ಮೈಸೂರು ನಗರಕ್ಕೆ ಹೊಸ ರೂಪ ಮುಖ್ಯಮಂತ್ರಿ ಸಿದ್ದರಾಮಯ್ಯ

Spread the love

ಮೈಸೂರು : ಮೈಸೂರು ನಗರದಲ್ಲಿ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೆ 332.68 ಕೋಟಿ ರೂ ವೆಚ್ಚದಲ್ಲಿ 41.535 ಕಿಮೀ ಉದ್ದದ ಹೊರವರ್ತುಲ ರಸ್ತೆಯನ್ನು ನಿರ್ಮಿಸಿ ಮೈಸೂರು ನಗರಕ್ಕೆ ಹೊಸ ರೂಪ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

image001chief-minister-mysoor-20160429 image002chief-minister-mysoor-20160429 image003chief-minister-mysoor-20160429

ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಆಯೋಜಿಸಲಾಗಿದ್ದ ಮೈಸೂರು ನಗರದ ಹೊರವರ್ತುಲ ರಸ್ತೆ ಡಾ ಬಾಬು ಜಗಜೀವನರಾಮ್ ಭವನ ಮತ್ತು ಮಹರ್ಷಿ ವಾಲ್ಮೀಕಿ ಭವನಗಳ ಉದ್ಘಾಟನೆ ಹಾಗೂ ಹೊರವರ್ತುಲ ರಸ್ತೆ-ಬೆಂಗಳೂರು ರಸ್ತೆ ಜಂಕ್ಷನ್, ಹೊರವರ್ತುಲ ರಸ್ತೆ-ಹುಣಸೂರು ರಸ್ತೆ ಜಂಕ್ಷನ್, ಜೆ ಎಸ್ ಎಸ್ ನಂಜನಗೂಡು ರಸ್ತೆ ಜಂಕ್ಷನ್ ಗ್ರೇಡ್ ಸಪರೇಟರ್ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

image004chief-minister-mysoor-20160429 image005chief-minister-mysoor-20160429 image006chief-minister-mysoor-20160429

ಹೊರವರ್ತುಲ ರಸ್ತೆಯ ಮೈಸೂರಿನ ಸುತ್ತಲೂ ನಿರ್ಮಾಣವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯ ಹೆದ್ದಾರಿಗಳನ್ನು ಒಳಗೊಂಡಂತೆ ಎಲ್ಲಾ ರಸ್ತೆಗಳನ್ನು ಸ್ಪಂದಿಸುತ್ತದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಉಪಯೋಗಿಸುವ ದೂರ ಸ್ಥಳಗಳ ಪ್ರಯಾಣಿಕರು ಹಾಗೂ ಸರಕು ಸಾಗಾಣಿಕೆ ವಾಹನಗಳು ಮೈಸೂರು ನಗರವನ್ನು ಪ್ರವೇಶಿಸುದೆ ಹೊರವರ್ತುಲ ರಸ್ತೆಗಳ ಮುಕಾಂತರ ಪ್ರಯಾಣಿಸಬಹುದಾಗಿದೆ. ಇದರಿಂದಾಗಿ ಇಂಧನ ಹಾಗೂ ಪ್ರಯಾಣದ ಸಮಯ ಉಳಿತಾಯವಾಗುತ್ತದೆ. ನಗರದ ಹೃದಯ ಭಾಗದಲ್ಲಿಯೂ ವಾಹನಗಳ ಒತ್ತಡವೂ ಕೂಡ ಗಮನರ್ಹವಾಗಿ ತಗ್ಗಲಿದೆ ಎಂದರು.

image007chief-minister-mysoor-20160429 image008chief-minister-mysoor-20160429 image009chief-minister-mysoor-20160429

ಕೇಂದ್ರ ಸರಕಾರದ ನರ್ಮ್ ಯೋಜನೆಯಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 3 ಗ್ರೇಡ್ ಸಪರೇಟರ್ ಗಳನ್ನು ನಿರ್ಮಿಸುವ ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಗ್ರೇಡ್ ಸಪರೇಟರ್ ಗಳ ಉದ್ದವು ಸುಮಾರು 300 ಮೀಟರ್ ಆಗಿದ್ದು, ಎರಡು ಬದಿಗಳಲ್ಲಿ ಎರಡು ಲೇನ್ ಗಳ ಮುಖ್ಯ ಪಥಗಳನ್ನು ಹೊಂದಿದ್ದು, ಒಟ್ಟು ನಾಲ್ಕು ಲೇನ್ ಗಳನ್ನು ಹೊಂದಿರುತ್ತದೆ. ಎರಡೂ ಬದಿಯಲ್ಲಿ 6 ಮೀಟರ್ ಅಗಲದ ಸೇವಾ ರಸ್ತೆಯನ್ನು ಹಾಗೂ 2 ಮೀಟರ್ ಅಗಲದ ಪಾದಾಚಾರಿ ಮಾರ್ಗವನ್ನು ನಿರ್ಮಿಸಲಾಗುವುದು. ಈ 3 ಗ್ರೇಡ್ ಸಪರೇಟರ್ ಕಾಮಗಾರಿಗಳ ಅಂದಾಜು ಮೊತ್ತ 56.79 ಕೋಟಿ ರೂ ಆಗಿರುತ್ತದೆ ಎಂದರು.

ಮೈಸೂರು-ಬೆಂಗಳೂರು ಹೆದ್ದಾರಿ ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಸರ್ಕಾರ ಯೋಜನೆ ರೂಪಿಸಿದ್ದು, 2018 ರ ಒಳಗಾಗಿ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಇದರಿಂದ ಮೈಸೂರು – ಬೆಂಗಳೂರು ಸಂಚರಿಸುವ ಪ್ರಯಾಣಿಕರಿಗೆ ಸಮಯದ ಉಳಿತಾಯವಾಗಲಿದೆ. ರೈಲ್ವೆ ಮಾರ್ಗದ ಎರಡು ಪಥದ ಸಂಚಾರ ಕಾಮಗಾರಿಯ ಬಹುತೇಕ ಪೂರ್ಣಗೊಂಡಿದ್ದು, ರೈಲ್ವೆ ಸೇವೆಯನ್ನು ಬಳಸುವ ಪ್ರಯಾಣಿಕರಿಗೂ ಸಹ ಅನುಕೂಲವಾಗಲಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. 120 ಕೋಟಿ ರೂ ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದು, ಇನ್ನೂ 6 ರಿಂದ 7 ತಿಂಗಳೊಳಗಾಗಿ ಪೂರ್ಣಗೊಳ್ಳಿದೆ. ನಗರದಲ್ಲಿ ದೇವರಾಜ ಮಾರುಕಟ್ಟೆ, ಲ್ಯಾನ್ ಸ್ಟೋನ್ ಕಟ್ಟಡ, ಹಾರ್ಡಿಂಗ್ ಸರ್ಕಲ್, ಇರ್ವಿನ್ ರಸ್ತೆ ಸೇರಿದಂತೆ ಮುಂತಾದ ರಸ್ತೆ ಅಭಿವೃದ್ಧಿ ಕಾಮಾಗಾರಿಗಳು ಪ್ರಗತಿಯಲ್ಲಿವೆ. ಮೈಸೂರು ನಗರವನ್ನು ಒಟ್ಟಾರೆ ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದರು.

ಮುಖ್ಯಮಂತ್ರಿಗಳು 4.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಾಜಿ ಪ್ರಧಾನಿ ದಿವಂಗತ ಬಾಬು ಜಗಜೀವನ್ ರಾಮ್ ಭವನ ಹಾಗೂ 4.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ವಾಲ್ಮೀಕಿ ಭವನವನ್ನು ಸಹ ಉದ್ಘಾಟಿಸಿದರು.

ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಲೋಕೊಪಯೋಗಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್ ಅಂಜನೇಯ, ಸಹಕಾರ ಹಾಗೂ ಸಕ್ಕರೆ ಸಚಿವ ಹೆಚ್ ಎಸ್ ಮಹದೇವಪ್ರಸಾದ್, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಬಿ ಎಲ್ ಭೈರಪ್ಪ, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಜಿಟಿ ದೇವೆಗೌಡ, ವಿಧಾನಪರಿಷತ್ ಸದಸ್ಯ ಆರ್ ಧರ್ಮಸೇನ್ ಇತರರು ಉಪಸ್ಥಿತರಿದ್ದರು.


Spread the love