ಮೂಡಬಿದ್ರೆಯಲ್ಲಿ ಮೊಳಗಿದ ಕಂಬಳ ಪರ ಹಕ್ಕೊತ್ತಾಯದ ಕಹಳೆ
ಮೂಡಬಿದ್ರೆ: ಕರಾವಳಿಯ ಜಾನಪದ ಕ್ರೀಡೆ ಕಂಬಳ ಪರ ಹೋರಾಟ ಪ್ರಬಲಗೊಳ್ಳುತ್ತಿದ್ದು ಶನಿವಾರ ಮೂಡಬಿದರೆಯಲ್ಲಿ ಕಂಬಳ ನಿಷೇಧದ ವಿರುದ್ದ ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಕೆ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಹಕ್ಕೊತ್ತಾಯ ಮೆರವಣಿಗೆ ನಡೆಯಿತು.
ನೂರಾರು ಕಂಬಳ ಕೋಣಗಳನ್ನು ರಸ್ತೆಗೆ ಇಳಿಸಿ, ಸಾವಿರಾರು ಕಂಬಳದ ಅಭಿಮಾನಿಗಳ ಸಹಭಾಗಿತ್ವದಲ್ಲಿ ಇಲ್ಲಿನ ಸ್ವರಾಜ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿತು.
ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ಅಮರನಾಥ್ ಶೆಟ್ಟಿ, ಕಾಂಗ್ರೆಸ್ ನಾಯಕ ಮಿಥುನ್ ರೈ, ಜೆಡಿಎಸ್ ನಾಯಕ ಅಕ್ಷಿತ್ ಸುವರ್ಣ, ಅಶ್ವಿನ್ ಪಿರೇರಾ, ಇತರರು ಭಾಗವಹಿಸಿ ಕಂಬಳ ನಿಷೇಧದ ವಿರುದ್ದ ಹಕ್ಕೊತ್ತಾಯ ಮಂಡಿಸಿದರು.
ತುಳು ಚಿತ್ರರಂಗ ಕೂಡ ಪ್ರತಿಭಟನೆಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.