ಮೇ 18ರಿಂದ ಉಡುಪಿ ಜಿಲ್ಲೆಯಲ್ಲಿ ‘ಸೆಲೂನ್’ ಗಳನ್ನು ತೆರೆಯಲು ಜಿಲ್ಲಾಧಿಕಾರಿ ಶರತ್ತು ಬದ್ದ ಅನುಮತಿ – ಸವಿತಾ ಸಮಾಜ
ಉಡುಪಿ: ಕೊರೋನಾ ಸಮಸ್ಯೆಯಿಂದ ಇಡೀ ದೇಶವೇ ತತ್ತರಿಸುತ್ತಿದ್ದಾಗ ಲಾಕ್‌ಡೌನ್ ಮಾಡುವ ಮೂರು ದಿನಗಳ ಮುಂಚೆಯೇ ಕ್ಷೌರಿಕ ಬಂಧುಗಳು ಅಂಗಡಿಗಳನ್ನು ಮುಚ್ಚಿ ಬೆಂಬಲವನ್ನು ಸೂಚಿಸಿದ್ದು 53 ದಿನಗಳಿಂದ ಸಮಸ್ಯೆಗಳ ನಡುವೆಯೂ ಬದುಕುತ್ತಿದ್ದು, ಮೇ 18 ರಿಂದ ಜಿಲ್ಲೆಯಲ್ಲಿ ಎಲ್ಲಾ ಸೆಲೂನ್ ಗಳನ್ನು ಪುನರಾರಂಭ ಮಾಡಲು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಷರತ್ತು ಬದ್ದ ಅನುಮತಿಯನ್ನು ನೀಡಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷರಾದ ಭಾಸ್ಕರ್ ಭಂಡಾರಿ ಹೇಳಿದರು.
ಅಲ್ಲದೆ ಇತ್ತೀಚೆಗೆ ರಾಜ್ಯ ಸರಕಾರವು ಕ್ಷಾರಿಕರಿಗಾಗಿ ರೂ.5000/- ಆರ್ಥಿಕ ನೆರವು ಘೋಷಿಸಿದ್ದು ಸವಿತಾ ಸಮಾಜವು ಅಭಾರಿಯಾಗಿದೆಈ ಆರ್ಥಿಕ ಸಹಾಯವನ್ನು ಸರಕಾರವು ಸಂಬಂಧಪಟ್ಟ ಇಲಾಖೆಯ ಮೂಲಕ ಆದಷ್ಟು ತ್ವರಿತವಾಗಿ ಅರ್ಹ ಕ್ಷೌರಿಕರಿಗೆ ತಲುಪುವಂತೆ ವ್ಯವಸ್ಥೆಯನ್ನು ಮಾಡಬೇಕು.
ಮೇ 13ರಂದು ಜಿಲ್ಲಾಧಿಕಾರಿಗಳನ್ನು ಉಡುಪಿ ಜಿಲ್ಲಾ ಸವಿತಾ ಸಮಾಜದ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿ ಸದ್ಯದ ಪರಿಸ್ಥಿತಿಗಳನ್ನು ಸವಿವರವಾಗಿ ತಿಳಿಸಿದಾಗ ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಮೇ 18 ರಂದು ಜಲ್ಲೆಯಾದ್ಯಂತ ಎಲ್ಲಾ ಸೆಲೂನ್‌ಗಳನ್ನು ಪುನಃರಾರಂಭಿಸಲು ಷರತ್ತು ಬದ್ಧ ಅನುಮತಿಯನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಷರತ್ತುಗಳು:
- ಗ್ರಾಹಕರು ಫೋನ್ ಮಾಂತರ ಸಮಯವನ್ನು ನಿಗಧಿಪಡಿಸಿ ಅಮೂಲಕ ಕ್ಷೌರ ಮಾಡಿಸಲು ಬಂದರೆ ಉತ್ತಮ
- ಯಾವುದೇ ಸೆಲೂನ್‌ಗಳು A/c (ಹವಾನಿಯಂತ್ರಣದಲ್ಲಿರಬಾರದು) ಹಾಕುವಂತಿಲ್ಲ.
- ಗ್ರಾಹಕರ ದುತ್ತು ಕ್ಷೌರಿಕರ ಅಂತರವನ್ನು ಎರಡು ಫೀಟ್ ಕಡಿಮ ಇರದಂತೆ ಕಾಪಾಡಬೇಕು.
- ಸೆಲೂನ್‌ನ ಬಟ್ಟೆಗಳು ಹಾಗೂ ಅಂಗಡಿಗಳು ಸ್ವಚ್ಛತೆ ಮತ್ತು ಶುಭ್ರತೆಯನ್ನು ಕಾಪಾಡಬೇಕು.
- ಗ್ರಾಹಕರಿಗೆ ಸೇವೆ ನೀಡುವ ಮುಖಕ್ಕೆ ಮಾಸ್ಕ್ , ಕೈಗೆ ಸ್ ಗಳನ್ನು ಅಳವಡಿಸಕೊಳ್ಳಬೇಕು,
- ಗ್ರಾಹಕರಿಗೆ ಸೇವೆ ನೀಡಿದ ಬಳಕ ಸಾಬೂನ್‌ನಲ್ಲಿ ಕೈ ತೊಳೆಯಬೇಕು. ಹಾಗೂ ಗ್ರಾಹಕರು ಬಂದ ತಕ್ಷಣ ಅವರಿಗೆ ಸ್ಯಾನಿಟೈಸರ್ ನಲ್ಲಿ ಕೈಯನ್ನು ಸ್ವಚ್ಛಗೊಳಸಲು ತಿಳಿಸುವುದು,
- ಅಂಗಡಿಯಲ್ಲಿ ಇಬ್ಬರು ಕ್ಷೌರಿಕರು ಸೇವೆ ನೀಡಬೇಕು. ಈ ಕುರ್ಚಿಯ ಅಂತರವೂ ಒಂದು ಮೀಟರ್‌ನಷ್ಟು ಇರತಕ್ಕದ್ದು.
- ಒಮ್ಮ ಗ್ರಾಹಕರಿಗೆ ಹಾಕಿದ ಬಟ್ಟೆಗಳು ಪುನರಪಿ ಬೇರೆ ಗ್ರಾಹಕರಿಗೆ ಹಾಕುವಂತಿಲ್ಲ. ಆ ಬಟ್ಟೆಗಳನ್ನು ಸ್ವಚ್ಛತೆ (Wash) ಆದ ಬಳಿಕವೇ ಉಪಯೋಗಿಸುವುದು.
- ಸವಿತಾ ಸಮಾಜ ಈ ಹಿಂದಿನ ನಿಯಮದಂತೆ ವಾರದ ರಜೆ ಮಂಗಳವಾರ ಕಡ್ಡಾಯವಾಗಿರುತ್ತದೆ.
- ಪ್ರತಿಯೊಬ್ಬ ಸವಿಕ ಬಂಧುಗಳು ಆರೋಗ್ಯ ಸೇತು app ತನ್ನ ಮೊಬೈಲ್ ಗೆ ಡೌನ್‌ಲೋಡ್ ಮಾಡಿಟ್ಟುಕೊಳ್ಳತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ, ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್, ಗೌರವಾಧ್ಯಕ್ಷ ಗೋವಿಂದ ಭಂಢಾರಿ, ಉಡುಪಿ ತಾಲೂಕ ಸವಿತಾ ಸಮಾಜದ ಅಧ್ಯಕ್ಷರಾದ ರಾಜು ಸಿ ಭಂಡಾರಿ ಕಿನ್ನಿಮೂಲ್ಕಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯು ಶಂಕರ್ ಸಾಲಿಯಾನ್ ಕಟಪಾಡಿ ಉಪಸ್ಥಿತರಿದ್ದರು.