Home Mangalorean News Kannada News ಯುಎಇ: ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ

ಯುಎಇ: ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ

Spread the love

ಯುಎಇ: ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ

ಯುಎಇ: ಜ.18ರಂದು ಯುಎಇಯಲ್ಲಿ ನಡೆಯಲಿರುವ ಅನಿವಾಸಿ ಕನ್ನಡಿಗರ ಕ್ರಿಕೆಟ್ ಹಬ್ಬ ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಖ್ಯಾತ ಉದ್ಯಮಿ ಸರ್ವೋತ್ತಮ ಶೆಟ್ಟಿಯವರು ಕರ್ನಾಟಕ ಪ್ರೀಮಿಯರ್ ಲೀಗ್‌ನ ಟ್ರೋಫಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ಕೆಪಿಎಲ್ ಆಯೋಜಕರಾದ ತನ್ವೀರ್ ಖಾಝಿ, ರೋವೆಲ್, ಹಮ್ದಾನ್, ಕೆಪಿಎಲ್ ತಂಡಗಳ ಮಾಲಕರು, ನಾಯಕರು, ಮ್ಯಾನೇಜರ್‌ಗಳು ಉಪಸ್ಥಿತರಿದ್ದರು.

ಜನವರಿ 18ರಂದು ಯುಎಇನ ಅಜ್ಮಾನ್‌ನ ಹಮ್ರಿಯಾ ಕ್ರಿಕೆಟ್ ಗ್ರೌಂಡ್‌ನಲ್ಲಿ ಕೆಪಿಎಲ್ ಸೀಸನ್ 1 ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ.

ಎಸ್‌ಎಂ ಬ್ಯಾರಿ ಮಾಲಕತ್ವದ ಅಲ್ತಾಫ್ ಶನಾನ್ ನಾಯಕತ್ವದ ಯೆಸ್‌ಯೆನ್ ಡೆಕ್ ಉಚ್ಚಿಲ, ದೀಪಕ್ ಪಿ ಮಾಲಕತ್ವದ ಪ್ರವೀಣ್ ಆಚಾರ್ಯ ನಾಯಕತ್ವದ ಪಡೀಲ್ ಚಾಲೆಂಜರ್‍ಸ್ ಮಂಗಳೂರು, ಶೇಖ್ ಮುಜೀಬುರ್ ರೆಹ್ಮಾನ್, ಅಬ್ದುಲ್ ಹಮೀದ್ ಮಾಲಕತ್ವದ ಅಬ್ದುಲ್ ಸಮೀರ್ ನಾಯತ್ವದ ಕೂರ್ಗ್ ಯುನೈಟೆಡ್ ದುಬೈ, ಸಾಮ್ನಿ ಮಾಲಕತ್ವದ ರಾವೆಲ್ ನಾಯಕತ್ವದ ಇಲೆವೆನ್ ವಾರಿಯರ್‍ಸ್ ಬ್ಯಾಂಗಲೋರ್, ಸೈಯದ್ ಫೈಝಲ್ ಮಾಲಕತ್ವದ ಶಿವ ನಾಯಕತ್ವದ ಆಟೋ ಡೀಲ್ ಮೂಡಬಿದ್ರಿ, ಪ್ರೇಮ್‌ನಾಥ್ ಶೆಟ್ಟಿ ಮಾಲಕತ್ವದ ರೋಹನ್ ನಾಯಕತ್ವದ ಹೀಟ್ ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್‍ಸ್, ಅದ್ವಿಕಾ ಮಾಲಕತ್ವದ ರಿಝ್ವಾನ್ ಕೋಡಿ ನಾಯಕತ್ವದ ಚಕ್ರವರ್ತಿ ಕುಂದಾಪುರ, ಸಂದೀಪ್ ಮೊಂತೇರೋ ಮಾಲಕತ್ವದ ಪ್ರವೀಣ್ ವೈದ್ಯ ನಾಯಕತ್ವದ ಕುಡ್ಲ ಸ್ಟ್ರೈಕರ್‍ಸ್, ಸಮೀವುಲ್ಲಾ ಮತ್ತು ಅಫ್ತಾರ್ ಮಾಲಕತ್ವದ ಫರ್‍ದೀನ್ ನಾಯಕತ್ವದ ಗಂಗೊಳ್ಳಿ ಸ್ಟ್ರೈಕರ್‍ಸ್, ಪರ್ವೇಝ್ ಮತ್ತು ನವೀನ್ ಮಾಲಕತ್ವದ ವಿಶ್ವ ನಾಯಕನಾಗಿರುವ ಉಡುಪಿ ಬುಲ್ಸ್ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ.

ಜನವರಿ 18ರಂದು ಹಗಲು ರಾತ್ರಿ ಪಂದ್ಯಾಟ ನಡೆಯಲಿದ್ದು, ಪಂದ್ಯವು ಒಟ್ಟು 3.5ಲಕ್ಷ ರೂಗಳ ನಗದು ಮೊತ್ತವನ್ನು ಒಳಗೊಂಡಿದೆ.


Spread the love

Exit mobile version