ಮೂರು ಜೋಡಿಗಳಿಗೆ ಸಾಮೂಹಿಕ ವಿವಾಹ: ಕಾಪು ಉಸ್ತಾದರಿಗೆ ಸನ್ಮಾನ
ಕಾಪು: ಪೊಲಿಪು ಖುವ್ವತುಲ್ ಇಸ್ಲಾಮ್ ಯಂಗ್ಮೆನ್ಸ್ ಅಸೋಸಿ ಯೇಶನ್ ಇದರ 30ನೆ ವಾರ್ಷಿಕೋತ್ಸವದ ಸಮಾರೋಪ ಹಾಗೂ ಮೂರು ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪೊಲಿಪು ಜಾಮೀಯ ಮಸೀದಿಯ ವಠಾರದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಪೊಲಿಪು ಮಸೀದಿಯಲ್ಲಿ 50ವರ್ಷಗಳ ಕಾಲ ಸೇವೆ ಸಲ್ಲಿಸಿದ ಜಿಲ್ಲೆಯ ಹಿರಿಯ ಉಸ್ತಾದ್ ಪಿ.ಬಿ.ಅಹಮದ್ ಮುಸ್ಲಿಯಾರ್ ಕಾಪು ಅವರನ್ನು ಸನ್ಮಾನಿಸಲಾಯಿತು. ಬೊಳ್ಳೂರು ಜುಮಾ ಮಸೀದಿಯ ಖತೀಬ್ ಮುಹ್ಮಮದ್ ಅರಹರ್ ಫೈಝಿ ಬೊಳ್ಳೂರು ದುವಾ ನೆರವೇರಿಸಿದರು.
ನಿಖಾಃ ನೇತೃತ್ವವನ್ನು ಕಾಜೂರು ತಂಙಳ್ ವಹಿಸಿದ್ದರು. ಪೂಂಜಾಲಕಟ್ಟೆ ಉಸ್ತಾದ್ ಪಿ.ಮುಹಮ್ಮದ್ ಬಾಖವಿ ಪೂಂಜಾಲಕಟ್ಟೆ ಆಶೀರ್ವಚನ ನೀಡಿ ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಕ್ರಮ್ ಗುಡ್ವಿಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಳಕೆ ಜುಮಾ ಮಸೀದಿಯ ಮುದರ್ರಿಸ್ ಬದ್ರುದ್ದೀನ್ ಅಹ್ಸನಿ, ಕಾಪು ಸದರ್ ಮುಅಲ್ಲಿಂ ಅಬ್ದುರ್ರಝಾಕ್ ಖಾಸಿಮಿ, ಕೊಂಬಗುಡ್ಡೆ ಗೌಸಿಯಾ ಜುಮಾ ಮಸೀದಿಯ ಖತೀಬ್ ಮೌಲಾನ ಅಬ್ದುಲ್ ಹಕೀಂ, ಮೂಳೂರು ಅಲ್ಇಹ್ಸಾನ್ ವ್ಯವಸ್ಥಾಪಕ ಮುಸ್ತಫಾ ಸಅದಿ, ಪೊಲಿಪು ಮಸೀದಿ ಅಧ್ಯಕ್ಷ ಕೆ.ಎಸ್.ಅಬ್ಬಾಸ್, ಸಂಸ್ಥೆಯ ಸ್ಥಾಪಕಾಧ್ಯಕ್ಷ ಕಾಪಿಕಾಡ್ ಹಸನಬ್ಬ, ಉಪಾಧ್ಯಕ್ಷ ಅಶ್ರಫ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಎಸ್ಡಿಪಿಐ ಕಾಪು ವಲಯ ಕೌನ್ಸಿಲರ್ ಸದಸ್ಯ ನಝೀರ್ ಅಹ್ಮದ್, ದಂಡತೀರ್ಥ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೋಡಿಗ್ರಸ್, ಕಾಂಗ್ರೆಸ್ ಕಾಪು ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಎಚ್.ಅಬ್ದುಲ್ಲಾ, ಪುರಸಭೆ ಸದಸ್ಯ ಸುರೇಶ್ ದೇವಾಡಿಗ, ಕಾಪು ಮಹಾಜನ ಮಿತ್ರ ಸಂಘದ ಅಧ್ಯಕ್ಷ ಎಚ್.ಮುಹಮ್ಮದ್, ಉದ್ಯಮಿ ಸಾಧಿಕ್ ಸಾಹಿಲ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ರಬಬ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶಬ್ಬೀರ್ ವರದಿ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಆರೀಫ್ ಕಲ್ಯ ವಂದಿಸಿದರು. ಮೊಯ್ದಿನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.