ಮೂಡಬಿದ್ರಿ: ಮಹಿಳೆಯ ಸರಗಳ್ಳತನ – ಆರೋಪಿ ಬಂಧನ

Spread the love

ಮೂಡಬಿದ್ರಿ: ಮಹಿಳೆಯ ಸರಗಳ್ಳತನ – ಆರೋಪಿ ಬಂಧನ

ಮೂಡಬಿದ್ರಿ: ವಯೋವೃದ್ಧ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಲವು ಬಾರಿ ಕಳ್ಳತನ ಹಾಗೂ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ಕಸವಿತ್ತಲ್ ಮನೆ ನಿವಾಸಿ ಸುರೇಶ್ @ಸಂತೋಷ (60) ಎಂದು ಗುರುತಿಸಲಾಗಿದೆ.

2024 ಆಗಸ್ಟ್ 5ರಂದು ಈ ಘಟನೆ ಮೂಡುಬಿದಿರೆ ಬಸ್ ನಿಲ್ದಾಣ ಪರಿಸರದಲ್ಲಿ ನಡೆದಿದೆ. ಸುಂದರಿ ಪೂಜಾರಿ (73 ವರ್ಷ) ರವರು ತನ್ನ ಮಗಳ ಮನೆಯಾದ ಅಶ್ವಥಪುರಕ್ಕೆ ಹೋಗಲು ನಾರಾವಿಯಿಂದ ಬಸ್ಸಿನಲ್ಲಿ ಹೊರಟು ಮದ್ಯಾಹ್ನ ಸುಮಾರು 2.30 ಗಂಟೆಗೆ ಮೂಡಬಿದ್ರೆಯ ಬಸ್ ಸ್ಯಾಂಡ್ ಗೆ ಬಂದು ಇಳಿದಿದ್ದರು.

ಹಣ್ಣು ತರಲೆಂದು ಸಮೀಪದ ಅಂಗಡಿಗೆ ಹೋಗಿದ್ದರು. ಅಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಸುಂದರಿ ಪೂಜಾರಿ ರವರ ಬಳಿಗೆ ಬಂದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ನೋಡಿ, ಪರಿಚಿತನಂತೆ ವರ್ತಿಸಿ ಇದೇ ರೀತಿಯ ಚಿನ್ನದ ಸರವನ್ನು ಮಾಡಿಸಬೇಕಿದೆ ಎಂದು ನಂಬಿಸಿ ಅವರಲ್ಲಿದ್ದ ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದರು.

ಚಿನ್ನದ ಸರ ಪಡೆದು ಹೋಗಿದ್ದ ವ್ಯಕ್ತಿ ವಾಪಸು ಬಾರದೇ ಮೋಸಕ್ಕೊಳಗಾಗಿರುವ ಕುರಿತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತು.

ಪ್ರಕರಣದ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ, ಮೂಡಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿದ ಪೊಲೀಸ್ ಠಾಣೆಗಳಲ್ಲಿ ವಂಚನೆ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಂಟ್ವಾಳ ತಾಲೂಕು ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ.

ವೃದ್ದೆಯನ್ನು ವಂಚನೆ ಮಾಡಿ ಪಡೆದ ಸುಮಾರು ಎರಡುವರೇ ಪವನ್ ತೂಕದ ಚಿನ್ನದ ಸರ ಮತ್ತು 2023 ನೇ ಇಸವಿಯ ನವಂಬರ್ ತಿಂಗಳಿನಲ್ಲಿ ಕಾರ್ಕಳ ತಾಲೂಕು ಕಸಬ, ಮನ್ನು ಗೋಪುರದ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯನ್ನು ವಂಚನೆ ಮಾಡಿ ಪಡೆದ ಸುಮಾರು ಒಂದುವರೇ ಪವನ್ ತೂಕದ ಹವಳ ಇರುವ ಚಿನ್ನದ ಸರವನ್ನು ಕೂಡ ಆರೋಪಿಯಿಂದ ಪೊಲೀಸರು ಸ್ವಾಧಿನಪಡಿಸಿದ್ದಾರೆ.

ಆರೋಪಿಯಿಂದ ಒಟ್ಟು 36 ಗ್ರಾಂ ತೂಕದ 2 ಚಿನ್ನದ ಸರಗಳ ಅಂದಾಜು 2,50,000 ರೂ ಮೌಲ್ಯದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.

ಪುತ್ತೂರು ಟೌನ್ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಸುರೇಶ್ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ, ಇದರಿಂದಾಗಿ ಅವನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, DCP ಸಿದ್ದಾರ್ಥ ಗೊಯಲ್ IPS (ಕಾ&ಸು), ದಿನೇಶ್ ಕುಮಾರ್ DCP (ಅ& ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಕೃಷ್ಣಪ್ಪ ಪೊಲೀಸ್ ಉಪ ನಿರೀಕ್ಷಕರು ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.


Spread the love