Home Mangalorean News Kannada News ಮೂಡಬಿದರೆ: 6ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಆರಂಭ

ಮೂಡಬಿದರೆ: 6ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಆರಂಭ

Spread the love

ಮೂಡಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 6ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳವನ್ನು ಶನಿವಾರ ಯುವಜನ,ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಡಾ.ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಡಾ.ವಿ.ಎಸ್ ಆಚಾರ್ಯರವರ ನೆನಪಿಗಾಗಿ ನಿರ್ಮಿಸಿದ ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ಉದ್ಯೋಗ ಮೇಳ ನಡೆಯುತ್ತಿರುವುದು ಶ್ಲಾಘನೀಯ.  ಬೇರೆ ಬೇರೆ ಜಿಲ್ಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಠಿಯಿಂದ ಈ ಉದ್ಯೋಗಮೇಳಮನ್ನು ಆಯೋಜಿಸಲಾಗಿದೆ. ನಮ್ಮ ರಾಜ್ಯದಲ್ಲಿ ಅನೇಕ ಯುವ ಪ್ರತಿಭೆಗಳಿದ್ದು ಅವರೆಲ್ಲರೂ ಆಶಾವಾದಿಗಳಾಗಿರಬೇಕು. ಹೆಚ್ಚಿನ ಯುವಕರಿಗೆ ಉದ್ಯೋಗ ಸಿಕ್ಕು, ಬದುಕಿಗೆ ನೆಮ್ಮದಿ ದೊರಕಲಿ ಎಂದು ಶುಭ ಹಾರೈಸಿದರು.

alvas_udyogamela

ಎಲ್ಲವೂ ಸರಕಾರವೇ ಮಾಡಬೇಕು ಎನ್ನುವ ಕಾಲ ಇತ್ತು. ಆದರೆ ಇಂದು ಸಾರ್ವಜನಿಕ-ಖಾಸಗಿ ಕಾಲೇಜುಗಳ ಸಹಭಾಗಿತ್ವದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಎ.ಬಿ. ಅಬ್ರಾಹಿಂ ಹೇಳಿದರು.

ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಾ ಇವೆ, ಅದಕ್ಕಾಗಿ ಆಯೋಜಿಸಲಾದ ಈ ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಸಿಗಲಿಲ್ಲ ಎಂದು ಆತ್ಮಸ್ಥೈರ್ಯವನ್ನು ಕುಂಠಿತಗೊಳಿಸದೆ ತಮ್ಮ ಪ್ರಯತ್ನವನ್ನು ಮುಂದುವರೆಸಿ ಯಶಸ್ವಿಗೊಳ್ಳಬೇಕು ಎಂದು ರಾಜ್ಯದ ಸಂಸದ ನಳಿನ್ ಕುಮಾರ್ ಕಟೀಲ್ ಹಾರೈಸಿದರು.

ಸಮಾರಂಭದ ಸ್ವಾಗತ ಭಾಷಣ ಮಾಡಿದ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವರವರು ಅತ್ಯುತ್ತಮ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿದ್ದು ಕ್ರೀಡಾ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಸಿಕ್ಕಂತಾಗಿದೆ. ಆಳ್ವಾಸ್ ಪ್ರಗತಿ ಕೇವಲ ಎರಡು ದಿನದ ಕಾರ್ಯಕ್ರಮವಲ್ಲ. ಇಂದು-ನಾಳೆ ಉದ್ಯೋಗ ದೊರೆಯದವರು, ತಮ್ಮ ಸಂಪರ್ಕ ವಿವರವನ್ನು ಸರಿಯಾಗಿ ನೀಡಿದ್ದಲ್ಲಿ, ವರ್ಷಾದಾದ್ಯಂತ ನಡೆಯುವ  ಉದ್ಯೋಗ ಪ್ರಕ್ರಿಯೆ ವಿವರಗಳನ್ನು ನೀಡುವ ಹೆಜ್ಜೆಯನ್ನು ಇಟ್ಟಿದ್ದೇವೆ ಎಂದರು.

ಉಪನ್ಯಾಸಕಿ ದೀಪಾ ರತ್ನಾಕರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.


Spread the love

Exit mobile version