ಮೋದಿ ಕಾರ್ಯಕ್ರಮ ರದ್ದುಗೊಳಿಸಿ, ದುರಂತದಲ್ಲಿ ನಿಧನ ಹೊಂದಿದ ಕಾರ್ಮಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ – ಉಡುಪಿ ಕಾಂಗ್ರೆಸ್
ಉಡುಪಿ: ಪ್ರದಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸುವ ಕಾರ್ಯಕ್ರಮದ ಹಿನ್ನಲೆಯಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಾಣ ಮಾಡಲು ಪೆಂಡಲ್ ಸಾಗಿಸುತ್ತಿದ್ದ ವಾಹನ ಅವಘಡ ಹೊಂದಿ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕಾರ್ಮಿಕರು ಮೃತ್ಯು ಹೊಂದಿರುವುದು ಖೇದಕರ, ಈ ದುರಂತವನ್ನು ಪರಿಗಣಿಸಿ ಬಿಜೆಪಿ ಸಮಾವೇಶವನ್ನು ರದ್ದುಪಡಿಸುವುದೇ ಪರಿಹಾರವೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ತುರ್ತು ಸಭೆಯು ಅಭಿಪ್ರಾಯಪಟ್ಟಿದೆ
ಜಿಲ್ಲಾ ಕಾಂಗ್ರೆಸ್ ತುರ್ತು ಸಭೆಯು ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಮೃತ್ಯು ಹೊಂದಿದ ಕಾರ್ಮಿಕರಿಗೆ ಸಂತಾಪ ಸೂಚಿಸಿ, ಬಡ ಕಾರ್ಮಿಕರಿಗೆ ಕುಟುಂಬಕ್ಕೆ ಬಿಜೆಪಿ ಭದ್ರತೆ ಒದಗಿಸಬೇಕಾಗಿದೆ. ಪ್ರಧಾನಿ ಮೋದಿಯವರ ಸಮಾವೇಶ ಪ್ರಯುಕ್ತ ಪೂರ್ವಭಾವಿ ತಯಾರಿ ನಡೆಸುತ್ತಿರುವಾಗಲೇ ಅವಘಡ ನಡೆದಿರುವುದು ಒಂದು ದುರಂತವೆನ್ನಬೇಕು. ನಿಧನ ಹೊಂದಿದ ಮೂವರು ಕಾರ್ಮಿಕರಿಗೆ ಪಕ್ಷದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ನಿಧನ ಹೊಂದಿದವರ ಸಂಬಂಧಿಕರಿಗೆ ಈ ದುಃಖವನ್ನು ಸಹಿಸುವ ಶಕ್ತಿ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. ಸಮಾವೇಶವನ್ನು ರದ್ದು ಪಡಿಸುವುದೇ ಇದಕ್ಕೆ ಸೂಕ್ತ ಪರಿಹಾರವಾಗಲಿದೆ.
ಇಂತಹ ದುರಂತಗಳು ನಡೆದಾಗ ಕಾಂಗ್ರೆಸ್ ಪಕ್ಷ ತಮ್ಮ ಕಾರ್ಯಕ್ರಮಗಳನ್ನು ರದ್ದುಪಡಿಸಿದ ನಿದರ್ಶನಗಳಿವೆ. ಮೋದಿಯವರ ಉಡುಪಿ ಆಗಮನ ಈ ಅವಘಡದಿಂದ ಕರಾಳ ದಿನವಾಗಿದೆ. ಸಭೆಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಬಿ. ನರಸಿಂಹ ಮೂರ್ತಿ, ಹರೀಶ್ ಕಿಣಿ, ದಿವಾಕರ ಕುಂದರ್, ಜನಾರ್ದನ ಭಂಡಾರ್ಕಾರ್, ಕಿಷನ್ ಹೆಗ್ಡೆ ಕೊಳ್ಕೆಬೈಲ್, ರಮೇಶ್ ಕಾಂಚನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ನಿತ್ಯಾನಂದ ಶೆಟ್ಟಿ, ಸತೀಶ್ ಮೀನ್ ಪಡುಕರೆ ಅಲ್ಲದೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಭಾಸ್ಕರ್ ರಾವ್ ಕಿದಿಯೂರು ನಿರೂಪಿಸಿ, ವಂದಿಸಿದರು.
ಹೌದು….ಶರತ್ ಮಡಿವಾಳ ಕೊಲೆ ಆದಾಗ ಸಿದ್ದರಾಮಯ್ಯರ ಸಭೆ ನಿಲ್ಲಿಸಿದ್ದಾರಾ…….