Home Mangalorean News Kannada News ಮುಖ್ಯ ಮಂತ್ರಿಗಳ ಆತ್ಮ ಸ್ಥೈರ್ಯ ಬಲ ವರ್ದನೆಗೆ ಶಕ್ತಿ ತುಂಬಲು ಪ್ರಯತ್ನಿಸಿ – ಎಂ. ಬಿ....

ಮುಖ್ಯ ಮಂತ್ರಿಗಳ ಆತ್ಮ ಸ್ಥೈರ್ಯ ಬಲ ವರ್ದನೆಗೆ ಶಕ್ತಿ ತುಂಬಲು ಪ್ರಯತ್ನಿಸಿ – ಎಂ. ಬಿ. ಸದಾಶಿವ

Spread the love

ಮುಖ್ಯ ಮಂತ್ರಿಗಳ ಆತ್ಮ ಸ್ಥೈರ್ಯ ಬಲ ವರ್ದನೆಗೆ ಶಕ್ತಿ ತುಂಬಲು ಪ್ರಯತ್ನಿಸಿ – ಎಂ. ಬಿ. ಸದಾಶಿವ.

ದ.ಕ ಜಿಲ್ಲಾ ಜಾತ್ಯತೀತ ಜನತಾ ದಳ ಕಾರ್ಯಕರ್ತರ ಸಭೆಯು ಮಿನಿ ವಿಧಾನ ಸೌಧ ಎನ್. ಜಿ. ಒ. ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ರಾಜ್ಯ ಉಪಾಧ್ಯಕರಾದ ಎಂ. ಬಿ. ಸದಾಶಿವ ಮಾತನಾಡಿ ಇಂದು ರಾಜ್ಯದ ಮುಖ್ಯ ಮಂತ್ರಿಗಳು ಸಮ್ಮಿಶ್ರ ಸರಕಾರದ ನಾಯಕತ್ವದಲ್ಲಿ ಒಂದೆಡೆ ಸರ್ಕಾರದ ಆಡಳಿತ , ಇನ್ನೊಂದೆಡೆ ಜನಪ್ರತಿನಿಧಿಗಳನ್ನು ಒಗ್ಗಟ್ಟಿನಿಂದ ಕೊಂಡೊಯುವಿಕೆ, ಇನ್ನೊಂದೆಡೆ ಲಕ್ಷಾಂತರ ಕಾರ್ಯಕರ್ತರ ಬೇಡಿಕೆಗಳನ್ನು ನೆರವೇರಿಸುವ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಅವರಿಗೆ ಆತ್ಮಸ್ಥರ್ಯ ಬಲವರ್ಧನೆಗೆ ಶಕ್ತಿ ತುಂಬುವ ಕೆಲಸ ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಿದರು. ಮಾತ್ರವಲ್ಲ ಮುಂದಿನ ದಿನಗಳಲ್ಲಿ ನಡೆಯುವ ನಗರ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರು ಹುಮ್ಮನಿಸ್ಸಿನಿಂದ ದುಡಿಯಲು ಕರೆ ನೀಡಿದರು. ಹಾಗೂ ಮುಂದಿನ ದಿನಗಳಲ್ಲಿ 25,000 ಸಕ್ರಿಯ ಕಾರ್ಯಕರ್ತರ ನೋಂದಾವಣೆಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞÂ ಮಾತನಾಡಿ ಪಕ್ಷದಲ್ಲಿ ಶಿಸ್ತು ಪ್ರಮಾಣಿಕತೆ ಒಗ್ಗಟ್ಟಿಗೆ ಹೆಚ್ಚಿನ ಪ್ರಾತಿನಿದ್ಯ ನೀಡಿದ್ದು ಮುಂದಿನ ನಗರ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಇದೀಗ ಹಲವು ಆಭ್ಯರ್ಥಿಗಳನ್ನು ಗುರುತಿಸಿದ್ದು ಪಕ್ಷದ ಹೈಕಮಾಂಡಿನೊಡನೆ ಚರ್ಚಿಸಿ ಪಟ್ಟಿ ಬಿಡುಗಡೆ ಗೊಳಿಸಲಾಗುವುದು. ಮತ್ತು ಚುನಾವೆಣ ನಡೆಯುವ ನಗರ ಸಂಸ್ಥಗಳಿಗೆ ಉಸ್ತುವಾರಿ ನಾಯಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

ಯುವಜನತಾ ದಳದ ಅಧ್ಯಕ್ಷರಾದ ಅಕ್ಷಿತ್ ಸುವರ್ಣ, ಮಹಿಳಾ ಘಟಕದ ಅದ್ಯಕ್ಷೆ ಸುಮತಿ ಹೆಗ್ಡೆ, ಮೋಹನ ದಾಸ್ ಶೆಟ್ಟಿ ದಿನಕರ್ ಉಳ್ಳಾಲ್, ಇಕ್ಬಲ್ ಮುಲ್ಕಿ, ಮೀರಾ ಸಾಬ್ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಪಕ್ಷದ ನಾಯಕರಾದ ರಾಂ ಗಣೇಶ್, ಅಬೂಬಕರ್ ನಾಟೆಕಲ್, ಸುಶೀಲ್ ನೊರೊನ್ಹಾ, ಗೋಪಾಲ ಕೃಷ್ಣ ಅತ್ತಾವರ ಕನಕದಾಸ್, ಮಹ್ಮದ್ ಶಫಿ, ಎಸ್. ರಮೇಶ್ ರಾಮಕೃಷ್ಣ ಶೆಟ್ಟಿ ಭರತ ಶೆಟ್ಟಿ ಎಸ್. ಪಿ. ಚೆಂಗಪ್ಪ, ಗೋಳಿಕಟ್ಟೆ ಇಬ್ರಾಹಿಂ, ರತ್ನಾಕರ್ ಸುವರ್ಣ, ಶ್ರೀನಾಥ ರೈ, ಹರೀಶ್ ಕೊಟ್ಟಾರಿ, ರಾಜಶ್ರೀ ಹೆಗ್ಡೆ ಕ್ಷೇತ್ರ ಅಧ್ಯಕ್ಷರಾದ ಡಿ.ಪಿ ಹಮ್ಮಬ್ಬ, ಬಿ. ಮೋಹನ್, ಆಶ್ರಪ್ ಕಲ್ಲಿಗೆ, ದಯಾಕರ್ ಆಳ್ವ, ಜಗನ್ನಾಥ್ ಗೌಡ, ಕೊರ್ಪರೇಟರ್ ಗಳಾದ ಅಜೀಜ್ ಕುದ್ರೊಳಿ, ರಮೀಜಾ ಭಾನು ಉಪಸ್ಥಿತರಿದ್ದರು. ಮಂಗಳೂರು ಕ್ಷೇತ್ರದ ಅಧ್ಯಕ್ಷ ವಸಂತ್ ಪೂಜಾರಿ ಪ್ರಸ್ತಾವನೆ ಗೈದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್ ಧನ್ಯವಾದ ಗೈದರು.


Spread the love

Exit mobile version