ಮೋದಿ ನಿಲುವುಗಳಿಗೆ ರಾಜೀನಾಮೆ ನೀಡಿದ ಸೆಂಥಿಲ್ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದಿತು – ಶಾಸಕ ಸುನೀಲ್
ಉಡುಪಿ: ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ರಾಜಿನಾಮೆ ಕೊಟ್ಟಿದ್ದಾರೆ ಮುಂದೆ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಬಹುದು ಎಂದು ಕಾರ್ಕಳದ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಕಾಶ್ಮೀರ ಹಾಗೂ ರಾಮ ಮಂದಿರ ವಿಚಾರದಲ್ಲಿ ಅಸಮಾಧಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಮೋದಿ ಕೇವಲ 370 ವಿಧಿಯನ್ನು ರದ್ದುಗೊಳಿಸಿದ್ದಾರೆ ಆದರೆ ಮುಂದೆ ಪಿಒಕೆ ಯನ್ನು ಕೂಡ ಪ್ರವೇಶ ಮಾಡುತ್ತೇವೆ ಅಂತಹ ಸಂದರ್ಭದಲ್ಲಿ ನಿಮ್ಮಂತಹ ಮನಸ್ಥಿತಿಯವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಕಾರಣ ಅಂತಹ ನಿಲುವು ತೆಗೆದುಕೊಳ್ಳಲು ಭಾರತ ಸರ್ಕಾರ ಸಜ್ಜಾಗಿದೆ ಎಂದರು. ಮೋದಿ ಸರಕಾರ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದೆ ಆದರೆ ಕೆಲವೊಂದು ಜಿಲ್ಲಾಧಿಕಾರಿಯಾಗಿದ್ದವರು ಅದನ್ನು ವಿರೋಧಿಸುತ್ತಾರೆ ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ನೀವು ತಮಿಳುನಾಡು ನಲ್ಲಿ ಯಾವುದೋ ರಾಜಕೀಯ ಪಕ್ಷದಿಂದ ಚುನಾವಣೆಗೆ ನಿಲ್ಲುವ ಸಲುವಾಗಿ ದೇಶದ ವ್ಯವಸ್ಥೆ ಯನ್ನು ಪ್ರಶ್ನೆ ಮಾಡಬೇಡಿಎಂದರು.
ಮೊದಲು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ.ಕೇಂದ್ರದಲ್ಲಿ ಯಾವ ಪಕ್ಷವೇ ಆಡಳಿತ ಮಾಡಲಿ,ಕೇಂದ್ರದ ನಿಲುವು ಸರಿ ಇಲ್ಲಾ ಅಂತಾರಲ್ಲಾ?ಇವರು ಕೇಂದ್ರದ ಅಡಿಯಲ್ಲೇ ಬರೋದು ಅಲ್ವಾ?ಯಾವ ಆಧಾರದ ಮೇಲೆ ಹೇಳಿದ್ದಾರೆ?ಕಾನೂನಿನಲ್ಲಿ ಅವಕಾಶ ಇದೆಯಾ?ಕೂಡಲೇ ಕ್ರಮ ಕೈಗೊಳ್ಳಿ.