ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ನೀಲಾವರ ಗೋಶಾಲೆಯ 33 ಗೋಪಾಲಕರಿಗೆ ಗೌರವಾರ್ಪಣೆ
ಉಡುಪಿ: ನೀಲಾವರ ಗೋಶಾಲೆಯ ಗೋವುಗಳ ನಿರ್ವಹಣೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ 33 ಗೋಪಾಲಕರನ್ನು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಯಶ್ ಪಾಲ್ ಸುವರ್ಣ ಸನ್ಮಾನಿಸಿ ಗೌರವಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬವನ್ನು ನೀಲಾವರ ಗೋಶಾಲೆಯ 25 ಗೋವುಗಳನ್ನು ದತ್ತು ಸ್ವೀಕಾರ ದ ಮೂಲಕ ವಿಶಿಷ್ಟವಾಗಿ ಆಚರಿಸಿರುವ ಯಶ್ ಪಾಲ್ ಸುವರ್ಣ ರವರು, ಇಂದು ನೀಲಾವರ ಗೋಶಾಲೆಯಲ್ಲಿ ಎಲೆ ಮರೆಯ ಕಾಯಿಯಂತೆ ಅಮೂಲ್ಯ ಸೇವೆ ಸಲ್ಲಿಸುತ್ತಾ ಗೋಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಗೋಪಾಲಕರಿಗೆ ಉಡುಗೊರೆ ನೀಡಿ ಗೌರವಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ವಾಸುದೇವ ಭಟ್ ಪೆರಂಪಳ್ಳಿ, ಬಿಜೆಪಿ ಕಾಪು ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಪಿತ್ರೋಡಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಹೇಶ್ ಬೈಲೂರು, ಶ್ರೀ ಯಾದವ ಪೂಜಾರಿ ಕಾಪು, ನೀತಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು.