Home Mangalorean News Kannada News ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟಿನಲ್ಲಿ ಕರಾವಳಿಗೆ ಅನ್ಯಾಯ :- ಶಾಸಕ ರಘುಪತಿ ಭಟ್

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟಿನಲ್ಲಿ ಕರಾವಳಿಗೆ ಅನ್ಯಾಯ :- ಶಾಸಕ ರಘುಪತಿ ಭಟ್

Spread the love

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟಿನಲ್ಲಿ ಕರಾವಳಿಗೆ ಅನ್ಯಾಯ :- ಶಾಸಕ ರಘುಪತಿ ಭಟ್

ಉಡುಪಿ:  ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಿರಾಶದಾಯಕವಾಗಿದ್ದು, ಕಳೆದ 15 ವರ್ಷಗಳಲ್ಲಿ ಮಂಡನೆಯಾದ ಬಜೆಟ್ ಗಳ ಪೈಕಿ ಈ ಬಜೆಟ್ ಅತ್ಯಂತ ಕೆಟ್ಟ ಬಜೆಟ್ ಎಂದು ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರಾವಳಿ, ಮಲೆನಾಡು ಮುಂತಾದ ಜಿಲ್ಲೆಗಳಿಗೆ ಒಂದೂ ಯೋಜನೆ ಕೊಡದೆ ಕೇವಲ 3-4 ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಇದಾಗಿದೆ. ವಿಶೇಷವಾಗಿ ಮೀನುಗಾರರಿಗೆ ಯಾವುದೇ ಯೋಜನೆ ನಿಡಿಲ್ಲಾ. ರೈತರ ಸಾಲ ಮನ್ನಾ ಕೂಡ ಅಸಮರ್ಪಕವಾಗಿದೆ. ಮೀನುಗಾರರ ನಿಯೋಗವು ಮೊನ್ನೆ ಮುಖ್ಯಂತ್ರಿಗಳಲ್ಲಿ ಆಳ ಸಮುದ್ರ ಮೀನಗಾರಿಕೆಗೆ ಸಬ್ಸಿಡಿ ಬಗ್ಗೆ ವಿನಂತಿಸಿತ್ತು. ಆದರೆ ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ರೀತಿಯ ಪ್ರಸ್ತಾಪ ಇರುವುದಿಲ್ಲ.

ಇದು ಕರಾವಳಿಯಲ್ಲಿ ಜೆಡಿಎಸ್ ಪಕ್ಷವು ಠೇವಣಿ ಕಳೆದುಕೊಂಡಿದಕ್ಕೆ ಕುಮಾರ ಸ್ವಾಮಿಯವರು ಸೇಡು ತೀರಿಸಿಕೊಂಡಂತಿದೆ ಎಂದು ಉಡುಪಿ ಶಾಸಕರಾದ  ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಶಂಕರಾಚಾರ್ಯರ ಜನ್ಮ ದಿನಾಚರಣೆ ಆಚರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಈ ರಾಜ್ಯದಲ್ಲಿ ಹುಟ್ಟಿ ಬೆಳೆದಂತಹ ದಾರ್ಶನಿಕರಾದ ಮಧ್ವಾಚಾರ್ಯರ ಜನ್ಮ ದಿನಾಚರಣೆ ಆಚರಿಸುವ ಬಗ್ಗೆ ಪ್ರಕಟಿಸುವಂತೆ ಶಾಸಕರಾದ ಕೆ ರಘುಪತಿ ಭಟ್ ಆಗ್ರಹಿಸಿದ್ದಾರೆ.


Spread the love

Exit mobile version