ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಯ ಬಂಧನ
ಮಂಗಳೂರು : ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಯಾದ ಮೊಹಮ್ಮದ್ ಆಫ್ರೀದ್ ಎಂಬವರನ್ನು ದಿನಾಂಕ 15-02-2019 ರಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿ, ಸುಲಿಗೆ ಮಾಡಿದ 5 ಮೊಬೈಲನ್ನು ಹಾಗೂ ತಕ್ಷೀರಿಗೆ ಉಪಯೋಗಿಸಿದ ಮೋಟಾರ್ ಸೈಕಲನ್ನು ಒಟ್ಟು 1,08,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಬಜಾಲ್ ಪಕ್ಕಲಡ್ಕ ನಿವಾಸಿ ಮೊಹಮ್ಮದ್ ಅಫ್ರೀದ್ (21) ಎಂದು
ದಿನಾಂಕ 20-01-2019 ರಂದು ರಾತ್ರಿ 08-45 ಗಂಟೆಗೆ ಮಂಗಳೂರು ನಗರದ ಗೂಡ್ಸ್ ಶೆಡ್ ನ ಪ್ರೇಂಡ್ಸ್ ಬಾರ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಎದುರಿನಿಂದ ಮೋಟಾರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಪಿರ್ಯಾದಿದಾರರ ಶರ್ಟಿನ ಕಿಸೆಗೆ ಕೈ ಹಾಕಿ ಕಿಸೆಯಲ್ಲಿದ್ದ ವಿವೋ ಕಂಪನಿ ಸುಮಾರು 28,000/ ಮೌಲ್ಯದ ಮೊಬೈಲ್ ನ್ನು ಬಲಾತ್ಕಾರವಾಗಿ ಎಳೆದುಕೊಂಡು ಪರಾರಿಯಾಗಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರಾದ ಮಾರಿಮುತ್ತುರವರು ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಪ್ರಕರಣದ ಆರೋಪಿ ಮೊಹಮ್ಮದ್ ಆಫ್ರೀದ್ ಎಂಬಾತನು ಮಂಗಳೂರು ನಗರ ಸೆಂಟ್ರಲ್ ಮಾರ್ಕೆಟ್ ನಲ್ಲಿರುವ ಇರುವ ಬಗ್ಗೆ ಖಚಿತ ವರ್ತಮಾನ ಪಡೆದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಕೆ.ಎಂ. ಶರೀಫ್ ರವರು ಸಿಬ್ಬಂದಿಗಳ ಸಹಾಯದಿಂದ ಆರೋಫಿಗಳನ್ನು ದಸ್ತಗಿರಿ ಮಾಡಿ ಈ ಪ್ರಕರಣದಲ್ಲಿ ಸುಲಿಗೆ ಮಾಡಿದ 01 ಮೊಬೈಲ್ ಹಾಗೂ ಆರೋಪಿತರು ಒಂದೂವರೆ ತಿಂಗಳ ಹಿಂದೆ ರಾತ್ರಿ ವೇಳೆ ದಕ್ಷಿಣ ಧಕ್ಕೆಯಲ್ಲಿ ನಡೆದುಕೊಂಡು ಹೋಗುವ ವ್ಯಕ್ತಿಗಳಿಂದ ಸುಲಿಗೆ ಮಾಡಿದ 04 ಮೊಬೈಲ್ ಗಳನ್ನು ಹಾಗೂ ತಕ್ಷೀರಿಗೆ ಉಪಯೋಗಿಸಿದ ಮೋಟಾರ್ ಸೈಕಲನ್ನು ಒಟ್ಟು 1,08,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಈ ಪ್ರಕರಣದಲ್ಲಿ ಒಬ್ಬ ಆರೋಪಿಯು ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್ ,ಐಪಿಎಸ್. ರವರ ನಿರ್ದೇಶನದಲ್ಲಿ ಉಪ ಪೊಲೀಸ್ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಹನುಮಂತರಾಯ, ಐಪಿಎಸ್ ಉಪ ಪೊಲೀಸ್ ಆಯುಕ್ತರಾದ (ಅಪರಾಧ ಮತ್ತು ಸಂಚಾರ) ಉಮಾಪ್ರಶಾಂತ್, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಭಾಸ್ಕರ್ ವಿ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಕೆ.ಎಮ್, ಶರೀಫ್ ರವರು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ, ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಮಂಜುಳಾ.ಎಲ್ ಹಾಗೂ ಠಾಣಾ ಸಿಬ್ಬಂದಿಗಳ ಸಹಕಾರದಿಂದ ಆರೋಪಿಗಳನ್ನು . ದಸ್ತಗಿರಿ ಮಾಡಿರುವುದಾಗಿದೆ.
.