ಮಂಗಳೂರು: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಗಳೂರು ದಕ್ಷಿಣ ವಿಧಾನ ಸಭಾ ಸದಸ್ಯ ಜೆ. ಆರ್. ಲೋಬೊ ಅವರ ಶಿಫಾರಸಿನ ಮೇರೆಗೆ 9 ಸಂತ್ರಸ್ತರವರಿಗೆ ವಿವಿಧ ರೋಗದ ಚಿಕಿತ್ಸೆಗಾಗಿ ಸುಮಾರು ರುಪಾಯಿ 6.83 ಲಕ್ಷ ಪರಿಹಾರ ಧನದ ಚೆಕ್ನ್ನು ಕಚೇರಿಯಲ್ಲಿ ಹಾಗು ಸಂತ್ರಸ್ತರ ಮನೆಗೆ ಭೇಟಿ ನೀಡಿ ಇತ್ತೀಚೆಗೆ ಹಸ್ತಾಂತರಿಸಿದರು.
ಕುಲ್ಶೇಖರದ ಆಶ್ರಫ್ ಅಲಿ ಪಂಜತ್ (2 ಲಕ್ಷ), ಜೆಪ್ಪುವಿನ ಮೋಹನ್ (1.5 ಲಕ್ಷ), ಕದ್ರಿ ಶೀವಭಾಗ್ನ ಎಡೊಲ್ಫ್ ಸಲ್ಡಾನ (1 ಲಕ್ಷ), ಜೆಪ್ಪಿನಮೊಗರುವಿನ ರಘುರಾಮ್ ಸುವರ್ಣ (80,000), ಶಕ್ತಿನಗರದ ಕೇಶವ್ ಬಿನ್ (50,000), ನಾಗೊರಿಯ ಸೆಲಿಸ್ ಬೆನಡಿಕ್ಟ್ ಮಿನೇಜಸ್ (30,000), ಬೆಂಗ್ರೆಯ ಕಮಲಾಕ್ಷಿ (30,000), ಕಸಬ ಬೆಂಗ್ರೆಯ ಮೊಹಮ್ಮದ್ ಅಲಿ (25,000) ಹಾಗು ಮಹಮ್ಮದ್ ಬಿಲಾಲ್ (18,000)ರವರಿಗೆ ವೈದ್ಯಕೀಯ ಪರಿಹಾರ ಧನವನ್ನು ವಿತರಿಸಿ ಅವರ ಅರೋಗ್ಯವನ್ನು ವಿಚಾರಿಸಿದರು.
ಕಾರ್ಪೋರೇಟರ್ಗಳಾದ ಸಬಿತ ಮಿಸ್ಕಿತ್, ಪ್ರವಿಣ್ ಚಂದ್ರ ಅಳ್ವ, ಆಶಾ ಡಿ’ಸಿಲ್ವ, ಕವಿತಾ ವಾಸು, ನಾಯಕರಾದ ನಾಗೇಂದ್ರ ಕುಮಾರ್, ಟಿ.ಕೆ. ಸುಧೀರ್, ನಮೀತಾ ಡಿ. ರಾವ್, ಡೆನೀಸ್ ಡಿಸಿಲ್ವ, ಹರ್ಬಟ್ ಡಿಸೋಜ, ರಮಾನಂದ್ ಪೂಜಾರಿ, ಎಮ್ ಫಾರುಕ್, ಅಸೀಫ್ ಬೆಂಗ್ರೆ, ಸುನೀಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.