Home Mangalorean News Kannada News ಮೂಡಿಗೆರೆ: ಪತ್ರಕರ್ತನ ಮೇಲೆ ಹಲ್ಲೆ ; ಪ್ರಕರಣ ದಾಖಲು

ಮೂಡಿಗೆರೆ: ಪತ್ರಕರ್ತನ ಮೇಲೆ ಹಲ್ಲೆ ; ಪ್ರಕರಣ ದಾಖಲು

Spread the love

ಮೂಡಿಗೆರೆ: ಪತ್ರಕರ್ತನ ಮೇಲೆ ಹಲ್ಲೆ ; ಪ್ರಕರಣ ದಾಖಲು

ಮೂಡಿಗೆರೆ: ಪಟ್ಟಣದ ಜೆ.ಎಸ್ ಶಾಲೆಯ ಆಡಳಿತ ಮಂಡಳಿಯ ಸದಸ್ಯನೋರ್ವ ಪತ್ರಿಕೆಯೊಂದರ ವರದಿಗಾರನ ಮನೆಗೆ ನುಗ್ಗಿ ವರದಿಗಾರನ ಮೇಲೆ ಹಲ್ಲೆ ನಡೆಸಿ ಲ್ಯಾಪ್ ಟಾಪ್ ಧ್ವಂಸ ಗೊಳಿಸಿ, ಪತ್ರಕರ್ತನ ಪತ್ನಿಗೆ ಕೊಲೆ ಬೆದರಿಕೆ ಓಡ್ಡಿರುವ ಪ್ರಕರಣ ಪಟ್ಟಣದಲ್ಲಿ ನಡೆದಿದೆ.

ಪ್ರತಿನಿಧಿ ದಿನ ಪತ್ರಿಕೆಯ ವರದಿಗಾರ ಮನ್ಸೂರ್ ಹೆಚ್.ಆರ್. ಎಂಬುವವರು ಜಮ್ಮುವಿನ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದು, ಈ ಸಂದರ್ಭದಲ್ಲಿ ಜೆ.ಎಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಈ ಕುರಿತಂತೆ “ದೇಶವೇ ಶೋಕಾಚರಣೆಯಲ್ಲಿರುವಾಗ ಇವರಿಗೆ ಸಂಭ್ರಮಾಚರಣೆ ಬೇಕಿತ್ತೇ” ಎಂಬ ವರದಿಯನ್ನು ಮಾಡಿದ್ದರು. ಇದರಿಂದ ಕುಪಿತಗೊಂಡ ಜೆಎಸ್ ಶಾಲಾ ಆಡಳಿತಮಂಡಳಿ ಸದಸ್ಯ ಅಮಾದ್ ಎಂಬುವವರು ಫೆ.20 ರ ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಪತ್ರಕರ್ತ ಮನ್ಸೂರ್ ಅವರ ಮನೆಗೆ ತೆರಳಿ ಏಕಾ ಏಕಿ ಮನೆಯ ಬಾಗಿಲನ್ನು ಒದ್ದು ಅಕ್ರಮವಾಗಿ ಒಳಗೆ ಪ್ರವೇಶಿಸಿ ಕೈಗೆ ಸಿಕ್ಕಿದ್ದ ಲ್ಯಾಪ್ ಟಾಪ್ ಅನ್ನು ಪುಡಿ ಪುಡಿ ಮಾಡಿದ್ದು, ಇದನ್ನು ಮನ್ಸೂರ್ ಅವರು ಪ್ರಶ್ನಿಸಿದಕ್ಕೆ ಅಮಾದ್ ಅವರು ಆವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ತಡೆಯಲು ಬಂದ ಮನ್ಸೂರ್ ಅವರ ಪತ್ನಿಗೆ ಬೆದರಿಕೆ ಒಡ್ಡಿ ನಂತರ ಇಬ್ಬರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರನಡೆದಿರುತ್ತಾರೆ.

ಹಲ್ಲೆಯಿಂದ ಝರ್ಜರಿತಗೊಂಡ ಪತ್ರಕರ್ತ ಮನ್ಸೂರು ಮೂಡಿಗೆರೆ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಜೆಎಸ್ ಶಾಲಾ ಆಡಳಿತ ಮಂಡಳಿ ಸದಸ್ಯ ಅಮಾದ್ ನಾಪತ್ತೆಯಾಗಿದ್ದು ಪೊಲೀಸರು ಶೋಧಕಾರ್ಯದಲ್ಲಿ ತೊಡಗಿದ್ದಾರೆ.


Spread the love

Exit mobile version