Home Mangalorean News Kannada News ಮೈಸೂರು ಸಿಲ್ಕ್ ರಾಜ್ಯದ ಪರಂಪರೆಯ ಭಾಗ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಮೈಸೂರು ಸಿಲ್ಕ್ ರಾಜ್ಯದ ಪರಂಪರೆಯ ಭಾಗ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ಮೈಸೂರು ಸಿಲ್ಕ್ ರಾಜ್ಯದ ಪರಂಪರೆಯ ಭಾಗ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ: ಮೈಸೂರು ಸಿಲ್ಕ್ ರಾಜ್ಯದ ಪಾರಂಪರಿಕ ಉತ್ಪನ್ನವಾಗಿದ್ದು, ಇತಿಹಾಸದ ಭಾಗವಾಗಿದೆ, ಮೈಸೂರು ಸಿಲ್ಕ್ ಸೀರೆಗಳು ಉತ್ತಮ ಗುಣಮಟ್ಟ ಹಾಗೂ ದೀರ್ಘಬಾಳಿಕೆಗೆ ಹೆಸರುವಾಸಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಅವರು ಬುಧವಾರ, ಉಡುಪಿಯ ಡಯಾನ ಹೋಟೆಲ್ನಲ್ಲಿ, ಕೆ.ಎಸ್.ಐ.ಸಿ ವತಿಯಿಂದ, ಡಿಸೆಂಬರ್ 19 ರಿಂದ 22 ರ ವರೆಗೆ ಆಯೋಜಿಸಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಉದ್ಘಾಟಿಸಿ ಮಾತನಾಡಿದರು.
ಮೈಸೂರು ಸಿಲ್ಕ್ ಸೀರೆಗಳು ಗುಣಮಟ್ಟ ಮತ್ತು ದೀರ್ಘ ಬಾಳಿಕೆಗೆ ಪ್ರಸಿದ್ದವಾಗಿದ್ದು ಇದಕ್ಕೆ ಸ್ವತ: ನಾನೇ ಸಾಕ್ಷಿ, ನಾನು ಪ್ರೊಬೇಷರಿ ಅವಧಿಯಲ್ಲಿ ಮೈಸೂರಿನಲ್ಲಿರುವ ಕೆ.ಎಸ್.ಐ.ಸಿ ಕಾರ್ಖಾನೆಯಿಂದ ಖರೀದಿಸಿದ ಸೀರೆ ಈಗಲೂ ಸ್ವಲ್ಪವೂ ಮಾಸದೇ ಹೊಸದರಂತೆ ಇದೆ ಎಂದು ಹೇಳಿದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕೆ.ಎಸ್.ಐ.ಸಿ ಯು ನೇರವಾಗಿ ರೈತರಿಂದ ರೇಷ್ಮಗೂಡು ಖರೀದಿಸಿ ಸೀರೆ ತಯಾರಿಸುತ್ತಿದ್ದು, ಈ ಮೂಲಕ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ, ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸದಿಂದ ತಯಾರಿಸುವ ಈ ಸೀರೆಗಳು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟವಾಗುತ್ತಿವೆ, ಮೈಸೂರು ಸಿಲ್ಕ್ ಸೀರೆ ಖರೀದಿ ರಾಜ್ಯದ ಪ್ರತಿಯೊಬ್ಬರ ಹೆಮ್ಮೆ ಎಂದು ಹೇಳಿದರು.

ಕೆ.ಎಸ್.ಐ.ಸಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಭಾನು ಪ್ರಕಾಶ್ ಮಾತನಾಡಿ, ಮೈಸೂರು ಸಿಲ್ಕ್ ಸೀರೆಗಳನ್ನು ಅತ್ಯುತ್ತಮ ಗುಣಮಟ್ಟದ ರೇಷ್ಮೆಯಿಂದ ಮಾಡಲಾಗುವುದು, ಸಾಂಪ್ರದಾಯಿಕ ರೀತಿಯಲ್ಲಿ ಉತ್ಪಾದಿಸುವ ಈ ಸೀರೆಗಳಲ್ಲಿ ಜರಿಯು ಪರಿಶುದ್ದ ಚಿನ್ನವಾಗಿದ್ದು, ಶೇ.0.65 ಚಿನ್ನ ಮತ್ತು ಶೇ.65 ರಷ್ಟು ಬೆಳ್ಳಿಯಿಂದ ತಯಾರಿಸಲಾಗುವುದು, ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನಿಕತೆಯಿಂದ ಕೂಡಿವೆ, ಸೀರೆಗಳಿಗೆ ಭೌಗೋಳಿಕ ಗುರುತಿನ ನೊಂದಣಿ ದೊರೆತಿದೆ ಹಾಗೂ ಸಂಸ್ಥೆಗೆ 2016-17 ರಲ್ಲಿ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ದೊರೆತಿದೆ, ಆನ್ ಲೈನ್ ಮೂಲಕವೂ ಸಹ ಸಂಸ್ಥೆಗೆ ಗ್ರಾಹಕರು ಬೇಡಿಕೆ ನೀಡುತ್ತಿದ್ದು, ಗ್ರಾಹಕರ ಅಭಿರುಚಿಗೆ ತಕ್ಕ ವಿನ್ಯಾಸದಂತೆ ಸೀರೆಗಳನ್ನು ತಯಾರಿಸಿ ಕೊಡಲಾಗುವುದು, ಉಡುಪಿಯಲ್ಲಿ ನಾಲ್ಕು ದಿನಗಳ ಕಾಲ ಬೆಳಗ್ಗೆ 10 ರಿಂದ ರಾತ್ರಿ 8 ರ ವರೆಗೆ ನಡೆಯುವ ಈ ಪ್ರದರ್ಶನ ಮತ್ತು ಮಾರಾಟದಲ್ಲಿ ರೂ.5700 ರಿಂದ 1,50,000 ದ ವರೆಗಿನ ಸೀರೆಗಳ ಸಂಗ್ರಹವಿದ್ದು, ಶೇ.25 ರ ವರೆಗೆ ರಿಯಾಯತಿ ನೀಡಲಾಗುವುದು ಎಂದು ಹೇಳಿದರು.


Spread the love

Exit mobile version