Home Mangalorean News Kannada News ಮ0ಗಳೂರು :ನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ನಿರ್ವಹಣಾ ಕೇಂದ್ರ

ಮ0ಗಳೂರು :ನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ನಿರ್ವಹಣಾ ಕೇಂದ್ರ

Spread the love

ಮ0ಗಳೂರು : ಮಂಗಳುರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮ್ಮ ದೂರುಗಳನ್ನು ಆನ್‍ಲೈನ್‍ನಲ್ಲಿ ದಾಖಲಿಸುವ ಸಲುವಾಗಿ ಹೊಸ ತಂತ್ರಾಂಶ “ಜನಹಿತ” ಅಭಿವೃದ್ಧಿಪಡಿಸಲಾಗಿದ್ದು ಇದರ ಸದುಪಯೋಗ ಪಡೆಯಬಹುದಾಗಿದೆ.

ಆನ್‍ಲೈನ್‍ನಲ್ಲಿ ದೂರುಗಳನ್ನು ದಾಖಲಿಸಲು ಮಂಗಳೂರು ಮಹಾನಗರ ಪಾಲಿಕೆಯ ಅಧಿಕೃತ ವೆಬ್‍ಸೈಟ್  ನೋಡಬಹುದಾಗಿದೆ. ಈ ಕೇಂದ್ರವು ದಿನದ 24 ಗಂಟೆಯೂ ಹಾಗೂ ವಾರದ 7 ದಿನಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ. ದೂರುಗಳನ್ನು ದೂರವಾಣಿಯ ಮೂಲಕ 155313 , 0824-2220306 ಸಲ್ಲಿಸಬಹುದಾಗಿದೆ. ದಾಖಲಾದ ದೂರುಗಳನ್ನು ಕೂಡಲೇ ಸಂಬಂಧಪಟ್ಟ ವಿಭಾಗದ ಅಧಿಕಾರಿ/ ಸಿಬ್ಬಂದಿಗಳವರಿಗೆ ರವಾನಿಸಲಾಗುತ್ತದೆ.

 ಸಾರ್ವಜನಿಕರು ದೂರವಾಣಿ ಮೂಲಕ ದೂರುಗಳನ್ನು ನೀಡುವ ಜೊತೆಗೆ ತಮ್ಮ ಮೊಬೈಲ್ ನಂಬರನ್ನು ಕಡ್ಡಾಯವಾಗಿ ಒದಗಿಸಬೇಕು. ಇದರಿಂದ ದೂರಿನ ಸ್ಥಿತಿಗತಿಯ ಬಗ್ಗೆ ಮೊಬೈಲ್‍ಗೆ ಸಂದೇಶ ರವಾನಿಸಲಗುತ್ತದೆ ಎಂದು  ಮಹಾನಗರಪಾಲಿಕೆ ಆಯುಕ್ತರ  ಪ್ರಕಟಣೆ ತಿಳಿಸಿದೆ.


Spread the love

Exit mobile version