ಮುಕ್ತವಾಹಿನಿ ವತಿಯಿಂದ ಕೊಡಿಹಬ್ಬಕ್ಕೆ ಮನೋರಂಜನೆಯ ಮಹಾಪೂರ
ಉಡುಪಿ: ಇತಿಹಾಸ ಪ್ರಸಿದ್ಧ ಕೋಟೇಶ್ವರದ ಕೊಡಿಹಬ್ಬದ ಪ್ರಯುಕ್ತ ಮುಕ್ತ ವಾಹಿನಿ ವತಿಯಿಂದ ಹಲವಾರು ಸಾಂಸ್ಕøತಿಕ ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮಗಳು 3 ಮತ್ತು 4ನೇ ತಾರೀಕಿನಂದು ನಡೆಯಲಿವೆ.
ಜಾತ್ರಾಸ್ಥಳದ ಸಮೀಪವಿರುವ ವಿಶ್ವಕರ್ಮ ಸಭಾಂಗಣ ಮತ್ತು ಬಯಲುವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ
ಸ್ಥಳಿಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಬಿಸಿಡಿ ಎಂಬ ಪ್ರತಿಭಾ ಶೋಧ ಕಾರ್ಯಕ್ರಮ ನಡೆಯಲಿದ್ದು, ಇದರ ಅಡೀಶನ್ ಈಗಾಗಲೆ ಮುಗಿದಿದೆ. ಈ ಎಲ್ಲಾ ಕಲಾವಿದರು ವೇದಿಕೆಯಲ್ಲಿ ತಮ್ಮ ಅಂತಿಮ ಸುತ್ತಿನ ಪ್ರದರ್ಶನವನ್ನು ನೀಡಲಿದ್ದಾರೆ. ಇದರ ಜೊತೆಗೆ ಹಲವಾರು ಹಾಸ್ಯ ಕಲಾವಿದರ ಕೂಡುವಿಕೆಯೊಂದಿಗೆ “ನ್ಯೆಗಿಹಬ್ಬ” ಎಂಬ ಕುಂದಕನ್ನಡದ ಸಂಪೂರ್ಣ ಹಾಸ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನೆರೆದ ಲಕ್ಷಾಂತರ ಜನರ ಮನಸೂರೆಗೊಳಿಸಲು ರಾಜ್ಯದ ಪ್ರಸಿದ್ಧ ಕಲಾವಿದರಿಂದ ನೃತ್ಯ ಮತ್ತು ಸಂಗೀತ ರಸಸಂಜೆಯೂ ನಡೆಯಲಿದೆ. ಇದರಲ್ಲಿ ದಿವ್ಯಾ ರಾಮಚಂದ್ರ ತೀರ್ಥಹಳ್ಳಿ, ನಿಶಾನ್ ರೈ ಮೊದಲಾದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಕರಾವಳಿಯ ಪ್ರಮುಖ ನೃತ್ಯ ತಂಡಗಳು ತಮ್ಮ ಅಮೋಘ ಪ್ರದರ್ಶನವನ್ನೂ ನೀಡಲಿದ್ದಾರೆ. ಆರ್ ಜೆ ಪ್ರಸನ್ನ ಮತ್ತು ಶರ್ಮಿಳಾ ಅವರು ಈ ಅದ್ದೂರಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ.
ಸಾರ್ವಜನಿಕರಿಗಾಗಿ ಹಲವಾರು ಸ್ಪರ್ಧೆಗಳು
ಕೊಡಿ ಹಬ್ಬ ಪ್ರಯುಕ್ತ ಮುಕ್ತ ವಾಹಿನಿಯು ವಿಶ್ವಕರ್ಮ ಸಭಾಂಗಣದಲ್ಲಿ ಮುಕ್ತ ಫುಡ್ ಫೆಸ್ಟಿವಲ್ ಮತ್ತು ಆಕರ್ಷಕ ವಾಣಿಜ್ಯ ಮೇಳವನ್ನೂ ಆಯೋಜಿಸಿದೆ. ಇದರಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಹತ್ತಾರು ಕಂಪನಿಗಳು ಭಾಗವಹಿಸುತ್ತಿವೆ. ಇಲ್ಲಿ ಸಾರ್ವಜನಿಕರಿಗಾಗಿ ಹತ್ತಕ್ಕೂ ಅಧಿಕ ಸ್ಪರ್ಧೆಗಳನ್ನು ನಾವು ಆಯೋಜಿಸಿದ್ದು, ಈಗಾಗಲೇ ನೋಂದಣಿ ಆರಂಭವಾಗಿದೆ. ಊರ್ಮನಿ ಅಡ್ಗಿ, ವಿದಿನ್ ಎ ಮಿನಿಟ್, ಮುಕ್ತ ಜೊತೆ ಮುಖಚಿತ್ರ, ಕಲರ್ಸ್ ಆಫ್ ಕೊಡಿ ಹಬ್ಬ, ದಾಂಪತ್ಯಕ್ಕೊಂದು ಹೊಸ ಅರ್ಥ, ಐಸ್‍ಕ್ರೀಂ ತಿಂಬುಕ್ ಬಿಡಿ, ನಾ ಕಂಡಂತೆ ಕೊಡಿಹಬ್ಬ, ಕೇಶ ಶೃಂಗಾರ, ಬೆಲೆ ತಿಳಿಸಿ ಬಹುಮಾನ ಗಳಿಸಿ, ನಿಧಿ ಶೋಧ, ಬೇಟಿ ನೀಡಿ ಬಹುಮಾನ ಗೆಲ್ಲಿ… ಹೀಗೆ ಹತ್ತು ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳು 3 ಮತ್ತು 4ರಂದು ಬೆಳಿಗ್ಗೆ 9.00ರಿಂದ ರಾತ್ರಿ ಹನ್ನೆರಡರವರೆಗೆ ನಡೆಯಲಿವೆ. ಸ್ಪರ್ಧೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತೇಜಸ್- 9632771626, ಆಕಾಶ್- 7349459985, ಚೈತ್ರಾ- 9535372765, -9900933952 ಇವರನ್ನು ಸಂಪರ್ಕಿಸಬಹುದು.