Home Mangalorean News Kannada News ಯಶಸ್ವಿನಿ ನೊಂದಣಿ ಪ್ರಕ್ರಿಯೆ ಪ್ರಾರಂಭ

ಯಶಸ್ವಿನಿ ನೊಂದಣಿ ಪ್ರಕ್ರಿಯೆ ಪ್ರಾರಂಭ

Spread the love

ಯಶಸ್ವಿನಿ ನೊಂದಣಿ ಪ್ರಕ್ರಿಯೆ ಪ್ರಾರಂಭ

ಮ0ಗಳೂರು : 2017-18 ನೇ ಸಾಲಿಗೆ ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆ ಹಾಗೂ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯ ನೊಂದಣಿ ಪ್ರಕ್ರಿಯೆಯು ಮೇ 01 ರಿಂದ ಪ್ರಾರಂಭವಾಗಿದೆ

ಈ ಯೋಜನೆಯಡಿ ನೊಂದಣಿಯಾಗ ಬಯಸುವವರು ನೊಂದಣಿ ದಿನಾಂಕಕ್ಕೆ ಸಹಕಾರ ಸಂಘದಲ್ಲಿ ಸದಸ್ಯರಾಗಿ ಮೂರು ತಿಂಗಳು ಕಳೆದಿರಬೇಕು. ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ವಾರ್ಷಿಕ ವಂತಿಕೆಯನ್ನು ಪ್ರತಿಯೊಬ್ಬರಿಗೆ ರೂ.300 ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸದಸ್ಯರಿಗೆ  ರೂ. 50 ನಿಗದಿಗೊಳಿಸಲಾಗಿದೆ. ನಗರ ಯಶಸ್ವಿನಿ ಯೋಜನೆಯಡಿ ವಾರ್ಷಿಕ ವಂತಿಕೆಯನ್ನು ಪ್ರತಿಯೊಬ್ಬರಿಗೆ ರೂ.710 ಗಳು ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸದಸ್ಯರಿಗೆ  ರೂ. 110 ಗಳನ್ನು ನಿಗದಿಗೊಳಿಸಲಾಗಿದೆ. ಈ ಯೋಜನೆಯಡಿ ಒಟ್ಟು 823 ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಈ ಯೋಜನೆಯ ನೊಂದಣಿ ಅವಧಿಯು ಜೂನ್ 30 ಕ್ಕೆ ಮುಕ್ತಾಯಗೊಳ್ಳುವುದರಿಂದ ಜಿಲ್ಲೆಯ ಸಹಕಾರ ಸಂಘಗಳ ಸದಸ್ಯರುಗಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯನ್ನು ದೂರವಾಣಿ ಸಂಖ್ಯೆ:0824-2440291, 0824-2420543, 08251 – 230339 ಸಹಕಾರ ಸಂಘಗಳ ಉಪನಿಬಂಧಕರು, ದ.ಕ.ಜಿಲ್ಲೆ,ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love

Exit mobile version