Home Mangalorean News Kannada News ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

Spread the love

ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು: ಪೋಲಿಸ್ ಕಾನ್ಸ್ ಟೇಬಲ್ ಒರ್ವರ ಮೊಬೈಲ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ದಕ್ಷಿಣ ಠಾಣೆಯ ಪೋಲಿಸರು ಮತ್ತು ದಕ್ಷಿಣ ರೌಡಿ ನಿಗ್ರಹ ದಳದ ಸಿಬಂದಿಗಳು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಯತೀಶ್ ಎಮ್.ಎಸ್, ಅಶ್ರಫ್ @ ಮಹಮ್ಮದ್ ಅಶ್ರಫ್ @ನಿಜಾಮ್ ಮತ್ತು ಮಹಮ್ಮದ್ ಅಶ್ರಫ್ @ಅಜ್ಜು ಎಂದು ಗುರುತಿಸಲಾಗಿದೆ.

ಮಂಗಳೂರು ದಕ್ಷಿಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 3 ತಿಂಗಳ ಹಿಂದೆ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್ ಟೇಬಲ್ ಶ್ರೀನಿವಾಸ ಎಂಬವರು ಮಂಗಳೂರು ನಗರದ ನೆಹರೂ ಮೈದಾನದ ಒಳಭಾಗದಲ್ಲಿ ರಾತ್ರಿವೇಳೆ ನಡೆದುಕೊಂಡು ಬರುತ್ತಿದ್ದಾಗ 3 ಜನರು ಏಕಾಏಕಿ ಅವರನ್ನು ಅಡ್ಡಗಟ್ಟಿ, ಅವರ ಬಳಿ ಇದ್ದ ಒಪ್ಪೊ -57 ಕಂಪೆನಿಯ ಮೊಬೈಲ್ ಫೋನ್, ಪರ್ಸಿನಲ್ಲಿದ್ದ ರೂ 450 ಹಣವನ್ನು ಬಲತ್ಕಾರವಾಗಿ ಸುಲಿಗೆ ಮಾಡಿದ್ದರು.

ಪ್ರಕರಣದ ಪ್ರಮುಖ ಆರೋಪಿ ಯತೀಶ್ ಎಮ್ ಎಸ್ @ ಯತೀ ಎಂಬಾತನು ಮೂಲತಃ ಚಿಕ್ಕಮಗಳೂರು ನಗರದ ವಾಸಿಯಾಗಿದ್ದು, ಈತನ ಸಹಚರನಾದ ರವಿ @ ಶಂಕರಲಿಂಗೆಗೌಡ ಎಂಬವನೊಂದಿಗೆ ಸೇರಿಕೊಂಡು ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸರಗಳ್ಳತನ, ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ.

ಮೇಲ್ಕಂಡ ಪ್ರಕರಣದಲ್ಲಿ ಯತೀಶ್ @ ಯತೀ ಇನ್ನಿಬ್ಬರು ಆರೋಪಿಗಳಾದ ಅಶ್ರಫ್ @ ಮಹ್ಮದ್ ಅಶ್ರಫ್ @ ನಿಜಾಮ್ ಹಾಗೂ ಮಹ್ಮದ್ ಅಶ್ರಫ್ @ ಅಜ್ಜು ಎಂಬವರನ್ನು ದಸ್ತಗಿರಿ ಮಾಡಿ ಇವರಿಂದ ಒಪ್ಪೊ -57 ಕಂಪೆನಿಯ ಮೊಬೈಲ್ ಫೋನ್ ಜಫ್ತಿ ಮಾಡಿರುತ್ತಾರೆ.


Spread the love

Exit mobile version