Home Mangalorean News Kannada News ಮೃತ ಹಿಂದೂ ಬಡ ಮಹಿಳೆಯ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಪುತ್ತೂರಿನ ಮುಸ್ಲಿಂ ಯುವಕರು

ಮೃತ ಹಿಂದೂ ಬಡ ಮಹಿಳೆಯ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಪುತ್ತೂರಿನ ಮುಸ್ಲಿಂ ಯುವಕರು

Spread the love

ಮೃತ ಹಿಂದೂ ಬಡ ಮಹಿಳೆಯ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಪುತ್ತೂರಿನ ಮುಸ್ಲಿಂ ಯುವಕರು

ಮಂಗಳೂರು: ಸದಾ ಕೋಮು ಸಂಘರ್ಷಕ್ಕೆ ಹೆಸರಾಗಿ ಸೂಕ್ಷ್ಮ ವಲಯವೇಂದು ಬಿಂಬಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವೀಯತೆ ಮತ್ತು ಕೋಮು ಸೌಹಾರ್ದತೆ ಜೀವಂತವಿದೆ ಎಂದು ತೋರಿಸಿದ ಘಟನೆ ನಡೆದಿದ್ದು ಅಸಾಹಾಯಕ ಹಿಂದೂ ಮಹಿಳೆಯೋರ್ವಳ ಅಂತ್ಯಸಂಸ್ಕಾರ ನೆರವೇರಿಸುವುದರೊಂದಿಗೆ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ.

ಹುಟ್ಟುವಾಗ ಹಿಂದುವಾಗಿ ಹುಟ್ಟಿದ ಭವಾನಿಯವರು ತಾನು ಸತ್ತಾಗ ನನ್ನನ್ನು ಮುಸ್ಲಿಂ ಬಾಂದವರು ಅಂತ್ಯ ಸಂಸ್ಕಾರ ಮಾಡುತ್ತಾರೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಕೋಮು ದ್ವೇಷವೇ ತುಂಬಿರುವ ಈಗಿನ ಕಾಲದಲ್ಲಿ ಧರ್ಮಕ್ಕೂ ಮೀರಿ ಮಾನವೀಯತೆ ಮೆರೆದ ಘಟನೆಗೆ ಕಬಕ ಗ್ರಾಮದ ವಿದ್ಯಾಪುರ ಶನಿವಾರ ಸಾಕ್ಷಿಯಾಯಿತು.

ಪುತ್ತೂರು ತಾಲೂಕಿನ ಕಬಕ ವಿದ್ಯಾಪುರದ ಜನವಸತಿ ಕಾಲನಿಯಲ್ಲಿ ಭವಾನಿ ಎಂಬವರು ಮೃತಪಟ್ಟಿದ್ದರು. ಕಡು ಬಡವರಾಗಿರುವ ಭವಾನಿ ತನ್ನ ಸೋದರನ ಜೊತೆ ಜೀವನ ಸಾಗಿಸುತ್ತಿದ್ದರು. ಸಹೋದರಿಯ ಅಂತ್ಯ ಸಂಸ್ಕಾರ ಮಾಡಲು ಆಕೆಯ ಸಹೋದರ ತಯಾರಿರಲಿಲ್ಲ. ಸ್ಥಳೀಯರೂ ಸಹ ಅಂತ್ಯ ಸಂಸ್ಕಾರ ನಡೆಸಲು ಸಹಕರಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಬಗ್ಗೆ ಮಾಹಿತಿ ಪಡೆದ ಮುಸ್ಲಿಂ ಯುವಕರು ಒಟ್ಟಿಗೆ ಸೇರಿ ಹಣ ಸಂಗ್ರಹಿಸಿ ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ತಂದು ಅಂತಿಮ ವಿಧಿ ವಿಧಾನದ ನಂತರ ಶವವನ್ನು ಸ್ಮಶಾನಕ್ಕೆ ಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.


Spread the love
1 Comment
Inline Feedbacks
View all comments
drona
6 years ago

The Muslim brethern are to be commended for their act of kindness to the poor lasy who died without any one to cremate her. May Allah bless them immensely at this holy month of Ramzaan.

wpDiscuz
Exit mobile version