ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಯ ಬಂಧನ
ಮಂಗಳೂರು: ನಗರದ ಮಾಲ್ ಒಂದರಲ್ಲಿ ಮಹಿಳೆಯೊಬ್ಬರ ಪರ್ಸ್ ಹಾಗೂ ಮೊಬೈಲ್ ಸುಲಿಗೆ ಮಾಡಿ ನಾಪತ್ತೆಯಾಗಿದ್ದ ಆರೋಪಿಯನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಳ ಕಸಬಾ ಗ್ರಾಮ ಮೇಲಿನ ಪನಂಗಿಲ ನಿವಾಸಿ ಮ್ಯಾಕ್ಷಿಂ ಆಲ್ವಿನ್ ರೊಡ್ರಿಗಸ್ ಎಂದು ಗುರುತಿಸಲಾಗಿದೆ.
ಒಂದು ವರ್ಷದ ಹಿಂದೆ ಈತ ಬಿಜೈಯಲ್ಲಿರುವ ಮಾಲ್ ಒಂದರ 2 ನೇ ಮಹಡಿಯಲ್ಲಿ ಮಹಿಳೆಯ ಪರ್ಸ್ ಹಾಗೂ ಮೊಬೈಲ್ ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ. ಈತನನ್ನು ಶನಿವಾರ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬಂಧಿಸಲಗಿದ್ದು ಈತನಿಂದ 2 ಮೊಬೈಲ್ ಹಾಗೂ 150ರೂ. ನಗದು ವಶಪಡಿಸಿಕೊಳ್ಳಲಾಗಿದೆ.