ಮುದರಂಗಡಿ: ರಸ್ತೆಗೆ ಅಡ್ಡಲಾಗಿ ಅಳವಡಿಸಲಾದ ಅನಧಿಕೃತ ಗೇಟ್ ತೆರವು

Spread the love

ಮುದರಂಗಡಿ: ರಸ್ತೆಗೆ ಅಡ್ಡಲಾಗಿ ಅಳವಡಿಸಲಾದ ಅನಧಿಕೃತ ಗೇಟ್ ತೆರವು

ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರು ಗ್ರಾಮದ ಶೇಡಿ ಎಂಬಲ್ಲಿ ಸಾರ್ವಜನಿಕ ಪೊರಂಬೋಕು ರಸ್ತೆಗೆ ಅಡ್ಡಲಾಗಿ ಅಳವಡಿಸಲಾದ ಅನಧಿಕೃತ ಗೇಟ್ ಅನ್ನು ಹಿರಿಯ ನಾಗರಿಕರಾದ ಶ್ರೀಮತಿ ಫಿಲೋಮಿನಾ ಮಥಾಯಾಸ್ ಇವರು ನೀಡಿದ ದೂರಿನ ಅನ್ವಯ ಇಂದು ಕಾಪು ತಹಶೀಲ್ದಾರ್ ಪ್ರತಿಭಾ, ಗ್ರಾಮ ಆಡಳಿತ ಅಧಿಕಾರಿ ಅರುಣ್ ಕುಮಾರ್ ಬಿಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತು ಇವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೂರುದಾರರ ಪರ ನ್ಯಾಯವಾದಿ ಎಸ್.ಪಿ.ಬರ್ಬೋಜ, ಮುದರಂಗಡಿ ಗ್ರಾ.ಪಂ. ಅಧ್ಯಕ್ಷರಾದ ಕು. ನಮಿತಾ, ಸದಸ್ಯರಾದ ಡೇವಿಡ್ ಡಿಸೋಜ, ಶಿವರಾಮ ಭಂಡಾರಿ, ರವೀಂದ್ರ ಪ್ರಭು, ತಾಲೂಕು ಭೂಮಾಪಕರು, ದೂರುದಾರರಾದ  ಫಿಲೋಮಿನಾ ಮಥಾಯಾಸ್, ಗ್ರಾಮ ಸಹಾಯಕ ದೇವದಾಸ್ ಪ್ರಭು, ಪೋಲಿಸ್ ಸಿಬ್ಬಂದಿ ರುದ್ರೇಶ್ , ಸ್ಥಳೀಯರಾದ ಮಾರಿಯೋ ಬರ್ಬೋಜ ಹಾಗೂ ಇನ್ನಿತರರು ಹಾಜರಿದ್ದರು.


Spread the love
1 Comment
Inline Feedbacks
View all comments
Savio abhimani
5 months ago

gate yer pad’dini?