ಮೂಡುಗಿಳಿಯಾರು ಯೋಗಬನದಲ್ಲಿ ಲೋಕ ಕಲ್ಯಾಣಾರ್ಥವಾಗಿ 32ನೇ ವಿಶಿಷ್ಟ ವಿಶ್ವ ಮಂಗಳ ಹೋಮ
ಕೋಟ: ಸ್ವಾಮಿ ವಿವೇಕಾನಂದರ ದಿವ್ಯಲೀಲಾ ಕ್ಷೇತ್ರವಾದ ಡಿವೈನ್ ಪಾರ್ಕ್ ನೇತೃತ್ವದಲ್ಲಿ ಭಾನುವಾರ ಮುಂಜಾನೆ 3 ಗಂಟೆಯಿಂದ 7 ಗಂಟೆಯ ತನಕ ಲೋಕ ಕಲ್ಯಾಣಾರ್ಥವಾಗಿ ವಿಶಿಷ್ಟ ವಿಶ್ವ ಮಂಗಳ ಹೋಮ ಕೋಟ ಮೂಡುಗಿಳಿಯಾರು ಯೋಗಬನದಲ್ಲಿ ನಡೆಯಿತು. ರಾಜ್ಯದ ಬಹುತೇಕ ಜಿಲ್ಲೆಗಳಿಂದ ಆಗಮಿಸಿದ ಅಸಂಖ್ಯಾತ ಭಕ್ತ ಗಡಣದ ಮೂಲಕ ವಿಶೇಷವಾಗಿ ಪ್ರಾರ್ಥಿಸಲಾಯಿತು.
ವಿಶಿಷ್ಟ ಹೋಮ: ಜಾತಿ, ಮತ, ಧರ್ಮ ಎಂಬ ಭೇದ ಭಾವವಿಲ್ಲದೇ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲಾ ವರ್ಗದ ಜನರು ಸೇರಿ ಒಂದೇ ವೇದಿಕೆಯಲ್ಲಿ ಒಂದೇ ಅಗ್ನಿ ಹೋಮ ಕುಂಡದಲ್ಲಿ ಸಾರ್ವಜನಿಕವಾಗಿ ಲೋಕ ಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥಿಸುವ ಪರಿಯೇ ಇಲ್ಲಿನ ವಿಶೇಷ. ಜಗತ್ತಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಲ್ಲ ದೇವದೇವಿಯರ ಮಂತ್ರೋಚ್ಚಾರದೊಂದಿಗೆ ಬೆಳಗಿನ ಜಾವ 3 ರಿಂದ 7ರ ತನಕ ವಿಶೇಷ ಅವಧಿಯಲ್ಲಿ ನೆರದ ಸಹಸ್ರಾರು ಭಕ್ತರ ಮಂತ್ರೋಚ್ಚರದೊಂದಿಗೆ ಈ ಹೋಮ ಕ್ರೀಯೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ತಮ್ಮ ಆಹುತಿ ಸರ್ಮಪಿಸಿ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಿಕೊಳ್ಳುತ್ತಾರೆ ಇದುವೇ ವಿಶಿಷ್ಟ ವಿಶ್ವ ಮಂಗಳ ಹೋಮ.
ಕೊರೊನಾ ವೈರಸ್ ನಿರ್ಮೂಲಕ್ಕಾಗಿ ವಿಶೇಷ ಪ್ರಾರ್ಥನೆ: ಪೂಜ್ಯನೀಯ ಡಾಕ್ಟರ್ ಜೀ ಗುರುಗಳ ಮುಂದಾಳತ್ವದಲ್ಲಿ ನಡೆಯುವ ಈ ವಿಶಿಷ್ಟ ಹೋಮದ ಮೂಲಕ ಜಗತ್ತೇ ಎದುರಿಸುತ್ತಿರುವ ಮಹಾ ಭಯನಕ ಕೊರೊನಾ ವೈರಸ್ ನಿರ್ಮೂಲಕ್ಕಾಗಿ ವಿಶೇಷವಾಗಿ ಭಕ್ತಿ ಹಾಗೂ ಶ್ರದ್ದೆಯಿಂದ ಭಾಗವಹಿಸಿ ಸಾಹಸ್ರಾರೂ ಭಕ್ತರು ಒಕ್ಕೊರಲಿನಿಂದ ಪ್ರಾರ್ಥಿಸಿದರು.
ಜೀವನದಲ್ಲಿ ಗುರು ಹಿರಿಯರಿಗೆ ದೇವರಿಗೆ ತಗ್ಗಿಬಗ್ಗಿದಾದ ಮಾತ್ರ ಜೀವನ ಪಾವನವಾಗುತ್ತದೆ. ಸಂಪೂರ್ಣ ಶರಣಗತಿಯೇ ಜೀವನದ ಯಶಸ್ಸು. ತಂದೆ ತಾಯಿಯೇ ಮೊದಲ ದೇವರು. ಇಂದು ಹೆತ್ತವರನ್ನು ಕಡೆಗಣಿಸುತ್ತಿರುವುದು ಸಮಾಜದ ಕನ್ನಡಿಗೆ ಶೋಭೆಯಲ್ಲ.
ಇಂದು ದೃಶ್ಯ ಮಾಧ್ಯಮದಲ್ಲಿ ಬೆಳ್ಳಂಬೆಳಿಗ್ಗೆ ನಕಲಿ ಜ್ಯೋತಿಷಿಗಳು ಹಾಗೂ ಭವಿಷ್ಯವಾಣಿ ಹೇಳುವವರ ದಂಡಿನಿದ ಸಮಾಜದ ಸ್ವಾಸ್ಥ್ಯ ಹಾಳುಗಾತ್ತಿದೆ. ಕೊರೊನಾ ವೈರಸ್ ಇಂದು ಜಗತ್ತಿನ ನಿದ್ದೆಗೆಡಿಸಿದೆ. ಇತಂಹವರೂ ಈಗ ಈ ವಿಷಯದ ಬಗ್ಗೆ ತಮ್ಮ ಶಕ್ತಿ ಪ್ರದರ್ಶನ ಮಾಡಲಿ. ಇಂದು ಯಾವ ವಿಜ್ಞಾನವು ಮಾಡದ ಕೆಲಸ ಆಧ್ಯಾತ್ಮಿಕ ಶಕ್ತಿಯಿಂದ ಆಗುತ್ತಿದೆ. ಈ ನಿಟ್ಟಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಈ ವಿಶಿಷ್ಟ ವಿಶ್ವಮಂಗಲ ಹೋಮ ಸಾರ್ವತ್ರಿಕವಾಗಿ ಸಂತೋಷದಿಂದ ಸದ್ಭಕ್ತರು ಒಟ್ಟಾಗಿ ಒಕ್ಕೊರಲಿನಿಂದ ಒಳಿತಾಗಲಿ ಎಂದು ಬೇಡುವ ಈ ಪ್ರಾರ್ಥನೆಗೆ ವಿಶೇಷ ಶಕ್ತಿ ಇದೆ. ಇದರಿಂದ ವಿಶ್ವಕ್ಕೆ ಒಳಿತಾಗಬೇಕು. ಎಲ್ಲರೂ ಆನಂದದಿಂದ ಆರೋಗ್ಯವಂತರಾಗಿ ನಲಿಯಬೇಕು ಎಂಬುಂದೇ ಈ ವಿಶಿಷ್ಟ ಕಾರ್ಯಕ್ರಮದ ಉದ್ದೇಶ ಎಂದು ಡಿವೈನ್ ಪಾರ್ಕ್ ಸಾಲಿಗ್ರಾಮ ಇದರ ಆಡಳಿತ ನಿರ್ದೇಶಕರಾದ ಡಾ|ಚಂದ್ರಶೇಖರ್ ಉಡುಪ ಹೇಳಿದರು.
ಯೋಗ ಬನದಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮ ಅವಿಸ್ಮರಣೀಯ. ಮಾ.15ರಂದು ನಡೆಯುವ ಪರಮ ಪೂಜ್ಯ ಡಾಕ್ಟರ್ ಜೀಯವರ ಹುಟ್ಟು ಹಬ್ಬದ ದಿನದಂದೇ ಇನ್ನು ಮುಂದೆ ಪ್ರತಿ ವರ್ಷವೂ ಇದೇ ಸ್ಥಳದಲ್ಲಿ ಈ ಹೋಮ ನಡೆಯಲು ತೀರ್ಮಾನಿಸಲಾಗಿದೆ. ಈ ವಿಶಿಷ್ಟ ಹೋಮದಿಂದ ಈ ಪರಿಸರ ಶಕ್ತಿ ತಾಣವಾಗಿ ಬೆಳೆಯುತ್ತದೆ ಎಂದು ಎಸ್ಎಚ್ಆರ್ಎಫ್, ಆಡಳಿತ ನಿರ್ದೇಶಕರಾದ ಡಾ|ವಿವೇಕ್ ಉಡುಪಿ ಹೇಳಿದರು.