Home Mangalorean News Kannada News ಮೊಂತಿ ಫೆಸ್ಟ್ ಗೆ ಚರ್ಚುಗಳಿಗೆ ವಿತರಿಸಲು ಉದ್ಯಾವರ ಜೂಲಿಯನ್ ದಾಂತಿ ಜಮೀನಿನಲ್ಲಿ ಸಿದ್ದಗೊಂಡಿದೆ ಹೊಸ ಭತ್ತದ...

ಮೊಂತಿ ಫೆಸ್ಟ್ ಗೆ ಚರ್ಚುಗಳಿಗೆ ವಿತರಿಸಲು ಉದ್ಯಾವರ ಜೂಲಿಯನ್ ದಾಂತಿ ಜಮೀನಿನಲ್ಲಿ ಸಿದ್ದಗೊಂಡಿದೆ ಹೊಸ ಭತ್ತದ ತೆನೆ

Spread the love

ಮೊಂತಿ ಫೆಸ್ಟ್ ಗೆ ಚರ್ಚುಗಳಿಗೆ ವಿತರಿಸಲು ಉದ್ಯಾವರ ಜೂಲಿಯನ್ ದಾಂತಿ ಜಮೀನಿನಲ್ಲಿ ಸಿದ್ದಗೊಂಡಿದೆ ಹೊಸ ಭತ್ತದ ತೆನೆ

ಉಡುಪಿ: ತೆನೆ ಹಬ್ಬಕ್ಕೆ ಕ್ರೈಸ್ತ, ಹಿಂದೂ ಧರ್ಮಗಳಲ್ಲಿ ವಿಶೇಷ ಮಹತ್ವ ಇದ್ದು ಹಳ್ಳಿಗಳಲ್ಲಿ ತೆನೆಗೆ ಯಾವುದೇ ತೊಂದರೆ ಇಲ್ಲ, ಆದರೆ ನಗರದಲ್ಲಿ ತೆನೆ ಸಿಗುವುದೇ ಕಷ್ಟ. ಇದಕ್ಕಾಗಿ ಉಡುಪಿಯ ಒಂದು ಕುಟುಂಬ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಭತ್ತದ ಕೃಷಿ ಮಾಡಿ ಎಲ್ಲರಿಗೂ ಉಚಿತವಾಗಿ ತೆನೆ ಹಂಚುತ್ತಾರೆ. ವಿಶೇಷ ಅಂದ್ರೆ ಉಡುಪಿಯ ತೆನೆ ಸಾಗರದಾಚೆಗಿನ ಕೊಲ್ಲಿ ರಾಷ್ಟ್ರಕ್ಕೂ ಕಳುಹಿಸಿಕೊಡುವುದು ವಿಶೇಷ ಈ ಕುರಿತು ವಿಶೇಷ ವರದಿ ಇಲ್ಲಿದೆ ನೋಡಿ.

ಕರಾವಳಿ ಅಂದರೆ ಧಾರ್ಮಿಕ ಆಚರಣೆಯ ಕಣಜವಾಗಿದ್ದು ನಿತ್ಯ ಒಂದಲ್ಲ ಒಂದು ಹಬ್ಬ ಆಚರಣೆಗಳು ತಪ್ಪಿದ್ದಲ್ಲ. ಕೃಷಿ ಪ್ರಧಾನವಾದ ಕುಟುಂಬ ಗಳೇ ಹೆಚ್ಚಾಗಿ ಇರೊ ಕರಾವಳಿಯ ಲ್ಲಿ ಕೃಷಿ ಜೊತೆಗೆ ಧಾರ್ಮಿಕ ಆಚರಣೆ ಹಾಸುಹೊಕ್ಕಾಗಿವೆ. ಅಂತಹ ಆಚರಣೆ ಯಲ್ಲಿ ತೆನೆ ಹಬ್ಬನೂ ಒಂದು .ಕರಾವಳಿಯ ಕೈಸ್ತರು ತೆನೆ ಹಬ್ಬವನ್ನು ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಪೆಸ್ಟ್ ಎಂದು ಆಚರಿಸಿದರೆ ಹಿಂದೂಗಳು ಮನೆ ತುಂಬಿಸುವ ಹಬ್ಬ (ತೆನೆ ಕಟ್ಟು) ಅನಂತ ಚತುರ್ಥಿ ನಂತರ ಒಂದು ತಿಂಗಳಕಾಲ ಆಚರಿಸುವುದು ರೂಡಿ

ಬೆಳೆದು ನಿಂತ ಭತ್ತದ ತೆನೆಗಳನ್ನು ಪೂಜಿಸಿ ಮನೆ ಹೊಸ್ತಿಲು ದೇವರ ಗುಡಿ ,ಕೃಪಿ ಪರಿಕರಗಳು ಹೀಗೆ ಎಲ್ಲದಕ್ಕೂ ಕಟ್ಟಿ ಪೂಜಿಸಿದರೆ ಕ್ರೈಸ್ತರು ಚರ್ಚುಗಳಿಂದ ತಂದ ಪವಿತ್ರ ತೆನೆಗಳನ್ನು ದೇವರ ಪೀಠದ ಮೇಲೆ ಇಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದಿನಕಾಲ ದಲ್ಲಿ ಭತ್ತ ಕೃಷಿ ಎಲ್ಲ ಮನೆಯಲ್ಲೂ ಸಾಮಾನ್ಯವಾಗಿ ಇತ್ತು ಭತ್ತದ ತೆನೆಯ ಕೊರತೆ ಇರಲಿಲ್ಲ. ಆದ್ರೆ ಆಧುನಿಕತೆ ಬೆಳೆದಂತೆ ಗದ್ದೆಗಳ ಮಾಯವಾಗಿದೆ ಆದರೆ ಧಾರ್ಮಿಕ ಆಚರಣೆಗಳನ್ನು ಜನ ಇಂದಿಗೂ ಬಿಡದೆ ವರ್ಷಪ್ರತಿ ತೆನೆ ಹಬ್ಬ ನಡೆಸುತ್ತಾರೆ.

ಜನರ ಧಾರ್ಮಿಕ ಆಚರಣೆಯ ಖುಷಿಗಾಗಿಯೇ ಉಡುಪಿ ಕುತ್ಪಾಡಿಯ ಈ ಕುಟುಂಬ ಭತ್ತದ ಬೇಸಾಯ ಮಾಡುತ್ತೆ. ಕುತ್ಪಾಡಿಯ ಜೂಲಿಯನ್ ದಾಂತಿ ಅವರ ಕುಟುಂಬ ಅರ್ಧ ಎಕರೆ ಗದ್ದೆಯಲ್ಲಿ ಬೇಸಾಯ ಮಾಡಿದ್ದಾರೆ. ತೆನೆ ಭರಿತ ಪೈರಿನ ಫಸಲು ಬೆಳೆದು ನಿಂತಿದ್ದು, ಚೌತಿ, ಮೊಂತಿ ಹಬ್ಬದ ಸಂದರ್ಭ ಕಟ್ಟುವ ತೆನೆ ಹಬ್ಬಕ್ಕೂ ತನ್ನ ಗದ್ದೆಯಲ್ಲಿ ಬೆಳೆದ ಭತ್ತದ ಎಲ್ಲರಿಗೂ ಹಂಚುತ್ತಾರೆ. ತೆನೆಯನ್ನು ಜಾತಿ ಧರ್ಮ ಮತದ ಭೇದವಿಲ್ಲದೆ ತೆನೆಹಬ್ಬಕ್ಕೆ ತೆನೆಯ ಬೇಡಿಕೆ ಇಟ್ಟವರಿಗೆ ಉಚಿತವಾಗಿ ಹಂಚುತ್ತಾರೆ.

ಜೂಲಿಯನ್ ಧಾಂತಿ ಕುಟುಂಬ ತೆನೆ ಹಬ್ಬಕ್ಕಾಗಿಯೇ ತಮ್ಮ ಎಕರೆ ಗದ್ದೆಯಲ್ಲಿ ಎಪ್ರಿಲ್-ಮೇ ತಿಂಗಳಲ್ಲಿಯೇ ನಾಟಿ ಕೆಲಸವನ್ನು ಪೂರೈಸುತ್ತಾರೆ. ಸುಡು ಮಣ್ಣು, ಹಟ್ಟಿಗೊಬ್ಬರ ಬಳಸಿ ಸಮರ್ಪಕ ಮಳೆಯು ಸುರಿಯುವ ಮುನ್ನವೇ ಪಂಪ್ ಮೂಲಕ ಗದ್ದೆಗೆ ನೀರು ಹಾಯಿಸಿ ಬೇಸಾಯ ನಡೆಸುತ್ತಾರೆ. ಈ ಗದ್ದೆಯ ತೆನೆ ಭರಿತ ಫಸಲನ್ನು ತೆನೆ ಹಬ್ಬ ಹಬ್ಬಕ್ಕಾಗಿ ಉಚಿತ ವಿತರಣೆಯಾಗಿ ಮಿಕ್ಕಿದ ಭತ್ತ ಹಕ್ಕಿ ನವೀಲು ಅಳಿಲುಗಳಿಗೆ ಆಹಾರಕ್ಕಾಗಿ ಮೀಸಲಿಡುತ್ತಾರೆ.

ತೆನೆ ಹಬ್ಬದ ಅವಧಿಗೆ ಸರಿಯಾಗಿ ತೆನೆಕಟ್ಟುವ ಭತ್ತದ ಪೈರುನ್ನು ಕಳೆದ 25 ವರ್ಷಗಳಿಂದಲೂ ದೇಶ ವಿದೇಶಗಳಲ್ಲಿನ ಇಗರ್ಜಿಗಳಿಗೆ ಕನ್ಯಾ ಮರಿಯಮ್ಮನ ಜನ್ಮದಿನದಂದು ತೆನೆ (ಕದಿರು)ಕಟ್ಟಲು, ಚೌತಿ ಹಬ್ಬದ ಸಂದರ್ಭದಲ್ಲಿ ದೇವಸ್ಥಾನ, ಸಂಘ ಸಂಸ್ಥೆಗಳಿಗೆ,ಅಗತ್ಯ ಇರೊ ಕುಟುಂಬ ಗಳಿಗೂ ಫಸಲು ಭರಿತ ತೆನೆಯನ್ನು ಒದಗಿಸುತ್ತಾರೆ. ವಿದೇಶದಲ್ಲಿ ತೆನೆ ಹಬ್ಬ ಆಚರಿಸುವ ಮಂದಿಗೂ ತೆನೆಯನ್ನು ಪಾರ್ಸೆಲ್ ಮೂಲಕ ಕಳುಹಿಸಿಕೊಡುತ್ತಾರೆ. ವಿದೇಶದಲ್ಲಿ ದುಡಿಮೆ ಮಾಡಿ ಪ್ರಸ್ತುತ ನಿವೃತ್ತಿಯಾಗಿ ಕೃಷಿಯನ್ನು ಮಾಡಿಕೊಂಡು ಬಂದಿರುವ ಈ ಕುಟುಂಬದ ಮಂದಿ ಸದ್ಯ ಉಚಿತ ಸೇವೆ ಮಾಡುವದರಲ್ಲೆ ಖುಷಿ ಪಡುವ ಈ ಕುಟುಂಬ ಎಲ್ಲರಿಗೂ ಮಾದರಿ.


Spread the love
1 Comment
Inline Feedbacks
View all comments
Felix, Udyavar / Bailoor
4 years ago

Alex Danthi and Julian Danthi…you guys are rocking. keep up the good work. God bless you all.

wpDiscuz
Exit mobile version