ವಹಿಸಿದ್ದು ವಿಧಿಯಾಟ ಎದುರು ಯಾವ ಪ್ರಯತ್ನವೂ ನಡೆಯಲಿಲ್ಲ. ಇವರ ಅಕಾಲ ಮೃತ್ಯು ಮಾತಾ ಪಿತರಿಗೆ, ಮನೆಯವರಿಗೆ, ಬಂಧುಗಳಿಗೆ ಆಘಾತವನ್ನುಂಟುಮಾಡಿದೆ. ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ದೇವದಾಸ ಕುಲಾಲ್ ಮತ್ತು ಪದಾಧಿಕಾರಿಗಳು, ಕುಲಾಲ ಸಂಘ ಮುಂಬಯಿಯ ಸಿ ಎಸ್ ಟಿ- ಮುಲುಂಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಮೂಲ್ಯ ಮತ್ತು ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.