ಮೂಡುಶೆಡ್ಡೆ ದನಕಳ್ಳತನ ಪ್ರಕರಣ ಮತ್ತೋರ್ವನ ಬಂಧನ

Spread the love

ಮೂಡುಶೆಡ್ಡೆ ದನಕಳ್ಳತನ ಪ್ರಕರಣ ಮತ್ತೋರ್ವನ ಬಂಧನ

ಮಂಗಳೂರು : ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲು ಎಂಬಲ್ಲಿನ ಮನೆಯ ಹಟ್ಟಿಯಿಂದ ಎರಡು ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಬಜ್ಪೆ ಕೊಲ್ಚಾರ್ ನಿವಾಸಿ ನಿಸಾರುದ್ದೀನ್ @ ನಿಸಾರ್ @ ಪಾರಿವಾಳ ನಿಸಾರ್ (23) ಎಂದು ಗುರುತಿಸಲಾಗಿದೆ.

ಜುಲೈ 16-17 ರಂದು ಬೆಳಿಗ್ಗಿನ ಜಾವ 03-30 ಗಂಟೆ ಸುಮಾರಿಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲು ಎಂಬಲ್ಲಿನ ನಿವಾಸಿ ಪುರುಷೋತ್ತಮ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ ದನಗಳನ್ನು ಬಿಳಿ ಬಣ್ಣದ ಟಾಟಾ ಸುಮೋದಲ್ಲಿ ಬಂದ ದನಕಳ್ಳರು ಮನೆಯವರನ್ನು ಹೆದರಿಸಿ 2 ದನಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಇಮ್ರಾನ್ @ ಕುಟ್ಟ ಇಮ್ರಾನ್ ಮತ್ತು ಉಮ್ಮರ್ ಫಾರೂಕ್ ಎಂಬವರನ್ನು ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಅವರಿಂದ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಬಜ್ಪೆ ಕೊಲ್ಚಾರ್ ನಿವಾಸಿ ನಿಸಾರುದ್ದೀನ್ @ ನಿಸಾರ್ @ ಪಾರಿವಾಳ ನಿಸಾರ್ (23) ಎಂಬಾತನನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಈತನು ಮಂಗಳೂರು ನಗರದ ಮೂಡುಶೆಡ್ಡೆ ಬೈಲು ಎಂಬಲ್ಲಿನ ಹಟ್ಟಿಯೊಂದರಿಂದ 2 ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ಈತನ ವಿರುದ್ಧ ಈ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕಳವು, ಮನೆ ಕಳ್ಳತನ ಹಾಗೂ ದನ ಕಳ್ಳತನ ಹೀಗೆ ಒಟ್ಟು 4 ಪ್ರಕರಣಗಳು ದಾಖಲಾಗಿರುತ್ತದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಯವರಾದ ಶ್ಯಾಮ್ ಸುಂದರ್ ಹೆಚ್ ಎಂ ಮತ್ತು ಹೆಚ್.ಡಿ ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love