ಮೊದಲನೇ ಹಂತದ ಲಾಕ್ ಡೌನ್ ಸಂಧರ್ಭದಲ್ಲಿ ವಿಶ್ವಹಿಂದು ಪರಿಷದ್ ಸೇವಾಕಾರ್ಯ
ಮಂಗಳೂರು: ದೇಶದಲ್ಲಿಂದು ಕೋರೋನಾ ಹರಡದಂತೆ ಸಂಪೂರ್ಣವಾಗಿ ಲಾಕ್ ಡೌನ್ ಆಗಿರುವುದರಿಂದ ಸಮಾಜದ ಅನೇಕ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ, ಈ ಸಂದರ್ಭ ವಿಶ್ವಹಿಂದು ಪರಿಷದ್ ಅಂತಹ ಪೀಡಿತ ವರ್ಗದ ಜನರ ನೆರವಾಗಿ ವಿವಿಧ ರೀತಿಯ ಸೇವಾಕಾರ್ಯದಲ್ಲಿ ತೊಡಗಿದೆ, ದೇಶಾದ್ಯಂತ 1,771 ಪಟ್ಟಣಗಳಲ್ಲಿ 11,554 ಸ್ಥಾನಗಳಲ್ಲಿ ಒಟ್ಟು 27,103 ಕಾರ್ಯಕರ್ತರು ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ,
ಈ ವರಗೆ 18,65,700 ಆಹಾರ ಪೆÇಟ್ಟಣಗಳನ್ನು ವಿತರಿಸಲಾಗಿದ್ದು, 2,89,827 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗಿದೆ, ಸುರಕ್ಷತೆಗಾಗಿ 3,38,282 ಮಾಸ್ಕ್ ಗಳನ್ನು 1,36,442 ಸೇನಿಟೈಜûರ್ಗಳನ್ನು ವಿತರಿಸಲಾಗಿದೆ,
ಕರ್ನಾಟಕ ರಾಜ್ಯದಲ್ಲಿ ವಿಶ್ವಹಿಂದು ಪರಿಷದ್ ಸೇವಾಕಾರ್ಯ
ಕರ್ನಾಟಕ ರಾಜ್ಯದಲ್ಲಿಯೂ ಸಹ ಎಲ್ಲಾ ಜಿಲ್ಲೆಗಳಲ್ಲಿ 90 ಪಟ್ಟಣಗಳಲ್ಲಿ 397 ಸ್ಥ್ಠಾನಗಳಲ್ಲಿ 1,780 ಕಾರ್ಯಕರ್ತರು ಕಾರ್ಯಮಾಡಿರುತ್ತಾರೆ, 16,565 ಮನೆಗಳಿಗೆ ರೇಷನ್ ಗಳನ್ನು 32,015 ಜನರಿಗೆ ಆಹಾರ ಪೆÇಟ್ಟಣಗಳನ್ನು ವಿತರಿಸಲಾಗಿದೆ, 8,415 ಮಾಸ್ಕ್ ಗಳು ಹಾಗೂ 4,360 ಸೇನಿಟೈಜûರ್ಗಳನ್ನು ವಿತರಿಸಲಾಗಿದೆ, ಅದಲ್ಲದೆ ತುರ್ತುಸಹಾಯವಾಣಿ, ರಕ್ತದಾನ, ಇನ್ನಿತರ ಅವಶ್ಯಕ ಸೇವೆಗೆ ಕಾರ್ಯಕರ್ತರು ತೊಡಗಿದ್ದಾರೆ,
ಮಂಗಳೂರು ವಿಭಾಗದಲ್ಲಿ ವಿಶ್ವಹಿಂದು ಪರಿಷದ್ ಸೇವಾಕಾರ್ಯ (ದಕ್ಷಿಣ ಕನ್ನಡ, ಉಡುಪಿ ಮತ್ತು ಕೂಡಗು ಸೇರಿದಂತೆ) ದಕ್ಷಿಣ ಕನ್ನಡ, ಉಡುಪಿ ಮತ್ತು ಕೂಡಗು ಸೇರಿದಂತೆ ಮಂಗಳೂರು ವಿಭಾಗದಲ್ಲಿ 187 ಸ್ಥಾನzಲ್ಲಿ 12,131 ಮನೆಗಳಿಗೆ ರೇಷನ್ ಗಳನ್ನು 17921 ಜನರಿಗೆ ಆಹಾರ ಪೆÇಟ್ಟಣಗಳನ್ನು ವಿತರಿಸಲಾಗಿದೆ, 5740 ನೀರಿನ ಬಾಟಲ್ ಗಳು, 428 ಔಷಧಿಗಳನ್ನು ವಿತರಿಸಲಾಗಿದೆ, ಹಾಗೂ 192 ಯುನಿಟ್ ರಕ್ತದಾನ, ಅದಲ್ಲದೆ ತುರ್ತುಸಹಾಯವಾಣಿ, ಇನ್ನಿತರ ಅವಶ್ಯಕ ಸೇವೆಗೆ ಕಾರ್ಯಕರ್ತರು ತೊಡಗಿದ್ದಾರೆ,್ಲ
ಸಮಾಜದ ಅನೇಕ ದಾನಿಗಳು, ಹಿತೈಷಿಗಳು ಹಾಗೂ ಎಲ್ಲರ ಸಹಯೋಗದೊಂದಿ ವಿಶ್ವಹಿಂದು ಪರಿಷದ್ ಇಂತಹ ಸೇವಾಕಾರ್ಯವನ್ನು ಮುನ್ನಡೆಸುತ್ತಿದ್ದು ಲಾಕ್ ಡೌನ್ ತೆರವುಗೊಳ್ಳುವವರೆಗು ಮುಂದುವರಿಸುವ ಸಂಕಲ್ಪ ಮಾಡಿದ್ದು, ಈ ರೀತಿಯ ಸೇವಾಕಾರ್ಯಕ್ಕೆ ಸಹಕರಿಸಿದ ಎಲ್ಲಾ ಬಂಧುಗಳಿಗೆ ಅಭಿನಂದನೆಗಳು, ಎಲ್ಲರ ಸಹಯೋಗದೊಂದಿಗೆ ಇನ್ನಷ್ಟು ಸೇವೆ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ ಎಂದು ವಿಶ್ವಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷರಾದ ಪೆÇ್ರ ಯಂ ಬಿ ಪುರಾಣಿಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು