Home Mangalorean News Kannada News ಮುತಾಲಿಕ್, ಸೂಲಿಬೆಲೆ ಉಡುಪಿ ಪ್ರವೇಶ ನಿಷೇಧಿಸಿ: ದಲಿತ ಸ್ವಾಭಿಮಾನಿ ಸಮಿತಿ

ಮುತಾಲಿಕ್, ಸೂಲಿಬೆಲೆ ಉಡುಪಿ ಪ್ರವೇಶ ನಿಷೇಧಿಸಿ: ದಲಿತ ಸ್ವಾಭಿಮಾನಿ ಸಮಿತಿ

Spread the love

ಮುತಾಲಿಕ್, ಸೂಲಿಬೆಲೆ ಉಡುಪಿ ಪ್ರವೇಶ ನಿಷೇಧಿಸಿ: ದಲಿತ ಸ್ವಾಭಿಮಾನಿ ಸಮಿತಿ

ಉಡುಪಿ: ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಕನಕ ನಡೆ ನಡೆಸಿದ ಹಾಗೂ ದಲಿತರ ವಿರುದ್ದ ಅವಹೇಳನಕಾರಿಯಾಗಿ ಅಶ್ಪಶ್ರ್ಯತೆಯ ಆಚರಣೆ ಮಾಡಿದ ಚಕ್ರವರ್ತಿ ಸೂಲಿಬೆಲೆ ಹಾಗೂ ದಲಿತರ ವಿರುದ್ದ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರಿಗೆ ಉಡುಪಿ ಜಿಲ್ಲೆಯನ್ನು ಪ್ರವೇಶ ನಿರ್ಬಂಧ ಮಾಡಬೇಕು ಎಂದು ದಲಿತ ದಮನಿತರ ಸ್ವಾಭಿಮಾನಿ ನಡೆ ನಾಯಕರು ಆಗ್ರಹಿಸಿದ್ದಾರೆ.

dalit-sp-meeting-20161023-00

ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಸಿ ಕನಕ ನಡೆ ಕಾರ್ಯಕ್ರಮ ನಡೆಸಿದ ಯುವ ಬ್ರಿಗೇಡ್ ತಂಡದ ನಾಯಕರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಿದ ದಲಿತ ನಾಯಕರು ಮಾತನಾಡಿ ಇಂತಹ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣಕ್ಕೆ ಕಾರಣವಾಗುತ್ತಿದೆ ಅಂತಹವರಿಗೆ ಜಿಲ್ಲೆಗೆ ಪ್ರವೇಶ ಮಾಡಲು ಅವಕಾಶವೇ ನೀಡಬಾರದು. ಭಾನುವಾರ ನಡೆದ ಕನಕ ನಡೆ ಕಾರ್ಯಕ್ರಮಕ್ಕೆ ಸರಕಾರ ಜಿಲ್ಲಾಡಳಿತ ಯಾವುದೇ ರೀತಿಯ ಪರವಾನಿಗೆಯನ್ನು ನೀಡಿಲ್ಲ ಒಪ್ಪಿಗೆ ನೀಡದಿದ್ದರೂ ರಾಜಾಂಗಣದಲ್ಲಿ ಸಭೆ ಮಾಡುವುದಾಗಿ ಹೇಳಿ ಬದಲಾಗಿ ಕನಕನ ಮೂರ್ತಿಗೆ ಮಾಲಾರ್ಪಣೆ ಮಾಡಿ ರಥಬೀದಿಯಲ್ಲಿ ಮೆರವಣಿಗೆ ನಡೆಸಿ ಪಾರ್ಕಿಂಗ್ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ್ದಾರೆ ಆದರೆ ಸ್ವಚ್ಚಾತಾ ಕಾರ್ಯಕ್ರಮಕ್ಕೂ ಕೂಡ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ ಇವರು ಕಾನೂನಿನ ಉಲ್ಲಘನೆ ಮಾಡಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕು. ಬೇಸರದ ವಿಷಯವೆಂದರೆ ಕಾನೂನು ಉಲ್ಲಂಘನೆ ಮಾಡಿ ನಡೆಯುತ್ತಿರುವ ಸ್ವಚ್ಚತಾ ಕಾರ್ಯಕ್ರಮವನ್ನು ಪೇಜಾವರ ಸ್ವಾಮೀಜಿಗಳು ಉದ್ಘಾಟನೆ ಮಾಡಿದ್ದಾರೆ ಜನರ ಮನಸ್ಸಿಗೆ ನೋವು ಉಂಟು ಮಾಡಿದ್ದಾರೆ. ಎಲ್ಲರಿಗೂ ಒಂದೇ ನ್ಯಾಯ ಒದಗಿಸುವ ಬದಲು ಒಂದು ವರ್ಗಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ಪೇಜಾವರ ಶ್ರೀಗಳು ದಲಿತರ ಅಶ್ಪಶ್ರ್ಯತೆಯ ಆಚರಣೆ ಒಂದು ರೀತಿಯಲ್ಲಿ ಪೇಜಾವರ ಶ್ರೀಗಳು ನಾಂದಿ ಹಾಡಿದ್ದಾರೆ. ನಮಗೂ ಕೂಡ ಕನಕ ಮೂರ್ತಿಗೆ ಮಾಲೆ ಹಾಕಲು ಅವಕಾಶ ಕೇಳಿದ್ದು ಎಸ್ಪಿಯವುರು ಅವಕಾಶ ನೀಡಿಲ್ಲ ಅಧರೂ ನಾವು ಅವರ ಮಾತಿಗೆ ಬೆಲೆ ನೀಡುತ್ತೇವೆ. ದಲಿತರಿಗೆ ಅವಮಾನ ಮಾಡಿದ ಸೂಲಿಬೇಲೆ ಮೇಲೆ ದಲಿತ ದೌರ್ಜನ್ಯ ಕೇಸು ದಾಖಲಿಸಬೇಕು. ಪೇಜಾವರ ಸ್ವಾಮೀಜಿಗಳು ತಮ್ಮ ಅಷ್ಟ ಮಠದ ಒಳಗಿನ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಬೇಡವಾದ ವಿಷಯಗಳಿಗೆ ಹೆಚ್ಚು ಮೂಗು ತೂರಿಸುವುದನ್ನು ನಿಲ್ಲಿಸಬೇಕು. ಅಲ್ಲದೆ ಇಂದಿನ ಕಾರ್ಯಕ್ರಮದಲ್ಲಿ ಐದು ಮಂದಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಿದ್ದು ಅದರಲ್ಲಿ ಇಬ್ಬರು ಮಾತ್ರ ಪೌರಕಾರ್ಮಿಕರಾಗಿದ್ದು ಉಳಿದ ಮೂವರು ಬಾಲ ಕಾರ್ಮಿಕರಂತೆ ತೋರುತ್ತಿದ್ದು ಅದರ ಬಗ್ಗೆ ಪೋಲಿಸ್ ಇಲಾಖೆ ಸೂಕ್ತವಾಗಿ ಪರೀಶೀಲಿಸಿ ನಿಜವಾಗಿ ಅವರು ಬಾಲಕಾರ್ಮಿಕರಾಗಿದ್ದರೆ ಯುವ ಬ್ರಗೆಡ್ ವಿರುದ್ದ ಬಾಲಕಾರ್ಮಿಕ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಲಿತರ ಅಹವಾಲುಗಳಿಗೆ ಉತ್ತರ ನೀಡಿದ ಎಸ್ಪಿ ಬಾಲಕೃಷ್ಣ ಅವರು ಇಂದು ನಡೆದ ಕಾರ್ಯಕ್ರಮದ ಸಂಪೂರ್ಣ ವೀಡಿಯೋ ಚಿತ್ರೀಕರಣವನ್ನು 17 ಕ್ಯಾಮಾರಾಗಳ ಮೂಲಕ ನಡೆಸಲಾಗಿದ್ದು, ಬೆಳಿಗ್ಗೆ 6 ಗಂಟೆಯಿಂದ ಚಿತ್ರಿಕರಣ ನಡೆಸಲಾಗಿದೆ. ವೀಡಿಯೋ ಚಿತ್ರೀಕರಣದ ಮಾಹಿತಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ಕಾರ್ಯಕ್ರಮಕ್ಕೆ ಅನುಮತಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದು ಅವರ ಆದೇಶದ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.


Spread the love

Exit mobile version