ಮೇ 15 ರಂದು ಉಡುಪಿ ಜಿಲ್ಲೆಯಲ್ಲಿ ಪಟಾಕಿ ಸಿಡಿಸುವುದು/ಮಾರಾಟ ನೀಷೇಧ
ಉಡುಪಿ: ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ಬಳಿಕ ಜಯ ಗಳಿಸಿದ ಅಭ್ಯರ್ಥಿಗಯ ಪರವಾಗಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಆದೇಶ ನೀಡಿರುವ ಜಿಲ್ಲಾಧಿಕಾರಿಗಳು ಮೇ 15ರಂದು ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯ ಕಾರ್ಯ ಮುಕ್ತಾಯದ ತರುವಾವಯ ಅಂತಿಮ ಫಲಿತಾಂಶ ಘೋಷಣೆಯ ಬಳಿಕ ಜಯಗಳಿಸಿದ ವಿಜಯಿ ಅಭ್ಯರ್ಥಿಗಳು ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಪಟಾಕಿ ಸಿಡಿಸುವರಿದ್ದು, ಈ ಹಿಂದೆ ಪಟಾಕಿ ಸಿಡಿತದಿಂದ ಅಹಿತಕರ ಘಟನೆಗಳು ಸಂಭವಿಸಿದ್ದು, ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಆದ್ದರಿಂದ ಚುನಾವಣೆಯ ವಿಜಯೋತ್ಸವ ಸಮಯದಲ್ಲಿ ಯಾವುದೇ ರೀತಿಯ ಪಟಾಕಿ ಸಿಡಿಸುವುದನ್ನು ತಡೆಗಟ್ಟುವುದರ ಸಲುವಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮನವಿಯ ಮೇರೆಗೆ ಮೇ 15 ರ ಬೆಳಿಗ್ಗೆ 10ಗಂಟೆಯಿಂದ ಮೇ 17 ರ ಸಂಜೆ 5 ಗಂಟೆಯ ವರೆಗೆ ಉಡುಪಿ ಜಿಲ್ಲೆಯಾದ್ಯಂತ ಯಾವುದೇ ರೀತಿಯ ಪಟಾಕಿ ಮಾರಾಟ ಮಾಡುವುದನ್ನು ನೀಷೇಧಿಸಿದ್ದು, ಪಟಾಕಿ ಅಂಗಡಿ/ಮಳಿಗೆಗಳನ್ನು ಮುಚ್ಚಲು ಆದೇಶ ನೀಡಿರುತ್ತಾರೆ.