Home Mangalorean News Kannada News ಮೇರಿಹಿಲ್ ವೆಲಂಕಣಿ ವಸತಿ ಸಮುಚ್ಛಯಕ್ಕೆ ಮೇಯರ್ ದಾಳಿ; ಅಕ್ರಮ ನೀರಿನ ಸಂಪರ್ಕ ಕಡಿತ

ಮೇರಿಹಿಲ್ ವೆಲಂಕಣಿ ವಸತಿ ಸಮುಚ್ಛಯಕ್ಕೆ ಮೇಯರ್ ದಾಳಿ; ಅಕ್ರಮ ನೀರಿನ ಸಂಪರ್ಕ ಕಡಿತ

Spread the love

ಮೇರಿಹಿಲ್ ವೆಲಂಕಣಿ ವಸತಿ ಸಮುಚ್ಛಯಕ್ಕೆ ಮೇಯರ್ ದಾಳಿ; ಅಕ್ರಮ ನೀರಿನ ಸಂಪರ್ಕ ಕಡಿತ

ಮಂಗಳೂರು: ಮೇರಿಹಿಲ್ ಬಳಿಯ ವೆಲಂಕಣಿ ವಸತಿ ಸಮುಚ್ಚಯದಿಂದ ತ್ಯಾಜ್ಯ ನೀರು ಡ್ರೈನೇಜ್ ಮೂಲಕ ಹಾದುಹೋಗದೆ ಸ್ಥಳೀಯವಾಗಿ ಹೊರ ಸೂಸುತ್ತಿದೆ ಎಂದು ನಾಗರಿಕರಿಂದ ಬಂದ ದೂರಿನ ಮೇರೆಗೆ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಕವಿತಾ ಸನೀಲ್ ಮನಪಾ ಅಧಿಕಾರಿಗಳೊಂದಿಗೆ ಕಟ್ಟಡಕ್ಕೆ ದಾಳಿ ನಡೆಸಿ ಕಟ್ಟಡದ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ ಘಟನೆ ಸೋಮವಾರ ನಡೆದಿದೆ.

ಸಾರ್ವಜನಿಕರೊಬ್ಬರಿಂದ ಬಂದ ದೂರಿನ ಹಿನ್ನಲೆಯಲ್ಲಿ ಮೇರಿಹಿಲ್ ಬಳಿಯಲ್ಲಿರುವ ವೆಲಂಕಣಿ ವಸತಿ ಸಮುಚ್ಚಯದಲ್ಲಿ ಡ್ರೈನೆಜ್ ಮೂಲಕ ತ್ಯಾಜ್ಯದ ನೀರು ಹೊರ ಬರುತ್ತಿದ್ದು ಇದರಿಂದ ಪರಿಸರ ಸಂಪೂರ್ಣವಾಗಿ ವಾಸನೆಯಿಂದ ಕೂಡಿದ್ದು ಸೊಳ್ಳೆಗಳ ಉತ್ಪಾದನೆ ಆಗಿದೆ ಎಂದು ದೂರು ನೀಡಿದ್ದರು ಅವರ ದೂರಿನ ಮೇರೆಗೆ ಮೇಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನಾಪಾ 5 ವರ್ಷಗಳ ಹಿಂದೆ ಕಟ್ಟಡಕ್ಕೆ ಪರವಾನಿಗೆಯನ್ನು ನೀಡಿದ್ದು, ಆವೇಳೆ ಕಟ್ಟಡದ ಮ್ಹಾಲಕರು ತಾತ್ಕಾಲಿಕ ನೀರಿನ ಸಂಪರ್ಕಕ್ಕೆ ಅರ್ಜಿ ಹಾಕಿದ್ದು, ಬಳಿಕ ಯಾವುದೇ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರವನ್ನು ಪಡೆದಿಲ್ಲ ಅಲ್ಲದೆ ಕಟ್ಟಡ ನಿರ್ಮಾಣದ ವೇಳೆ ಕಾನೂನುಗಳನ್ನು ಕೂಡ ಪಾಲಿಸಿಲ್ಲ.

ವಸತಿ ಸಮುಚ್ಛಯದಲ್ಲಿ 24 ಫ್ಲಾಟ್ ಇದ್ದು, ಇದರ ತ್ಯಾಜ್ಯ ನೀರು ಸಾರ್ವಜನಿಕವಾಗಿ ಬಿಡಲಾಗುತ್ತಿದೆ. ಈ ನೀರಿನಿಂದ ಹೊರಸೂಸುವ ಗಬ್ಬು ವಾಸನೆಯಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಇದೀಗ ಕಟ್ಟಡದಲ್ಲಿರುವ ಮನೆಗಳಿಗೆ ಅಕ್ರಮವಾಗಿ ನೀರು ಸಂಪರ್ಕ ಪಡೆಯಲಾಗಿದ್ದು, ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಕವಿತಾ ಸನೀಲ್ ಮಾಧ್ಯಮಗಳಿಗೆ ತಿಳಿಸಿದರು.


Spread the love

Exit mobile version