ಮುಲ್ಕಿ : 24 ವರ್ಷಗಳ ಹಿಂದಿನ ಪ್ರಕರಣದ ಆರೋಪಿಯ ಸೆರೆ
ಮಂಗಳೂರು: ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಶ್ರಮ ಪ್ರವೇಶ, ಸೊತ್ತು ನಾಶ ಮತ್ತು ಜೀವ ಬೆದರಿಕೆ ಪ್ರಕರಣವೊಂದರಲ್ಲಿ ಭಾಗಿಯಾಗಿ 24 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವ ಆರೋಪಿಯನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಂಧಿತ ಆರೋಪಿಯನ್ನು ಮುಲ್ಕಿ ತಾಲೂಕು ಕಿಲ್ಪಾಡಿ ನಿವಾಸಿ ಕಿಶೋರ್ ಕುಮಾರ್ (58) ಎಂದು ಗುರುತಿಸಲಾಗಿದೆ
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿನ ವಾಸಿ ಸುಧಾಕರ ಭಂಡಾರಿ ಎಂಬವರು ದಿನಾಂಕ:22-03-2000 ರಂದು ಮುಲ್ಕಿ ಠಾಣೆಗೆ ಹಾಜರಾಗಿ ತನ್ನ ಜಾಗದ ಮರಗಳನ್ನು ಕಿಲ್ಪಾಡಿ ಗ್ರಾಮದ ನಿವಾಸಿಗಳಾದ ಆಶೋಕ ಮತ್ತು ಕಿಶೋರ್ ಕುಮಾರ್ ಎಂಬವರು ಅಕ್ರಮ ಪ್ರವೇಶ ಮಾಡಿ ಕಡಿದು ನಾಶ ಮಾಡಿದ ಬಗ್ಗೆ ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿ ಸದ್ರಿ ಪ್ರಕರಣವು ಮೂಡಬಿದ್ರೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು, ಸದ್ರಿ ಪ್ರಕರಣದ ಆರೋಪಿಯಾದ ಕಿಶೋರ್ ಕುಮಾರ್ ಎಂಬಾತನು 24 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು ಈ ಬಗ್ಗೆ ನ್ಯಾಯಾಲಯವು ಆರೋಪಿಯ ವಿರುದ್ಧ ಎಲ್.ಪಿ.ಸಿ. ವಾರೆಂಟ್ ಹೊರಡಿಸಿರುತ್ತದೆ.
ದಿನಾಂಕ:03-01-2025 ರಂದು ಈ ಪ್ರಕರಣದ ಆರೋಪಿಯಾದ ಕಿಶೋರ್ ಕುಮಾರ್ ಎಂಬಾತನ ಬಗ್ಗೆ ಮುಲ್ಕಿ ರಾಣಾ ಪಿ.ಎಸ್.ಎ. ಅನಿತಾ ಹೆಚ್.ಬಿ. ಮತ್ತು ಪಿ.ಸಿ.2424 ನೇ ವಾಸುದೇವ, ಪಿ.ಸಿ.1054 ನೇ ಸಂದೀಫ್ ರವರು ಖಚಿತ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.