Home Mangalorean News Kannada News ಯಾದಗಿರಿ ಪಿಎಸ್ ಐ ಪರಶುರಾಮ್ ಹೃದಯಾಘಾತದಿಂದ ನಿಧನ!

ಯಾದಗಿರಿ ಪಿಎಸ್ ಐ ಪರಶುರಾಮ್ ಹೃದಯಾಘಾತದಿಂದ ನಿಧನ!

Spread the love
RedditLinkedinYoutubeEmailFacebook MessengerTelegramWhatsapp

ಯಾದಗಿರಿ ಪಿಎಸ್ ಐ ಪರಶುರಾಮ್ ಹೃದಯಾಘಾತದಿಂದ ನಿಧನ!

ಯಾದಗಿರಿ: ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಗುರುವಾರ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಶುಕ್ರವಾರ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನಿನ್ನೆ ಸಂಜೆ ವೇಳೆ ನಗರ ಠಾಣೆಯಿಂದ ಹೂವಿನ ಸುರಿಮಳೆಯೊಂದಿಗೆ ಅಭಿಮಾನದ ಬೀಳ್ಕೊಡುಗೆಯನ್ನು ಪರಶುರಾಮ ಪಡೆದಿದ್ದರು. ಆದ್ರೆ ರಾತ್ರಿ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕೊಪ್ಪಳ ಜಿಲ್ಲೆಯವರಾದ ಪರಶುರಾಮ್ 2017 ಬ್ಯಾಚ್ PSI ಆಗಿ ಆಯ್ಕೆಯಾಗಿದ್ದರು. ಯಾದಗಿರಿ ಜಿಲ್ಲೆಯಲ್ಲಿ ಪಿಎಸ್ಐ ಆಗಿ ಉತ್ತಮ ಸೇವೆ ಸಲ್ಲಿಸಿ ಖ್ಯಾತಿ ಗಳಿಸಿದ್ದರು.


Spread the love
RedditLinkedinYoutubeEmailFacebook MessengerTelegramWhatsapp

Exit mobile version