ಮುಖ್ಯ ಸಚೇತಕ ಐವನ್ ಡಿ’ಸೋಜಾಗೆ ಅದ್ದೂರಿ ಸ್ವಾಗತ, ಚರ್ಚು, ಮಸೀದಿ, ದೇವಸ್ಥಾನಗಳಿಗೆ ಭೇಟಿ
ಮಂಗಳೂರು: ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ನಗರಕ್ಕೆ ಆಗಮಿಸಿದ ಐವನ್ ಡಿ’ಸೋಜಾ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನು ಕೋರಿದರು.
ಮೊದಲು ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನವನ್ನು ಅವರು ಸ್ವೀಕರಿಸಿದರು.
ಬಳಿಕ ಮಾತನಾಡಿದ ಐವನ್ ಡಿ’ಸೋಜಾ ಪಕ್ಷ ತನಗೆ ಮುಖ್ಯ ಸಚೇತಕ ಹುದ್ದೆ ನೀಡಿದ್ದು ಸಂತೋಷವಗಿದೆ. ತಾನು ಸಮಾಜ ಸೇವೆಗಾಗಿ ರಾಜಕೀಯ ಮಾಡುತ್ತಾ ಬಂದಿದ್ದು, ಅನೇಕ ಏರುಪೇರುಗಳನ್ನು ಕಂಡಿದ್ದೇನೆ. ಚುನಾವಣೆಯಲ್ಲಿ ಸೋಲಾದಾಗ ಹಿಂಜರಿಯಲಿಲ್ಲ. ಪಕ್ಷ ಟಿಕೇಟು ಸಿಗದಾಗ ಪಕ್ಷಕ್ಕೆ ಹಾನಿ ಮಾಡಿದ್ದರೆ ಈ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ. ಅವಕಾಶ ಸಿಗಲಿಲ್ಲ ಎಂದು ಸುಮ್ಮನಿರದೆ ಪಕ್ಷಕ್ಕಾಗಿ ದುಡಿಯುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು.
ಭಾರತೀಯ ಜನತಾ ಪಕ್ಷ ಧರ್ಮ, ಜಾತಿ ಆಧಾರದಲ್ಲಿ ವಿಭಜನೆಯನ್ನು ಮಾಡುತ್ತಿದ್ದು, ಕಾಂಗ್ರೆಸ್ ಅಂತಹ ಕೆಲಸವನ್ನು ಮಾಡುವುದಿಲ್ಲ. ವಿಧಾನಪರಿಷತ್ ಸದಸ್ಯನಾದ ನಂತರ ಬಡವರಿಗೆ ಜಾತಿ ಧರ್ಮ ಎನ್ನವುದನ್ನು ಕಾಣದೆ ಸರ್ವರಿಗೂ 3.4 ರೂ ಕೋಟಿ ಅನುದಾನವನ್ನು ಹಂಚಿದ್ದೇನೆ ಎಂದರು.
ಮುಖ್ಯ ಸಚೇತಕನಾಗಿ ಆಯ್ಕೆಯಾದ ಬಳಿಕ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವನ್ನು ಭೇಟಿಯಾದಾಗ ಯಾವಾಗ ನೀವು ಮಂಗಳೂರಿಗೆ ಹೋಗುತ್ತೀರು? ನಿಮ್ಮನ್ನು ಪಕ್ಷದ ಕಾರ್ಯಕರ್ತರು ಸನ್ಮಾನವನ್ನು ಆಯೋಜಿಸಿದ್ದಾರೆ, ಆದರೆ ನನ್ನನ್ನು ಮರೆಯಬೇಡಿ ಎಂದಿದ್ದರು. ಸೊರಕೆಯವರು ಪಕ್ಷದ ಏಳಿಗೆಗಾಗಿ ಸಾಕಷ್ಟು ದುಡಿದಿದ್ದಾರೆ ಅವರ ಬಗ್ಗೆ ವಿಶೇಷ ಗೌರವನ್ನು ಹೊಂದಿದ್ದೆನೆ. ಅವರಂತೆಯೇ ಅಭಯಚಂದ್ರ ಜೈನ್ ಅವರೂ ಕೂಡ ಪಕ್ಷಕ್ಕಾಗಿ ತುಂಬಾ ದುಡಿದ್ದಾರೆ ಎಂದರು.
ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಕೈಗೆ ಕೈಕೊಟ್ಟು ದುಡಿಯಬೇಕಾದ ಅವಶ್ಯಕತೆ ಇದ್ದು, ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ 8 ಸ್ಥಾನವನ್ನು ಕಾಂಗ್ರೆಸ್ ಪಕ್ಷ ಗೆಲ್ಲಬೇಕಾಗಿದೆ. ಇದರೊಂದಿಗೆ ಮುಂದಿನ ಅವಧಿಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದರು.
ಕಾಂಗ್ರೆಸ್ ಕಛೇರಿಯಿಂದ ತೆರಳಿದ ಐವನ್ ಬಿಕರ್ನಕಟ್ಟೆ ಇನ್ಫೆಂಟ್ ಜೀಸಸ್ ಚರ್ಚಿಗೆ ಭೇಟಿ ನೀಡಿ ಧರ್ಮಗುರುಗಳ ಆಶೀರ್ವಾದವನ್ನು ಪಡೆದರು. ಅಲ್ಲಿದ ಕದ್ರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಐವನ್ ಬಳಿಕ ಬಂದರು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಮುಸ್ಲಿಂ ಭಾಂಧವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು.