ಯಶಸ್ವಿ ಕ್ಯಾನ್ಸರ್ ನಿಭಾವಣೆ: ನಗರದ ಕುಟುಂಬ ವೈದ್ಯರ ಕೂಟದ ವಿಚಾರ ಸಂಕಿರಣ
ಎ.ಜೆ. ಗ್ರ್ಯಾಂಡ್ ಹೋಟೆಲ್ನಲ್ಲಿ ನಗರದ ಕುಟುಂಬ ವೈದ್ಯರ ಸಂಘಟನೆ ಹಾಗೂ ಎಜೆ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಜಂಟಿ ಆಶ್ರಯದಲ್ಲಿ ಜರುಗಿದ ಕ್ಯಾನ್ಸರ್ ಚಿಕಿಸ್ತೆ ಏನು ಎತ್ತ ಹಾಗೂ ನಾವೆಷ್ಟು ತಿಳಿದಿದ್ದೇವೆ ಯೆಂಬ ವಿಚಾರಸಂಕಿರಣ ದಲ್ಲಿ ಭಾಗವಹಿಸಿದ ಎಜೆ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ಡಾ ಕಮಲಾಕ್ಷ ಶೆಣೈ ಹಾಗೂ ತಂಡ ಮಾಹಿತಿಯನ್ನು ನಗರದ ಕುಟುಂಬ ವೈದ್ಯರ ಜೊತೆ ಹಂಚಿಕೊಂಡು, ಕ್ಯಾನ್ಸರ್ ನಿಭಾವಣೆ ಬರೀ ಒಬ್ಬರ ಕೆಲಸವಲ್ಲ ಅದೂ ಒಂದಷ್ಟು ತಜ್ಞ ವೈದ್ಯರ ತಂಡದ ಕೆಲಸ ಎಂದರು.
ಎಜೆ ಕ್ಯಾನ್ಸರ್ ಆಸ್ಪತ್ರೆಯ ತಜ್ಞರಾದ ಡಾ ರಚನ್ ಶೆಟ್ಟಿ, ಡಾ ಕವಿತಾ, ಡಾ ಸುರೇಶ್ ಕಾರಂತ್,ಡಾ ನವೀನ್ ರುಡಾಲ್ಫ್ , ಡಾ ವಿಶ್ವನಾಥ, ಡಾ ಸುಜಿತ್ ರೈ ಮುಂತಾದವರು ಕ್ಯಾನ್ಸರ್ ಚಿಕಿಸ್ತಾ ಕ್ಷೇತ್ರದಲ್ಲಿಯ ನೂತನ ಬೆಳವಣಿಗೆಗಳನ್ನು ಹಂಚಿಕೊಂಡರು.
ಪ್ರೀತಮ್ ವಾಸ್,ಎ.ಜೆ ಆಸ್ಪತ್ರೆಯ ಮಾರ್ಕೆಟಿಂಗ್ ವ್ಯವಸ್ಥಾಪಕರು,ಆಸ್ಪತ್ರೆಯ ಸಮಗ್ರ ಸೌಲಭ್ಯಗಳು ಮತ್ತು ಸೇವೆಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಿದರು.
ಅಧ್ಯಕ್ಷ ಡಾ ವಿವೇಕಾನಂದ ಭಟ್ ಸ್ವಾಗತಿಸಿದರು, ಮಾಜಿ ಅದ್ಯಕ್ಷ ಹಾಗೂ ಕೋಶಾಧಿಕಾರಿ ಡಾ ಅಣ್ಣಯ್ಯ ಕುಲಾಲ್ ಉಲ್ತೂರು ತಜ್ಞರನ್ನು ಪರಿಚಯಿಸಿದರು, ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಡಾ ಜಿಕೆ ಭಟ್ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸಿದರು, ದೊಡ್ಡ ಸಂಖ್ಯೆ ಯಲ್ಲಿ ಹಾಜರಿದ್ದ ನಗರದ ಹಿರಿಕಿರಿಯ ಕುಟುಂಬ ವೈದ್ಯರು ಹಾಗು ಸರಕಾರಿ ವೈದ್ಯರುಗಳ ಸಭೆಯಲ್ಲಿ ಡಾ ಜೆ ಏನ್ ಭಟ್ ಪ್ರಾರ್ಥಿಸಿ ವಂದಿಸಿದರು.