Home Mangalorean News Kannada News ಮೆಲ್ರಿಕ್ ಡಿಸೋಜಾ ಕೊಲೆ ಪ್ರಕರಣ – ಆರು ಆರೋಪಿಗಳ ಬಂಧನ

ಮೆಲ್ರಿಕ್ ಡಿಸೋಜಾ ಕೊಲೆ ಪ್ರಕರಣ – ಆರು ಆರೋಪಿಗಳ ಬಂಧನ

Spread the love

ಮೆಲ್ರಿಕ್ ಡಿಸೋಜಾ ಕೊಲೆ ಪ್ರಕರಣ – ಆರು ಆರೋಪಿಗಳ ಬಂಧನ

ಮಂಗಳೂರು: ರೌಡಿ ಶೀಟರ್ ಮೆಲ್ರಿಕ್ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧೀಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಗೋರಿಗುಡ್ಡೆ ನಿವಾಸಿ ನಿಶಾಕ್ ಪೂಜಾರಿ (28), ವಿನೇಶ್ ಕುಮಾರ್ (30), ಜೆಪ್ಪಿನಮೊಗರು ನಿವಾಸಿ ಸಚಿನ್ ಶೆಟ್ಟಿ (22), ಗಣೇಶ್ ಕುಲಾಲ್ (34), ಪ್ರವೀಣ್ ಪೂಜಾರಿ (42), ಸಂದೀಪ್ ಶೆಟ್ಟಿ (33) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 5 ಮಾರಕಾಸ್ತ್ರ ಮತ್ತು ಮೊಬೈಲ್ ಸಹಿತ 2 ಬೈಕ್ ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಪ್ರವೀಣ್ ನ ಮೇಲೆ ಜಪ್ಪಿನಮೊಗರುವಿನಲ್ಲಿ ದೇವದಾಸ್ ಎಂಬಾತನ ಕೊಲೆ, ಪಂಪ್ ವೆಲ್ ನಲ್ಲಿ ರಾಜಾ ಎಂಬಾತನ ಕೊಲೆಯತ್ನ ಹಾಗೂ ವಿನೇಶ್ ಕುಮಾರ್ ನ ಮೇಲೆ ಪಂಪ್ ವೆಲ್ ನಲ್ಲಿ ರಾಜಾ ಎಂಬಾತನ ಕೊಲೆ ಯತ್ನ, ಸಂದೀಪ್ ಶೆಟ್ಟಿಯ ಮೇಲೆ 2 ಹಲ್ಲೆ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಆರೋಪಿಗಳ ಪೈಕಿ ಸಚಿನ್ ಎಂಬಾತ ಹೊಟೇಲ್ ಮ್ಯಾನೆಜ್ ಮೆಂಟ್ ವಿದ್ಯಾರ್ಥಿಯಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.


Spread the love

Exit mobile version