Home Mangalorean News Kannada News ಮುಗಿಯದ ಆಧಾರ್ ಗೋಳು; ಟೋಕನ್ ಪಡೆಯಲು ಡಿಸಿ ಕಚೇರಿಯಲ್ಲಿ ಮಾರುದ್ದ ಸಾಲು

ಮುಗಿಯದ ಆಧಾರ್ ಗೋಳು; ಟೋಕನ್ ಪಡೆಯಲು ಡಿಸಿ ಕಚೇರಿಯಲ್ಲಿ ಮಾರುದ್ದ ಸಾಲು

Spread the love

ಮುಗಿಯದ ಆಧಾರ್ ಗೋಳು; ಟೋಕನ್ ಪಡೆಯಲು ಡಿಸಿ ಕಚೇರಿಯಲ್ಲಿ ಮಾರುದ್ದ ಸಾಲು

ಮಂಗಳೂರು: ಪ್ರತಿಯೊಂದು ಯೋಜನೆಗಳಿಗೂ ಆಧಾರ್ ಕಾರ್ಡ್ ಅಗತ್ಯತೆಯನ್ನು ರಾಜ್ಯ ಸರಕಾರಗಳು ಹೇಳುತ್ತಿದ್ದು ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ಅಥವಾ ತಿದ್ದುಪಡಿಗಾಗಿ ಜನಸಾಮಾನ್ಯರ ಗೋಳು ಮಾತ್ರ ಮುಗಿಯುತ್ತಿಲ್ಲ. ಆಧಾರ್ ಕಾರ್ಡ್ ಟೋಕನ್ ಪಡೆಯಲು ಸೋಮವಾರ ಜಿಲ್ಲಾಧಿಕಾರ ಕಚೇರಿ ಬಳಿ ಸುಮಾರು 100 ಮೀಟರ್ ಉದ್ದದ ಸಾಲಿನಲ್ಲಿ ಜನರು ಕಾಯುತ್ತಿದ್ದ ದೃಶ್ಯ ಎದುರಾಯಿತು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ಟೋಕನ್ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಜನರು ಬೆಳಿಗ್ಗೆ 6 ಗಂಟೆಗೆ ಆಗಮಿಸಿದ್ದು ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯಿಂದ ಸರತಿ ಸಾಲಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಕ್ಕಳು, ವಯೋವೃದ್ಧರು, ಗರ್ಬಿಣಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಸುಸ್ತಾದರು.

ಬೆಳಿಗ್ಗೆ 7.30 ರಿಂದ ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಮಾಲತಿ ಮ್ಯಾಂಗಲೋರಿಯನ್ ಜೊತೆ ಮಾತನಾಡಿ ತಾನು ನನ್ನ ಆಧಾರ್ ಕಾರ್ಡಿನ ತಿದ್ದುಪಡಿ ಮಾಡಲು ಬೆಳಿಗ್ಗೆ 7.30 ಕ್ಕೆ ಬಂದಿದ್ದು ಕಾದು ಕಾದು ಸುಸ್ತಾಗಿದ್ದೇನೆ.

ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಹೋಬಳಿ ಮಟ್ಟದಲ್ಲಿ ಆಧಾರ್ ನೋಂದಣಿ ಕೆಂದ್ರಗಳನ್ನು ಆರಂಭಿಸಿದ್ದು, ಜಿಲ್ಲೆಯಲ್ಲಿ 23 ತಿದ್ದುಪಡಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೆ ಪಾಂಡೇಶ್ವರ ಅಂಚೆ ಕಚೇರಿಯಲ್ಲಿ ಕೂಡ ಆಧಾರ್ ತಿದ್ದುಪಡಿ ಕೇಂದ್ರವನ್ನು ತೆರೆಯಲಾಗಿದ್ದು ಜನರು ಅಲ್ಲಿಗೆ ತೆರಳುತ್ತಿಲ್ಲ. ಈ ಕುರಿತು ಸುದ್ದಿ ಪತ್ರಿಕೆಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳ ಮಾಹಿತಿಯನ್ನ ಸಹ ನೀಡಿದ್ದರೂ ಕೂಡ ಜನರು ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿದ್ದಾರೆ. ಯಾರಿಗಾದರೂ ತಮ್ಮ ಆಧಾರ್ ಕಾರ್ಡಿನಲ್ಲಿ ತಿದ್ದುಪಡಿ ಮಾಡಲು ಇದ್ದಲ್ಲಿ ತಾಲೂಕು ಕಚೇರಿ ಅಥವಾ ಹೋಬಳಿ ಕೇಂದ್ರದ ಜನಸ್ನೇಹಿ ಕೇಂದ್ರಗಳಲ್ಲೂ ಕೂಡ ಮಾಡಬಹುದಾಗಿದೆ.

ಇವತ್ತು ಇಲ್ಲಿ ಟೋಕನ್ ಪಡೆಯಲು ಬಂದವರಲ್ಲಿ ಹೆಚ್ಚಿನವರು ತಿದ್ದುಪಡಿಗಾಗಿ ಬಂದವರು ಆಗಿದ್ದು, ತಿದ್ದುಪಡಿ ವ್ಯವಸ್ಥೆ ಮಂಗಳೂರು ವನ್, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಮಾಡಲಾಗಿದ್ದರೂ ಜನ ಅಲ್ಲಿ ಹೋಗುತ್ತಿಲ್ಲ. ಅಲ್ಲಿ ಟೋಕನ್ ಪಡೆದು, ಬಹಳ ದಿನ ಕಾಯಬೇಕೆಂಬ ಆತಂಕದಿಂದ ಇದೀಗ ಜನ ಇಲ್ಲಿ ಸೇರಿದ್ದಾರೆ. ಅವರಿಗೆಲ್ಲರಿಗೂ ಟೋಕನ್ ನೀಡುವ ವ್ಯವಸ್ತೆ ಮಾಡಲಾಗಿದೆ. ಕಚೇರಿ ಅವಧಿ 10 ಗಂಟೆಗಾಗಿದ್ದರೂ, ಟೋಕನ್ ನೀಡುವುದಕ್ಕಾಗಿ ಬೆಳಿಗ್ಗೆ 9 ಗಂಟೆಯಿಂದ ವ್ಯವಸ್ಥೆ ಮಾಡಲಾಗಿತ್ತು. ದಿನವೊಂದಕ್ಕೆ ಕೇಂದ್ರವೊಂದರಲ್ಲಿ 30 ಮಂದಿಗೆ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶವಿದೆ ಎಂದರು.


Spread the love

Exit mobile version