ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ಮೂರು ದಿನಗಳ ವಾರ್ಷಿಕ ಮಹೋತ್ಸವಕ್ಕೆ ಚಾಲನೆ
ಮಂಗಳೂರು: ಪವಿತ್ರ ಬೆಟ್ಟ, ವರದಾನಗಳ ಶಿಖರ ಎಂದೇ ಖ್ಯಾತಿ ಆಗಿರುವ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ಮೂರು ದಿನಗಳ ವಾರ್ಷಿಕ ಮಹೋತ್ಸವ 2019 ನವೆಂಬರ್ ತಿಂಗಳ 28ರಿಂದ ಅದ್ದೂರಿಯಾಗಿ ಪ್ರಾರಂಭವಾಯಿತು.
ಮೊದಲನೆಯ ದಿನ ವ್ಯಾದಿಸ್ತರಿಗಾಗಿ ಪೂಜೆ ಮತ್ತು ಭಿನ್ನಹಗಳನ್ನು ಅಜ್ಮೀರ್ ಧರ್ಮಪ್ರಾಂತ್ಯದ ಧರ್ಮಗುರುಗಳಾದ ವಂದನೀಯ ತೊಮಾಸ್ ಪಿಯುಸ್ ಡಿಸೋಜಾರವರು ನೆರವೇರಿಸಿದರು.
ವಿಶಾಲವಾದ ಪ್ರಾಕೃತಿಕ ವಿಹಂಗಮ ನೋಟದಿಂದ ಕೂಡಿದ ಈ ಪವಾಡ ಸ್ಥಳಕ್ಕೆ ಭಕ್ತರು ಮಹೋತ್ಸವದ ಸಮಯದಲ್ಲಿ ಅಧಿಕ ಸಂಖೆಯಲ್ಲಿ ಭಾಗವಹಿಸಿ, ಸಂತ ಜೋಸೆಪ್ ವಾಜ್ರವರ ಮುಖಾಂತರ ತಮ್ಮ ಕೋರಿಕೆಗಳನ್ನು ನೆರವೇರಿಸಲು ಆಧ್ಯಾತ್ಮಿಕ ತೃಶೆಯಿಂದ ಅತೀ ದೂರದ ಊರುಗಳಿಂದ ಆಗಮಿಸುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ಭಕ್ತಾದಿಗಳಿಗೆ ತಮ್ಮ ಕೋರಿಕೆಗಳಿಗಾಗಿ ವಿನಮ್ರಿಸಲು, ಪಾಪನಿವೇದನೆ ಮಾಡಲು, ನಿರಂತರ ಭಿನ್ನಹ ಜಪ ಆರಾಧನೆ, ಶಿರ ಆಭಿಷೇಕಿಸಿ ಪ್ರಾರ್ಥನೆಗಳನ್ನು ಮಾಡಿ ದೇವರ ಕೃಪೆಗಳಿಗೆ ಪಾತ್ರರಾಗುತ್ತಾರೆ. ಈ ಸ್ಥಳಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುವುದು.
ಈ ಮಾಹೋತ್ಸವವನ್ನು ನವಂಬರ್ 29, 30 ಮತ್ತು ಡಿಸೆಂಬರ್ 01 ರಂದು ಪ್ರಧಾನ ಪ್ರರ್ಥಾನ ದಿನಗಳಾಗಿ ನೆರವೇರುತ್ತಿದೆ.
ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಗುರುಗಳಾದ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜಾರವರು ಶುಕ್ರವಾರಾದ ಪ್ರದಾನ ಕೃತಜ್ಞತಾ ಪೂಜೆಯನ್ನು ನೆರವೇರಿಸಿದರು.