Home Mangalorean News Kannada News ಮೊಬೈಲ್ ದರೋಡೆ ಮತ್ತು ಬ್ಯಾಟರಿ ಕಳ್ಳತನ ಆರೋಪಿಗಳ ಬಂಧನ

ಮೊಬೈಲ್ ದರೋಡೆ ಮತ್ತು ಬ್ಯಾಟರಿ ಕಳ್ಳತನ ಆರೋಪಿಗಳ ಬಂಧನ

Spread the love

ಮೊಬೈಲ್ ದರೋಡೆ ಮತ್ತು ಬ್ಯಾಟರಿ ಕಳ್ಳತನ ಆರೋಪಿಗಳ ಬಂಧನ

ಮಂಗಳೂರು: ಪಣಂಬೂರು ಮತ್ತು ಸುರತ್ಕಲ್ ಪರಿಸರದಲ್ಲಿ ನಿಲ್ಲಿಸಿದ್ದ ಲಾರಿಗಳ ಚಾಲಕ/ನಿರ್ವಾಹಕರಿಗೆ ಚೂರಿಯಿಂದ ಇರಿದು ಬೆದರಿಸಿ ಮೊಬೈಲ್ ಗಳನ್ನು ದರೋಢೆ ಮಾಡುತ್ತಿದ್ದ ಮತ್ತು ಕುಳಾಯಿಯ ರಾ.ಹೆ. 66 ಬದಿಯಲ್ಲಿ ನಿಲ್ಲಿಸಿದ್ದ ಜನರೇಟರ್ ಗಳಿಂದ (ಡಿ.ಜೆ. ) ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ತಂಡ ವನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಕಾಟಿಪಳ್ಳ ನಿವಾಸಿ ಅಬ್ದುಲ್ ಅಮೀರ್ ಯಾನೆ ಅಮೀರ್ ಯಾನೆ ಅಬ್ದುಲ್ ಅಮೀರ್ (20) , ತನ್ವೀರ್ (24) ಮತ್ತು ಮುಲ್ಕಿ ಕೋಲ್ನಾಡು ನಿವಾಸಿ ಅಬ್ದುಲ್ ಬಿಲಾಲ್ (19) ಎಂದು ಗುರುತಿಸಲಾಗಿದೆ.

ಜನವರಿ 10 ರಂದು ಮುಂಜಾನೆ ವಿಜಯಪುರ ಜಿಲ್ಲೆಯ ನಿವಾಸಿ 56 ವರ್ಷ ಪ್ರಾಯದ ಶಂಶುದ್ದೀನ್ ಅಶಾಂಫಿರ್ ಮುಜಾವರ್ ರವರು ಪಣಂಬೂರು ನಂದನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಮಲಗಿದ್ದ ಸಂಧರ್ಭ ಮೂರು ಆರೋಪಿಗಳು ಚಾಕುತೋರಿಸಿ ಹೆದರಿ ಅವರಲ್ಲಿ ಇರುವ ಮೊಬೈಲ್ ಮತ್ತು ಹಣವನ್ನು ನೀಡುವಂತೆ ಬೆದರಿಸಿದ್ದು ಮೊಬೈಲ್ ಕೊಡಲು ನಿರಾಕರಿಸಿದ್ದಕ್ಕೆ ಚಾಲಕರ ಹಣೆಗೆ ಚಾಕುವಿನಿಂದ ತಿವಿದು ಗಾಯಗೊಳಿಸಿ ಮೊಬೈಲ್ ನ್ನು ಕಿತ್ತು ಪರಾರಿಯಾಗಿದ್ದು ಪ್ರಕರಣ ಧಾಖಲಾದ ಹಿನ್ನಲೆಯಲ್ಲಿ ಆರೋಪಿಗಳ ದಸ್ತಗಿರಿಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಆರ್.ಶ್ರೀನಿವಾಸ್ ಗೌಡ, ಐ.ಪಿ.ಎಸ್ ರವರ ನೇತ್ರತ್ವದ ರೌಡಿನಿಗ್ರಹ ದಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಇದೇ ಆರೋಪಿಗಳ ತಂಡ ಈ ಹಿಂದೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ರಾ.ಹೆ. 66 ರ ಬದಿಯಲ್ಲಿ ನಿಲ್ಲಿಸಿದ್ದ ಜನರೇಟ್ ನಿಂದ ತಮ್ಮ ಬಾಬ್ತು ಕಬ್ಬು ಜೂಸ್ ಟೆಂಪೋದಲ್ಲಿ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ಬ್ಯಾಟರಿಗಳನ್ನು ಕೂಡಾ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಬಂಧಿತ ಆರೋಪಿಗಳಿಂದ ಅಂದಾಜು 2.50,000ರೂ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ IPS ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು (ಕಾ & ಸು) ಹನುಮಂತರಾಯ ಐಪಿಎಸ್, ಪೊಲೀಸ್ ಉಪ-ಆಯುಕ್ತರು(ಅಪರಾಧ & ಸಂಚಾರ) ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಆರ್.ಶ್ರೀನಿವಾಸ್ ಗೌಡ, ಐ.ಪಿ.ಎಸ್ , ಪಣಂಬೂರು ಠಾಣಾ ಪಿ.ಐ ರಫೀಕ್ ಕೆ.ಎಮ್, ಪಿ.ಎಸ್.ಐ ಉಮೇಶ್ ಕುಮಾರ್.ಎಂ.ಎನ್, ಮಂಗಳೂರು ಉತ್ತರ ಉಪ-ವಿಭಾಗದ ರೌಡಿ ನಿಗ್ರಹದಳದ ಅಧಿಕಾರಿ/ಸಿಬ್ಬಂಧಿಗಳು, ಪಣಂಬೂರು ಮತ್ತು ಸುರತ್ಕಲ್ ಠಾಣಾ ಪೊಲೀಸ್ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love

Exit mobile version