ಮೇ 18ರಿಂದ ದಕ ಜಿಲ್ಲೆಯ ದಂತ ಚಿಕಿತ್ಸಾ ಕೇಂದ್ರಗಳು ಪುನರಾರಂಭ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ದಂತ ಚಿಕಿತ್ಸ್ಯಾ ಕೇಂದ್ರಗಳು 18 ಮೇ 2020 ರಿಂದ ರೋಗಿಗಳ ಚಿಕಿತ್ಸೆಗೆ ಲಭ್ಯವಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ಚಿಕಿತ್ಸೆಗೆ ಬರುವ ಎಲ್ಲ ರೋಗಿಗಳು ತಪ್ಪದೆ ಚಿಕಿತ್ಸ ಕೇಂದ್ರದಲ್ಲಿ ಮುಂಚಿತವಾಗಿ ದೂರವಾಣಿ ಮೂಲಕ ಹೆಸರು ನೂಂದಯಿಸಬೇಕು ಹಾಗು ಚಿಕಿತ್ಸಕೇಂದ್ರದ ಒಳಗಡೆ ಸಾಮಾಜಿಕ ಅಂತರವನ್ನು ಪಾಲಿಸತಕದ್ದು. ಪ್ರತಿಯೊಬ್ಬ ರೋಗಿಯು ಮೌತ್ ಮಾಸ್ಕ ಹಾಕಿಕೊಂಡಿರಭೇಕು. ಚಿಕ್ಕ ಮಕ್ಕಳು ಹಾಗು ವಯೋವೃದ್ಧರನ್ನು ಹೊರತುಪಡಿಸಿ ಉಳಿದವರು ಜೊತೆಯಲ್ಲಿ ಬೇರೆಯವರನ್ನು ಕರೆತರಬಾರದು. ಶೀತ, ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇರುವವರು ದಂತ ಚಿಕಿತ್ಸ ಕೇಂದ್ರಕ್ಕೆ ಭೇಟಿನೀಡಬಾರದು.
ಹೋಂ ಕ್ವಾರಂಟೈನ್ ನಲ್ಲಿ ಇರುವವರು ಆಸಮಯದಲ್ಲಿ ದಂತ ವೈದ್ಯನ್ನು ಸಂಪರ್ಕಿಸಬಾರದು. ಚಿಕಿತ್ಸ ಸಮಯದಲ್ಲಿ ಯಾವುದಾದರು ರೋಗಿಗಳಲ್ಲಿ ಕೊರೊನದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆ ದಂತ ವೈದ್ಯರು ಆ ರೋಗಿಯ ಮಾಹಿತಿಯನ್ನು ಸಮೀಪದ ಕೋವಿಡ್ ಕೇಂದ್ರಕ್ಕೆ ತಿಳಿಸತಕದ್ದು. ಜಿಲ್ಲೆಯ ಎಲ್ಲ ದಂತ ಚಿಕಿತ್ಸಾ ಕೇಂದ್ರದ ದಂತ ವೈದ್ಯರು ಡೆಂಟಲ್ ಕೌನ್ಸಿಲ್ ಒಫ್ ಇಂಡಿಯಾ ದಿಂದ ತಿಳಿಸಿರುವ ಕೋವಿಡ್ 19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ನ ದಕ್ಷಿಣ ಕನ್ನಡ ಬ್ರಾಂಚ್ ನ ಪದಾಧಿಕಾರಿಗಳು ತಿಳಿಸಿರುತ್ತಾರೆ.