ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನ: ಮಹಿಳೆಯರಿಂದ ವಿಚಾರ ವಿನಿಮಯ
ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ದೇಶಾದ್ಯಂತ ಎ.23 ರಿಂದ ಮೇ 7 ರವರೆಗೆ ಹಮ್ಮಿಕೊಂಡಿರುವ ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನದ ಅಂಗವಾಗಿ ಮಹಿಳೆಯರಿಗಾಗಿ ವಿಚಾರ ವಿನಿಮಯ ಕಾರ್ಯಕ್ರಮವನ್ನು ಹಿದಾಯತ್ ಸೆಂಟರ್‍ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ, ಇಂದು ಮುಸ್ಲಿಮರ ಪರ್ಸನಲ್ ಲಾ ಬಗ್ಗೆ ಪೂರ್ವಾಗ್ರಹ ಪೀಡಿತ ಕೆಲವರು ತಲಾಕ್ ನ ನೆಪದಲ್ಲಿ ಸಮಾಜದಲ್ಲಿ ತಪ್ಪು ಕಲ್ಪನೆಯನ್ನು ಪ್ರಚುರಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಸ್ಲಿಂ ಪರ್ಸನಲ್ ಲಾ ಬಗ್ಗೆ ಸರಿಯಾದ ಮಾಹಿತಿಯನ್ನು ಸಮುದಾಯದ ಹಾಗೂ ಸಮಾಜದ ಎಲ್ಲರಿಗೆ ತಲುಪಿಸಬೇಕಾದುದು ನಮ್ಮ ಕರ್ತವ್ಯವಾಗಿದೆ. ಇದು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ನಾಯಕಿಯರು, ವಕೀಲರು ಸೇರಿದಂತೆ ಮತ್ತಿತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಝೀನತ್ ಹಸನ್ ಸಮಾರೋಪ ನುಡಿಗಳನ್ನಾಡಿದರು. ಕಾರ್ಯಕ್ರಮದ ಸಂಚಾಲಕಿ ಶಮೀರಾ ಜಹಾನ್ ಪ್ರಸ್ತಾವನೆಗೈದರು. ಸಫಿಯಾ ಕಿರಾತ್ ಪಠಿಸಿದರು. ಲುಬ್ನಾ ಝಕೀಯ್ಯಾ ನಿರೂಪಿಸಿದರು. ಫೌಝಿಯಾ ಧನ್ಯವಾದವಿತ್ತರು.