Home Mangalorean News Kannada News ಮೂಲ ಸೌಕರ್ಯ, ಪ್ರವಾಸೋದ್ಯಮ, ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಮೂಲ ಸೌಕರ್ಯ, ಪ್ರವಾಸೋದ್ಯಮ, ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Spread the love

ಮೂಲ ಸೌಕರ್ಯ, ಪ್ರವಾಸೋದ್ಯಮ, ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಸಮಗ್ರ ದಕ್ಷಿಣ ಕನ್ನಡ ಅಭಿವೃದ್ಧಿ ನನ್ನ ಬಹುದೊಡ್ಡ ಕನಸಾಗಿದ್ದು, ನಮ್ಮ ಯುವಕರಿಗೆ ಉದ್ಯೋಗ, ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಬೇಕಾದ ಎಲ್ಲ ರೀತಿಯ ವೇದಿಕೆ ನಿರ್ಮಾಣ ಮಾಡಲು ನಾನು ಕಟಿಬದ್ಧನಾಗಿದ್ದೇನೆಂದು ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದರು.

ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ, ಮುಲ್ಕಿ, ಮೂಡಬಿದರೆ ಮಂಡಲದ ತಮ್ಮ ಪ್ರವಾಸದ ನಾಲ್ಕನೇ ದಿನವನ್ನು ಪೊರ್ಕೋಡಿ ಶ್ರೀ ಸೋಮನಾಥೇಶ್ವರನ ಆಶೀರ್ವಾದದೊಂದಿಗೆ ಆರಂಭಿಸಿದ ಚೌಟ ಅವರನ್ನು ನೆರೆದಿದ್ದ ಕಾರ್ಯಕರ್ತರು ಸಂಭ್ರಮದಿಂದ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಉಮಾನಾಥ್‌ ಕೋಟ್ಯಾನ್‌ ಹಾಗೂ ಹಿರಿಯ ಕಾರ್ಯಕರ್ತರು ಭಾಗವಹಿಸಿದ್ದರು.

ಶಾಸಕರಾದ ಕೋಟ್ಯಾನ್‌ ಮಾತನಾಡುತ್ತ, ʼದೇಶ ಸೇವೆಸಲ್ಲಿಸಿ, ಇಂದು ಸಾರ್ವಜನಿಕ ಸೇವೆಗೆ ನಮ್ಮ ಕ್ಯಾಪ್ಟನ್‌ ಇಳಿದಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ. ಈ ಭಾಗದ ಜನರ ಕಷ್ಟ, ನೋವು-ನಲಿವುಗಳನ್ನು ಹತ್ತಿರದಿಂದ ಬಲ್ಲವರು. ಕನ್ನಡ, ತುಳು, ಇಂಗ್ಲೀಷ್‌, ಹಿಂದಿಯನ್ನು ಸುಲಲಿತವಾಗಿ ಮಾತನಾಡುವ ಇಂತಹ ಒಬ್ಬ ವಿದ್ಯಾವಂತ ನಮ್ಮನ್ನು ಅತ್ಯಂತ ಸಮರ್ಥವಾಗಿ ಲೋಕಸಭೆಯಲ್ಲಿ ಪ್ರತಿನಿಧಿಸಬಲ್ಲರುʼ ಎಂದರು. ನಂತರ, ಬಜಪೆ, ಪೆರ್ಮುದೆ ಹಾಗೂ ಎಕ್ಕಾರು ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರನ್ನು ಭೇಟಿ ಮಾಡಿ ಸಭೆಯಲ್ಲಿ ಪಾಲ್ಗೊಂಡರು. ಜೊತೆಗೆ, ಶ್ರೀ ಚೆನ್ನಮಲ್ಲಿಕಾರ್ಜುನ ಧರ್ಮಸಂಸ್ಥಾ ಮಠ, ಯಜ್ಞಾಶ್ರಮಕ್ಕೆ ಭೇಟಿ ನೀಡಿದಾಗ, ಮಹಿಳೆಯರು, ಕಾರ್ಯಕರ್ತರು ಸಂಭ್ರಮದಿಂದಲೇ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಹಾಗೂ ಮುಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ, ಆಶೀರ್ವಾದ ಪಡೆದರು. ಮೂಡುಬಿದಿರೆಯ ಜೈನಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಆಶೀರ್ವಾದ ಪಡೆದು, ಶಿರ್ತಾಡಿ, ಮಂಡಲದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು. ಬಳಿಕ ಅಲಂಗಾರು, ಕೊಡ್ಯಡ್ಕ, ಪುತ್ತಿಗೆ, ಮೂಡುಬಿದಿರೆ ವೆಂಕಟರಮಣ ದೇವಸ್ಥಾನ, ಹನುಮಾನ್ ದೇವಸ್ಥಾನ ಸೇರಿದಂತೆ ಮೂಡುಬಿದಿರೆ ಆಸುಪಾಸಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಇದೇ ಸಂದರ್ಭ ಕಿನ್ನಿಗೋಳಿಯ ಸುಖಾನಂದ ಶೆಟ್ಟಿ ವೃತ್ತದಲ್ಲಿ ಹಿಂದುತ್ವಕ್ಕಾಗಿ ಪರಮೋಚ್ಚ ಬಲಿದಾನ ಮಾಡಿದ ಸುಖಾನಂದ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.


Spread the love

Exit mobile version