Spread the love
ಮೂಲರಪಟ್ನ: ವಾಹನ ಸಂಚಾರ ನಿಷೇಧ
ಮ0ಗಳೂರು : ಮಂಗಳೂರು ತಾಲೂಕಿನ ಲೋಕೋಪಯೋಗಿ ಇಲಾಖೆಯ ಎಡಪದವು-ಕುಪ್ಪೆಪದವು-ಆರ್ಲ-ಸೊರ್ನಾಡು ಜಿಲ್ಲಾ ಮುಖ್ಯ ರಸ್ತೆಯ ಕಿ.ಮಿ. 7.40ರಲ್ಲಿ ಸೇತುವೆ ಕುಸಿದು ಬಿದ್ದಿರುವುದರಿಂದ ಸದರಿ ರಸ್ತೆ ಮೂಲಕ ಮಂಗಳೂರು ತಾಲೂಕು ಹಾಗೂ ಬಂಟ್ವಾಳ ತಾಲೂಕಿಗೆ ಸಂಪರ್ಕವು ಕಡಿತಗೊಂಡಿರುವುದರಿಂದ ವಾಹನ ಸಂಚಾರ ಅಥವಾ ಮಾನವ ಸಂಚಾರ ಸಾಧ್ಯವಿರುವುದಿಲ್ಲ ಈ ಅಂಶಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಎಸ್.ಸಸಿಕಾಂತ್ ಸೆಂಥಿಲ್ ಅವರು ಮುಂದಿನ ಆದೇಶದವರೆಗೆ ಎಡಪದವು-ಕುಪ್ಪೆಪದವು-ಆರ್ಲ-ಸೊರ್ನಾಡು ಜಿಲ್ಲಾ ಮುಖ್ಯ ರಸ್ತೆಯ ಮೂಲರಪಟ್ನ ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿಷೇಧಿಸಿ ಆದೇಶಿಸಿದ್ದಾರೆ. ಈ ನಿಷೇಧಿತ ಅವಧಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಈ ಕೆಳಗಿನಂತೆ ನಿರ್ದೇಶಿಸಿದ್ದಾರೆ.
ಗುರುಪುರದಿಂದ ಆರ್ಲ-ಸೊರ್ನಾಡುಗಳಿಗೆ ಹೋಗುವ ವಾಹನಗಳು ಮಂಗಳೂರು ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಬಂಗ್ಲೆಗುಡ್ಡೆ(ಗುರುಪುರ ಕೈಕಂಬ ಮಧ್ಯೆ) ಎಂಬಲ್ಲಿಂದ ಪೊಳಲಿ ದ್ವಾರದ ಮೂಲಕ ಪೊಳಲಿ ರಸ್ತೆಯಲ್ಲಿ ಬಡಗಬೆಳ್ಳೂರುವರೆಗೆ ಸಾಗಿ ಸಂಚರಿಸಬೇಕು. ಸೊರ್ನಾಡು ಕಡೆಗೆ ಸಂಚರಿಸುವುದು.
ಗುರುಪುರದಿಂದ ಬಿ.ಸಿ. ರೋಡ್ ರಸ್ತೆಯಲ್ಲಿ ಹೋಗುವ ವಾಹನಗಳು ಮಂಗಳೂರು ಸೋಲ್ಲಾರ್ಪು ರಾಷ್ಟ್ರೀಯ ಹೆದ್ದಾರಿ ನಂ.169ರ ಬಂಗ್ಲೆಗುಡ್ಡೆ(ಗುರುಪುರ ಕೈಕಂಬ ಮಧ್ಯೆ) ಎಂಬಲ್ಲಿಂದ ಪೊಳಲಿ ದ್ವಾರದ ಮೂಲಕ ಪೊಳಲಿ ರಸ್ತೆಯಲ್ಲಿ ಅಮ್ಮುಂಜೆ ಮೂಲಕ ಬಿ.ಸಿ ರೋಡ್ ಬಂಟ್ವಾಳ ಕಡೆಗೆ ಸಂಚರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Spread the love