ದುಬಾಯಿಯಲ್ಲಿ ಒಂದು ಅಪೂರ್ವ “ಜ್ಞಾನ ಯಜ್ಞ” ಕಾರ್ಯಕ್ರಮ ಯಕ್ಷಮಿತ್ರರ “ವಿರೋಚನ – ತರಣಿಸೇನ” ಯಕ್ಷಗಾನ ಯಶಸ್ವಿ ಪ್ರದರ್ಶನ
ದುಬಾಯಿ: 2016 ಜೂನ್ 3ನೇ ತಾರೀಕು ಶುಕ್ರವಾರ ಸಂಜೆ 4.30 ಗಂಟೆಯಿಂದ ಶೇಖ್ ರಾಶೀದ್ ಸಭಾಂಗಣ – (ಇಂಡಿಯನ್ ಹೈಸ್ಕೂಲ್ ದುಬಾಯಿ) ಭವ್ಯ ರಂಗ ಮಂಟಪದಲ್ಲಿ ಒಂದು ಅಪೂರ್ವ “ಜ್ಞಾನ ಯಜ್ಞ” ಕಾರ್ಯಕ್ರಮ, ಯಕ್ಷಮಿತ್ರರು ಅರ್ಪಿಸಿದ ಯಕ್ಷಗಾನ “ವಿರೋಚನ – ತರಣಿಸೇನ” ಯಶಸ್ವಿ ಪ್ರದರ್ಶವಾಗಿ ಸಭಾಂಗಣದಲ್ಲಿ ಕಿಕ್ಕಿರಿದ ಕೊಲ್ಲಿನಾಡಿನ ಯಕ್ಷಗಾನ ಪ್ರೇಮಿಗಳ ಮನಸೆಳೆಯಿತು.
ಶ್ರೀ ಲಕ್ಷ್ಮಿಕಾಂತ್ ಮತ್ತು ಶ್ರೀ ವೆಂಕಟೇಶ್ ಶಾಸ್ತ್ರಿಯವರ ಪೌರೊಹಿತ್ಯದಲ್ಲಿ ಚೌಕಿ ಪೂಜೆ, ರಂಗಪೂಜೆ ನಡೆದು ನಂತರ ದೀಪ ಬೆಳಗಿಸುವುದರೊಂದಿಗೆ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾದ ಶ್ರೀಯುತರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ಶೇರಿಗಾರ್, ಪ್ರೇಂನಾಥ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಸತೀಶ್ ವೆಂಕಟರಮಣ, ರಘುರಾಮ ಶೆಟ್ಟಿ, ಮತ್ತು ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಹಾಗೂ ಯಕ್ಷಮಿತ್ರರ ಮುಖ್ಯಸ್ಥರಾದ ಶ್ರೀ ದಿನೇಶ್ ಶೆಟ್ಟಿ, ಚಿದಾನಂದ ಪೂಜಾರಿ ಇವರುಗಳು ವೇದಿಕೆಯಲ್ಲಿ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ಕಟೀಲು ಮೇಳದ ಪ್ರಸಿದ್ದ ಭಾಗವತರಾದ ಸುಮಧುರ ಕಂಠದ ಪಟ್ಲ ಸತೀಶ್ ಶೆಟ್ಟಿ ಯವರು ಮತ್ತು ಶ್ರೀ ರವಿಚಂದ್ರ ಕನ್ನಡಿಕಟ್ಟೆ ದುಬಾಯಿಗೆ ಆಗಮಿಸಿ ತಮ್ಮ ಭಾಗವತಿಕೆಯ ಮೂಲಕ ಯಕ್ಷಗಾನ ಪ್ರಿಯರ ಮನತಣಿಸಿದರು. ಚೆಂಡೆ ವಾದನದಲ್ಲಿ ಶ್ರೀ ಗುರುಪ್ರಸಾದ್ ಬೊಳ್ಳಿಂಜಡ್ಕ, ಮದ್ದಳೆಯಲ್ಲಿ ಶ್ರೀ ವೆಂಕಟೇಶ್ ಶಾಸ್ತ್ರಿ, ಶ್ರೀ ಮಧೂರ್ ಲಕ್ಷ್ಮಿನಾರಾಯಣ ಶರ್ಮ, ಭವಾನಿ ಶಂಕರ್ ಶರ್ಮಾ ಚಕ್ರತಾಳದಲ್ಲಿ ಶ್ರೀ ಚಂದ್ರಮೋಹನ್ ಸಾಥ್ ನೀಡಿದರು.
ಮುಮ್ಮೇಳದಲ್ಲಿ: ಸ್ಥಳಿಯ ಪರಿಪಕ್ಕ ಕಲಾವಿದರಾದ ಶೇಕರ್ ಡಿ ಶೆಟ್ಟಿಗಾರ್ ರವರ ದಿಗ್ದರ್ಶನದಲ್ಲಿ, ಕಿಶೋರ್ ಗಟ್ಟಿ ಉಚ್ಚಿಲ, ಚಿದಾನಂದ ಪೂಜಾರಿ ವಾಮಂಜೂರು, ಕೃಷ್ಣ ಪ್ರಸಾದ್ ಭಟ್, ರವಿ ಭಟ್, ಪ್ರಭಾಕರ ಸುವರ್ಣ, ಸುಧಾಕರ್ ತುಂಬೆ, ಬಾಲಕೃಷ್ಣ ಶೆಟ್ಟಿಗಾರ್, ಭವಾನಿ ಶಂಕರ್ ಶರ್ಮಾ, ವಾಸು ಬಾಯರು, ಕು| ಶರಣ್ಯ ವೆಂಕಟೇಶ್ ಭಟ್, ಪ್ರಾಪ್ತಿ ಜಯಾನಂದ್ ಪಕ್ಕಳ, ಅದಿತಿ ದಿನೇಶ್ ಶೆಟ್ಟಿ, ಆದಿತ್ಯ ದಿನೇಶ್ ಶೆಟ್ಟಿ, ತನೀಶ್ ಪ್ರಕಾಶ್ ಪಕ್ಕಳ, ತನ್ವಿ ಪ್ರಸನ್ನ, ಅನ್ವಿ ಜಗನ್ನಾಥ್ ಬೆಳ್ಳಾರೆ, ಯಶಸ್ವಿನಿ ಶೇಖರ್ ಪೂಜಾರಿ, ಕೃಷ್ಣ ರಾಜ ರಾವ್ ಅಬುಧಾಬಿ, ಸ್ಮೃತಿ ಎಲ್ ಭಟ್, ಮನಸ್ವಿ ಶರ್ಮಾ, ಗಿರಿಶ್ ನಾರಾಯಣ್ ಕಾಟಿಪಳ್ಳ, ಸಂದೀಪ್ ಶೆಟ್ಟಿ, ಸೀತರಾಮ್ ಶೆಟ್ಟಿ, ಜಯಂತ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ವಸಂತ್ ಶೇರ್ವೆಗಾರ್, ಅನಿಕೇತ್ ಶರ್ಮಾ, ಪ್ರತೀಕ್ ಪಕ್ಕಳ, ಸುಶಾಂತ್ ರಾಂ ಜೆಪ್ಪು, ಸಮಾಂತ ಹೆಗ್ಡೆ, ಶರಥ್ ಪೂಜಾರಿ, ಸ್ವಾತಿ ಶರತ್ ಸರಳಾಯ, ದಕ್ಷಾ ರವೀಂದ್ರ ಕೋಟ್ಯಾನ್, ಸಾತ್ವಿಕ್ ಎಲ್ ಭಟ್, ಸತೀಶ್ ಶೆಟ್ಟಿಗಾರ್, ಅಪೂರ್ವ ದುರ್ಗೇಶ್ ಶೆಟ್ಟಿಗಾರ್, ಯಶಸ್ವಿನಿ ಶೇಖರ್ ಪೂಜಾರಿ ಮತ್ತು ಎಶಿಕ ಶೇಖರ್ ಪೂಜಾರಿ ತಮ್ಮ ಕಲಾಕೌಶಲ್ಯಕ್ಕೆ ಯಕ್ಷಗಾನ ವೇದಿಕೆ ಸಾಕ್ಷಿಯಾಯಿತು.
ಮುಂದಿನ ಪೀಳಿಗೆಯ ಯಕ್ಷಗಾನ ಕಲೆಯ ರಾಯಭಾರಿಗಳು:
ಈ ಬಾರಿಯ ಯಕ್ಷಗಾನ ಪ್ರಸಂಗದಲ್ಲಿ ಕೊಲ್ಲಿನಾಡಿನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವ ಐದು ವರ್ಷದಿಂದ ಹದಿನೈದು ವಯಸ್ಸಿನ ಒಳಗಿನ ಮಕ್ಕಳು ಮಕ್ಕಳು ತಮ್ಮ ಕಲಿಕೆಯೊಂದಿಗೆ ಯಕ್ಷಗಾನ ಕಲೆಯನ್ನು ಬಾಲ್ಯದಲ್ಲೇ ಮೈಗೂಡಿಸಿಕೊಂಡು ತಮ್ಮ ಅಪೂರ್ವ ಕಲಾಪ್ರತಿಭೆಯನ್ನು ವೇದಿಕೆಯ ಮೇಲೆ ಪ್ರದರ್ಶಿಸಿ ಜನಮೆಚ್ಚುಗೆಯನ್ನು ಪಡೆದು ಮುಂದಿನ ಪೀಳಿಗೆಯ ಸಾಂಸ್ಕೃತಿಕ ರಾಯಭಾರಿಗಳಾದರು.
ವೇಷ ಭೂಷಣ ಮತ್ತು ವರ್ಣಾಲಾಂಕಾರ ಶ್ರೀ ಗಂಗಾಧರ ಶೆಟ್ಟಿಗಾರ್ ಮತ್ತು ಶ್ರೀ ಲಕ್ಷ್ಮಣ್ ಕುಮಾರ್ ಮರಕಡ ರಂಗ ಸಜ್ಜಿಕೆಯಲ್ಲಿ ದಿನೇಶ್ ಬಿಜೈ, ಭಾಸ್ಕರ್ ನೀರ್ ಮಾರ್ಗ ಮತ್ತು ಆನಂದ್ ಸಾಲಿಯಾನ್ ಉಳ್ಳಂಜೆ ಇವರ ಹಸ್ತಕೌಶಲ್ಯದಲ್ಲಿ ವೇಷಭೂಷಣಗಳು ಆಕರ್ಷಕವಾಗಿ ಮನಸೆಳೆಯಿತು.
ಕಲಾವಿದರಿಗೆ ಸನ್ಮಾನ ಗೌರವ:
ಯು.ಎ.ಇ. ಗೆ ತಾಯಿನಾಡಿನಿಂದ ಆಗಮಿಸುವ ಕಲಾವಿದರಿಗೆ ಸಂಪ್ರದಾಯದಂತೆ, ಅನಿವಾಸಿ ಕನ್ನಡಿಗರ ಪರವಾಗಿ ಯಕ್ಷಮಿತ್ರರು ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.
ಶ್ರೀ ರವಿಚಂದ್ರ ಕನ್ನಡಿಕಟ್ಟೆ – ಪ್ರಖ್ಯಾತ ಯಕ್ಷಗಾನ ಭಾಗವತರು:
ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಸೇರ್ಪಡೆಯಾಗಿ ನಾಟ್ಯಾಭ್ಯಾಸವನ್ನು ಕಲಿತು ನಂತರ ಸುರತ್ಕಲ್ ಮೇಳದಲ್ಲಿ ವೇಷಧಾರಿಯಾಗಿ ಎರಡು ವರ್ಷ ಸೇವೆ ಸಲ್ಲಿಸಿ ನಂತರ ಮೇಳದ ಭಾಗವತರಾದ ಪದ್ಯಾಣ ಗಣಪತಿ ಭಟ್ ರವರಲ್ಲಿ ಹಾಡುಗಾರಿಕೆ ಕಲಿತಿರುವ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರು ಮಂಗಳಾದೇವಿ ಮೇಳದಲ್ಲಿ ಹಾಡುಗಾರಿಕೆಯಲ್ಲಿ 8 ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಹೊಸನಗರ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತಿದ್ದು ಜನಮಾನಸದಲ್ಲಿ ಅತ್ಯಂತ ಗೌರವ ಸ್ಥಾನದಲ್ಲಿದ್ದಾರೆ. ಇವರನ್ನು “ವಿರೋಚನ-ತರಣಿಸೇನ” ಪ್ರಸಂಗದಲ್ಲಿ ಭಾಗವತರಾಗಿ ಅಪೂರ್ವ ಕಂಠಸಿರಿಯಲ್ಲಿ ಅಭಿಮಾನಿಗಳ ಮನಸೆಳೆದಿರುವ ಶುಭ ಸಂದರ್ಭದಲ್ಲಿ ಅಭಿನಂದಿಸಿ, ಕೊಲ್ಲಿ ನಾಡಿನ ಯಕ್ಷಕಲಾ ಅಭಿಮಾನಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಶಶಿಕಾಂತ ಶೆಟ್ಟಿ – ಕಾರ್ಕಳ- ಪ್ರಖ್ಯಾತ ಯಕ್ಷಗಾನ ಸ್ತ್ರೀವೇಷಧಾರಿ:
ಕಾರ್ಕಳದ ಮಹಾಮ್ಮಾಯಿ ಮುಖ್ಯಪ್ರಾಣ ಯಕ್ಷಗಾನ ಸಂಘದಿಂದ ಗುರುಗಳಾದ ಶ್ರೀ ಸತೀಶ್ ಎಂ. ರವರ ಅನುಗ್ರಹದೊಂದಿಗೆ ರಂಗಪ್ರವೇಶ ಪಡೆದಿರುವ ಪ್ರತಿಯೊಂದು ಹೆಜ್ಜೆಯಲ್ಲಿ ಪರಿಪಕ್ವತೆಯನ್ನು ಸಾಧಿಸಿ ಪ್ರಸ್ತುತ ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿಯಗಿ, ತೆಂಕುತಿಟ್ಟಿನ ಪ್ರಸಿದ್ದ ಮೇಳಗಳಾದ ಕರ್ನಾಟಕ, ಸುರತ್ಕಲ್ ಮೇಳಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ನಂತರ ಸಾಲಿಗ್ರಾಮ ಮೇಳದಲ್ಲಿ ತಮ್ಮ ಕಲಾಕೌಶಲ್ಯಕ್ಕೆ ಜೀವ ತುಂಬಿದ ಶ್ರೀ ಶಶಿಕಾಂತ ಶೆಟ್ಟಿ – ಕಾರ್ಕಳ ಇವರನ್ನು “ವಿರೋಚನ-ತರಣಿಸೇನ” ಪ್ರಸಂಗದಲ್ಲಿ ವಿಶೇಷ ವೇಷಧಾರಿಯಾಗಿ ಅಪೂರ್ವ ಅಭಿಯಕ್ಕೆ ಅಭಿನಂದಿಸಿ, ಕೊಲ್ಲಿ ನಾಡಿನ ಯಕ್ಷಕಲಾ ಅಭಿಮಾನಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಗುರುಪ್ರಸಾದ್ ಬೊಳ್ಳಿಂಜಡ್ಕ- ಪ್ರಖ್ಯಾತ ಚಂಡೆ ವಾದಕರು:
ಧರ್ಮಸ್ಥಳ ಯಕ್ಷಗಾನ ಕಲಾ ಕೇಂದ್ರದಲ್ಲಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಲ್ಲಿ ಚೆಂಡೆವಾದನ ಕಲಿತಿದ್ದು ನಂತರ ಬಲಿಪ ನಾರಾಯಣ ಭಾಗವತರ ಜೊತೆ 3 ವರ್ಷ ತಿರುಗಾಟ, ಪ್ರಸ್ತುತ ಪಟ್ಲ ಸತೀಶ್ ಶೆಟ್ಟಿಯವರ ಜೊತೆಯಲ್ಲಿ ಕಳೆದ ಹದಿನೇಳು ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಗುರುಪ್ರಸಾದ್ ಬೊಳ್ಳಿಂಜಡ್ಕ ಇವರು “ವಿರೋಚನ-ತರಣಿಸೇನ” ಪ್ರಸಂಗದಲ್ಲಿ ತಮ್ಮ ಅದ್ಭುತ ಹಸ್ತಕೌಶಲ್ಯದಿಂದ ಚೇಂಡೆ ನುಡಿಸಿ ಪ್ರೇಕ್ಷಕರ ಮನಗೆದ್ದಿರುವ ಶುಭ ಸಂದರ್ಭದಲ್ಲಿ ಕೊಲ್ಲಿ ನಾಡಿನ ಯಕ್ಷಕಲಾ ಅಭಿಮಾನಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಸತೀಶ್ ಶೆಟ್ಟಿ ಪಟ್ಲ – ಸುಮಧುರ ಕಂಠಸಿರಿಯ ಭಾಗವತರು:
ಶ್ರೀ ಸತೀಶ್ ಶೆಟ್ಟಿ ಪಟ್ಲ ರವರು ಊರಿನಿಂದ ಆಗಮಿಸಿ ಕಳೆದ ಕೆಲವು ವರ್ಷಗಳಿಂದ ಯಕ್ಷಗಾನ ಪ್ರಸಂಗವನ್ನು ತಮ್ಮ ಸುಮಧುರ ಕಂಠಸಿರಿಯ ಭಾಗವತಿಕೆಯಲ್ಲಿ ನಡೆಸಿಕೊಂಡು ಬರುತ್ತಿದ್ದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ. ಇ ಬಾರಿಯೂ ಪ್ರಸಂಗವನ್ನು ನಡೆಸಿಕೊಟ್ಟಿರುವ ಈ ಶುಭ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಸುಧೀರ್ ಕುಮಾರ್ ಶೆಟ್ಟಿ, ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಮುಂಬೈ ಹಾಗೂ ಮುಖ್ಯ ಅತಿಥಿಗಳು ಸನ್ಮಾನ ಪ್ರಕ್ರಿಯೆಯಲ್ಲಿ ಭಾಗಿಗಳಾದರು. ಹಾಗೂ ವೇಷ ಭೂಷಣ ಮತ್ತು ವರ್ಣಾಲಾಂಕಾರ ಶ್ರೀ ಗಂಗಾಧರ ಶೆಟ್ಟಿಗಾರ್ ಮತ್ತು ಶ್ರೀ ಲಕ್ಷ್ಮಣ್ ಕುಮಾರ್ ಮರಕಡ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೊಲ್ಲಿನಾಡಿನಲ್ಲಿ ಯಕ್ಷಗಾನ ಕಲಾಪ್ರದರ್ಶನದ ಪವಿತ್ರ ಕಾರ್ಯಕ್ಕೆ ಕೊಲ್ಲಿನಾಡಿನ ಪ್ರಮುಖ ಉಧ್ಯಮಿಗಳು ಹಾಗೂ ಕಲಾಪ್ರೇಮಿಗಳು ಸಹಕಾರ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿರುವ ಎಲ್ಲಾ ಪ್ರಮುಖ ಪ್ರಾಯೋಜಕರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
“ಯಕ್ಷಧ್ರುವ ಪಟ್ಲ ಫೌಂಡೆಶನ್ ಟ್ರಸ್ಟ್”:
ಶ್ರೀ ಸತೀಶ್ ಶೆಟ್ಟಿ ಪಟ್ಲ ರವರು ಸ್ಥಾಪಿಸಿರುವ “ಯಕ್ಷಧ್ರುವ ಪಟ್ಲ ಫೌಂಡೆಶನ್ ಟ್ರಸ್ಟ್” ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ದುಬಾಯಿಯಲ್ಲಿ ಘಟಕ ಸ್ಥಾಪನೆ ಬಗ್ಗೆ ಮಾಹಿತಿ ನೀಡಿ ಸರ್ವರ ಸಹಕಾರ ಕೋರಲಾಯಿತು.
ಯು.ಎ.ಇ. ಗೆ ಯಕ್ಷಗಾನ ವೀಕ್ಷಿಸಲು ದೂರದ ಮುಂಬಯಿನಿಂದ ಶ್ರೀ ಅಶೋಕ್ ಶೆಟ್ಟ್, ಪ್ರವೀಣ್ ಕುಮಾರ್ ಶೆಟ್ಟಿ ಕೋಂಚಾಡಿ, ಶ್ರೀ ರಮಾನಂದ್ ಶೆಟ್ಟಿ – ಮಸ್ಕತ್ ನಿಂದ ಆಗಮಿಸಿದುಉ ಇವರುಗಳನ್ನು ಪುಷ್ಪಗುಛ್ಚ ನೀಡಿ ಗೌರವಿಸಲಾಯಿತು.
ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ, ಶ್ರೀ ಚಿದಾನಂದ ಪೂಜಾರಿ ಮತ್ತು ತಂಡದವರು ಕಳೆದ ಆರು ತಿಂಗಳಿನಿಂದ ವ್ಯವಸ್ಥಿತ ಪೂರ್ವ ತಯಾರಿ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿದೆ.
ಶ್ರೀ ವಿಠಲ್ ಶೆಟ್ಟಿ ಮತ್ತು ಶ್ರೀ ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಯು.ಎ.ಇ. ಯಲ್ಲಿ ಯಕ್ಷಮಿತ್ರರ 13ನೇ ವರ್ಷದ ಕಲಾಕಾಣಿಕೆ ಯಶಸ್ವಿಯಾಗಿ ಸರ್ವರ ಅಭಿನಂದನೆಗೆ ಪಾತ್ರವಾಗಿ ದಾಖಲೆಯನ್ನು ನಿರ್ಮಿಸಿದೆ
ಬಿ. ಕೆ. ಗಣೇಶ್ ರೈ – ಯು.ಎ.ಇ.