Home Mangalorean News Kannada News ಮೊಬೈಲ್ ಟವರಿನ ಬ್ಯಾಟರಿ ಕಳವು ಐವರ ಬಂಧನ

ಮೊಬೈಲ್ ಟವರಿನ ಬ್ಯಾಟರಿ ಕಳವು ಐವರ ಬಂಧನ

Spread the love

ಮೊಬೈಲ್ ಟವರಿನ ಬ್ಯಾಟರಿ ಕಳವು ಐವರ ಬಂಧನ

ಮಂಗಳೂರು: ಮೊಬೈಲ್ ಟವರಿನ ಬ್ಯಾಟರಿಗಳ ಕಳ್ಳತನಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೋಲಿಸರು ಐದು ಮಂದಿಯನ್ನು ಅಗೋಸ್ತ್ 23 ರಂದು ಬಂಧಿಸಿದ್ದಾರೆ.

ಬಂಧಿತರನ್ನು ಮಡಿಕೇರಿಯ ಗಣೇಶ್, ಮಂಜೇಶ್ವರ ಕುಂಜತ್ತೂರಿನ ಮೊಹಮ್ಮದ್ ರಶೀದ್, ಮಲ್ಲೂರು ಕುಟ್ಟಿಕಲದ ಸುನೀಲ್, ಬಜಾಲ್ ಕುಡ್ತಡ್ಕದ ಪ್ರತಾಪ್ ಹಾಗೂ ವಾಮಂಜೂರು ಮೂಡುಶೆಡ್ಡೆಯ ಅವಿ @ ಅವಿನಾಶ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ : ಅಗೋಸ್ತ್ 19 ರಂದು ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ಇಂಡಸ್ ಮೊಬೈಲ್ ಟವರಿನ ಫೀಲ್ಡ್ ಆಫೀಸರ್ ರವರಾದ ಶ್ರೀ ಎನ್.ಎಸ್.ದೊಡ್ಡಮನಿ ಎಂಬವರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ಮಲ್ಲೂರಿನಲ್ಲಿರುವ ವೊಡಾಫೋನ್ ಟವರಿಗೆ ಅಳವಡಿಸಿದ ಬ್ಯಾಟರಿ ಬ್ಯಾಂಕಿನ ಬೀಗವನ್ನು ಮುರಿದು ಅದರ ಒಳಗಡೆ ಇದ್ದ ಸುಮಾರು 60,000 ರೂಪಾಯಿ ಮೌಲ್ಯದ 24 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ಲಿಖಿತ ಪಿರ್ಯಾದಿಯಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 328/16 ಕಲಂ 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ,

ಪ್ರಕರಣದ ತನಿಖೆಯನ್ನು ಕೈಗೊಂಡು ದಿನಾಂಕ: 23.08.2016 ರಂದು ಬೆಳಿಗ್ಗೆ 04-30 ಗಂಟೆಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ತಾಲೂಕು ಪದವು ಗ್ರಾಮದ ಕುಲಶೇಖರ ನಂದಿನಿ ಹಾಲಿನ ಡೈರಿ ಬಸ್ ನಿಲ್ದಾಣದ ಬಳಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಗಳಾದ ಮಡಿಕೇರಿಯ ಗಣೇಶ್, ಮಂಜೇಶ್ವರ ಕುಂಜತ್ತೂರಿನ ಮೊಹಮ್ಮದ್ ರಶೀದ್, ಮಲ್ಲೂರು ಕುಟ್ಟಿಕಲದ ಸುನೀಲ್, ಬಜಾಲ್ ಕುಡ್ತಡ್ಕದ ಪ್ರತಾಪ್ ಹಾಗೂ ವಾಮಂಜೂರು ಮೂಡುಶೆಡ್ಡೆಯ ಅವಿ @ ಅವಿನಾಶ್ ಎಂಬವರುಗಳನ್ನು ಅವರುಗಳು ಕೃತ್ಯವೆಸಗಲು ಉಪಯೋಗಿಸಿದ ಮಾರುತಿ ಓಮ್ನಿ ಕೆ.ಎ19-ಎಂ.ಸಿ-3777 ಮತ್ತು ಟಾಟಾ ಸುಮೋ ಕೆಎ-20-ಸಿ-0085 ನೇ ಕಾರುಗಳನ್ನು ಹಾಗೂ ಸ್ಪಾನರ್ ಗಳನ್ನು ಮತ್ತು ಜಿಲ್ಲೆಯ ಅನೇಕ ಕಡೆಗಳಲ್ಲಿರುವ ಮೊಬೈಲ್ ಟವರುಗಳ ಈ ಕೆಳಗಿನ ಬ್ಯಾಟರಿಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಇವುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 15 ಲಕ್ಷ ಆಗಿರುತ್ತದೆ,

ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಪ್ರಕಣದ ಆರೋಪಿಗಳ ಹಾಗೂ ಸ್ವತ್ತು ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಶ್ರುತಿ, ರವರ ನಿರ್ದೇಶನದಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನೀರೀಕ್ಷಕರಾದ ಮಹಮ್ಮದ್ ಶರೀಫ್ ರಾವುತರ್, ಪಿ.ಎಸ್.ಐ ಸುಧಾಕರ್ (ಕಾ&ಸು), ಅಪರಾಧ ವಿಭಾಗದ ಪಿ.ಎಸ್.ಐ ವೆಂಕಟೇಶ್. ಐ, ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಶ್ರೀ. ಸುಭಾಶ್ಚಂದ್ರ, ಮೋಹನ್, ಸುಧಾಕರ್ ರಾವ್ , ಚಂದ್ರಶೇಖರ್ ಆಚಾರ್ಯ ಮತ್ತು ಪಿ.ಸಿ ಗಳಾದ ಮೆಲ್ವಿನ್ ಪಿಂಟೋ, ಕುಶಲ್ ಹೆಗ್ಡೆ, ಮಂಜುನಾಥ್ ಎನ್ ಹಾಗೂ ಶರಣಪ್ಪ ಕಾಳಿ ರವರು ನಡೆಸಿರುತ್ತಾರೆ,


Spread the love

Exit mobile version