ಯುಜಿಸಿ-ಪ್ರಾಯೋಜಿತ ‘ಮಾಲಿನ್ಯ ಮತ್ತು ಜೈವಿಕ-ಪರಿಹಾರ: ಪ್ರಸ್ತುತ ಸನ್ನಿವೇಶ ಹಾಗೂ ಭವಿಷ್ಯದ ನಿರೀಕ್ಷೆಗಳು’
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗವು ಯುಜಿಸಿ-ವಿಶೇಷ ನೆರವು ಕಾರ್ಯಕ್ರಮದ ಅಡಿಯಲ್ಲಿ ‘ಮಾಲಿನ್ಯ ಮತು ಜೈವಿಕ-ಪರಿಹಾರ – ಪ್ರಸ್ತುತ ಸನ್ನಿವೇಶ ಹಾಗೂ ಭವಿಷ್ಯದ ನಿರೀಕ್ಷೆಗಳು’ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಲುಷಿತ ನೀರು ಹಾಗೂ ಮಾಲಿನ್ಯಕಾರಕ ಮಣ್ಣನ್ನು ಶುದ್ಧೀಕರಿಸಲು ಜೀವಿಗಳನ್ನು ಬಳಸುವ ಜೈವಿಕ ಪ್ರಕ್ರಿಯೆ ಕುರಿತು ಕೇಂದ್ರಿಕೃತವಾಗಿ ಅನೇಕ ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಉಪನ್ಯಾಸ ಹಾಗೂ ಚರ್ಚೆ ನಡೆಯಿತು.
ಪೆÇ್ರ. ಇಂದ್ರಾಣಿ ಕರುಣಾಸಾಗರ್, ನಿರ್ದೇಶಕರು, ಯುನೆಸ್ಕೊ ಸೆಂಟರ್ ಫಾರ್ ಮೆಡಿಕಲ್ ಎಂಡ್ ಮೆರೈನ್ ಟಕ್ನಾಲಜಿ ಹಾಗೂ ನಿರ್ದೇಶಕರು (ಆರ್ ಎಂಡ್ ಡಿ), ನಿಟ್ಟೆ ವಿಶ್ವವಿದ್ಯಾನಿಲಯ, ಇವರು ವಿಚಾರ ಸಂಕಿರ್ಣವನ್ನು ಉದ್ಛಾಟಿಸಿದರು. ‘ಜನಸಂಖ್ಯಾ ಸ್ಫೋಟ ಹಾಗು ಮಾನವನ ಹೆಚ್ಚಿದ ಬೇಡಿಕೆಗಳನ್ನು ಪೂರೈಸುವ ಹೆಸರಿನಲ್ಲಿ ಅಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಪರಿಸರದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗಿದೆ. ತ್ಯಾಜ್ಯ ನಿರ್ವಹಣೆಗೆ ಕಸಗಳನ್ನು ಸುಡುವುದು ಪರಿಹಾರವಲ್ಲ; ಇದು ಅವೈಜ್ಞಾನಿಕ ಮತ್ತು ಮಾಲಿನ್ಯವನ್ನು ಇನ್ನಷ್ಟೂ ಹೆಚ್ಚಿಸುತ್ತದೆ. ಮಾಲಿನ್ಯಕಾರಕಗಳನ್ನು ಕಡಿಮೆಗೊಳಿಸಲು ಅನೇಕ ನೈಸರ್ಗಿಕ ವ್ಯವಸ್ಥೆಗಳಿವೆ. ಸೂಕ್ಷ್ಮಾಣುಜೀವಿಗಳು ಕಣ್ಣಿಗೆ ಕಾಣದಿದ್ದರೂ ತ್ಯಾಜ್ಯಗಳನ್ನು ಕೊಳೆಸುವ ಮೂಲಕ ಪ್ರಕೃತಿಯಲ್ಲಿ ಗಮನಾರ್ಹ ರೀತಿಯಲ್ಲಿ ಸೇವೆ ಸಲ್ಲಿಸುತ್ತವೆ. ವಿಚಾರ ಸಂಕಿರ್ಣದ ಕೇಂದ್ರ ವಿಷಯ ‘ಮಾಲಿನ್ಯ ಮತ್ತು ಜೈವಿಕ-ಪರಿಹಾರ’ ಸಮಸ್ಯೆ ಮತ್ತು ಪರಿಹಾರ ಎರಡರ ಬಗ್ಗೆಯೂ ಇರುವುದರಿಂದ ಇದೊಂದು ಅರ್ಥಪೂರ್ಣವಾದ ಸೆಮಿನಾರ್. ತ್ಯಾಜ್ಯ ನಿರ್ವಹಣೆ ಒಂದು ಅಂತರಾಷ್ಟ್ರೀಯ ಸಮಸ್ಯೆಯಾಗಿದ್ದು, ಅನೇಕ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳಿಗೆ ತಮ್ಮ ತ್ಯಾಜ್ಯಗಳನ್ನು ಎಸೆಯುತ್ತವೆ. ಪರಿಸರ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ಸರ್ಕಾರವು ಅನೇಕ ಶಾಸನಗಳು ಮತ್ತು ನಿಯಮಾವಳಿಗಳನ್ನು ಹೊಂದಿವೆ. ಆದರೆ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಭ್ಯಾಸ ಮಾಡುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮ ನೈತಿಕ ಕರ್ತವ್ಯವಾಗಿದೆ. ಸಮುದ್ರ ಪರಿಸರ ವ್ಯವಸ್ಥೆಯು ವಿವಿಧ ಮಾಲಿನ್ಯಕಾರಗಳಿಂದಾಗಿ, ಮುಖ್ಯವಾಗಿ ಪ್ಲಾಸ್ಟಿಕ್ ಮತ್ತು ಮೈಕ್ರೋಪ್ಲಾಸ್ಟಿಕ್ಗಳಿಂದ ತುಂಬಿದ್ದು, ಸಾಗರ ಜೀವಿಗಳ ಬದುಕು ತುಂಬಾ ಅಪಾಯದಲ್ಲಿವೆ. ಪರಿಸರ ಸಂರಕ್ಷಣೆಗಾಗಿ ನಾವು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ, ಮುಂದಿನ ದಿನಗಳು ಇನ್ನೂ ಅಪಾಯಕಾರಿಯಾಗಲಿವೆ”.
ಪೆÇ್ರ. ಕೆ. ಆರ್. ಶ್ರೀಧರ, (ಆಡ್ಜಂಕ್ಟ್ ಪ್ರಾಧ್ಯಾಪಕರು- ಜೀವವಿಜ್ಞಾನ) ಇವರು ಅಧ್ಯಕ್ಷತೆಯನ್ನು ವಹಿಸಿ, ‘ಜೈವಿಕ-ಪರಿಹಾರ – ಇತ್ತೀಚಿನ ಬೆಳವಣೆಗೆಗಳು ಮತ್ತು ಮಾರ್ಗಗಳು’, ಎಂಬ ವಿಷಯದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. “ಬದುಕಲು ಎಲ್ಲಾ ಜೀವಿಗಳಿಗೆ ಸಮಾನ ಹಕ್ಕು ಇದೆ. ಭೂಮಿಯಲ್ಲಿ ಎಲ್ಲಾ ಜೀವಿಗಳ ಬದುಕಿಗೆ ಅವುಗಳ ಕೊಡುಗೆ ಅಪಾರ. ಪರಿಸರವನ್ನು ಕಲುಷಿತಗೊಳಿಸುವ ಮೂಲಕ ನಾವು ನಮ್ಮ ಜೀವನವನ್ನು ಹಾಳುಮಾಡುವೂದಲ್ಲದೆ, ಇತರ ಎಲ್ಲ ಜೀವಿಗಳಿಗೆ ಅಪಾಯವನ್ನುಂಟು ಮಾಡುತ್ತಿದ್ದೇವೆ. ಬಯೊರೆಮಿಡಿಯೇಶನ್ ಎಂಬುದು ಮಾಲಿನ್ಯಕಾರಗಳನ್ನು ತಗ್ಗಿಸಲು ಒಂದು ನೈಸರ್ಗಿಕ ಪರಿಹಾರವಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇನ್ನಷ್ಟೂ ಸಂಶೋಧನೆ ನಡೆಸಬೇಕಾಗಿದೆ”.
ಸಂಪನ್ಮೂಲ ವ್ಯಕ್ತಿಗಳಾಗಿ ಪೆÇ್ರ. ಬಾಲಕೃಷ್ಣ ಹೆಗ್ಡೆ (ಸಂಶೋಧನ ಸಂಯೋಜಕರು, ಸಹ್ಯಾದ್ರಿ ವೈಲ್ಡ್ಲೈಫ್ ಎಂಡ್ ಫಾರೆಸ್ಟ್ ಕನ್ಸರ್ವೇಶನ್ ಟ್ರಸ್ಟ್) ಅವರು, ಪಶ್ಚಿಮ ಘಟ್ಟ ವಿಶೇಷ ಉಲ್ಲೇಖದೊಂದಿಗೆ ಉಷ್ಣವಲಯದ ಕಾಡುಗಳು ಮೇಲೆ ಹವಾಮಾನ ಬದಲಾವಣೆಯ ಪರಿಣಾಮ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಪೆÇ್ರ. ಮುತ್ತುಕುಮಾರ್ ಮುತ್ತುಚಾಮಿ (ಡೀನ್ – ಸ್ಕೂಲ್ ಆಫ್ ಅರ್ಥ್ ಸೈಯನ್ಸ್, ಸೆಂಟ್ರಲ್ ಯುನಿರ್ವಸಿಟಿ ಆಫ್ ಕೆರಳ), ಅವರು, ‘ತ್ಯಾಜ್ಯನೀರಿನಿಂದ ಹೊರಹೊಮ್ಮುವ ಸೂಕ್ಷ್ಮ ಮಾಲಿನ್ಯಕಾರಗಳ ಪರಿಹಾರಕ್ಕಾಗಿ ಆಕ್ಸಿಡೇಟಿವ್ ತಂತ್ರ’ ಎಂಬ ವಿಷಯದ ಬಗ್ಗೆ ಮಾತಾನಾಡಿದರು. ಡಾ. ಸಮಿರ್ ದಾಮರೆ (ಪ್ರಿನ್ಸಿಪಾಲ್ ಸೈಂಟಿಸ್ಟ್, ಡಿಪಾರ್ಟಮೇಂಟ್ ಆಫ್ ಬಯಲಾಜಿಕಲ್ ಓಶಿಯಾನೊಗ್ರಾಫಿ, ಸಿ.ಎಸ್.ಐ.ಅರ್.-ನ್ಯಾಷನಲ್ ಇನ್ಶಟಿಟ್ಯೂಟ್ ಆಫ್ ಓಸಿಯಾನೊಗ್ರಾಫಿ, ಗೋವಾ), ಇವರು ‘ಜೈವಿಕ-ಪರಿಹಾರದಲ್ಲಿ ಸಾಗರ ಶಿಲೀಂಧ್ರಗಳ ಪರಿಣಾಮಕಾರಿ ಏಜೆಂಟ್ಗಳಾಗಿ’ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.
ಕರ್ನಾಟಕ ಹಾಗೂ ಹೊರ ರಾಜ್ಯಗಳ ಅನೇಕ ವಿಶ್ವವಿದ್ಯಾನಿಲಯ, ಕಾಲೇಜು ಮತ್ತು ಸಂಸ್ಥೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಬಗ್ಗೆ ತಮ್ಮ ಸಂಶೋಧನಾ ಲೇಖನಗಳನ್ನು ಪೆÇೀಸ್ಟರ್ ರೂಪದಲ್ಲಿ ಮಂಡಿಸಿದರು.
ಪೆÇ್ರ. ಪ್ರಶಾಂತ ನಾಯ್ಕ, ವಿಭಾಗದ ಅಧ್ಯಕ್ಷರು, ಪ್ರಾಸ್ತಾವಿಕ ಮಾತಾನಾಡಿ ಎಲ್ಲರನ್ನೂ ಸ್ವಾಗತಿಸಿದರು. ಪೆÇ್ರ. ಚಂದ್ರ ಎಂ. ವಿಚಾರ ಸಂಕಿರ್ಣದ ಸಂಚಾಲಕರು ಮುನ್ನೋಟವನ್ನು ನೀಡಿದರು. ಪೆÇ್ರ. ಚಂದ್ರಕಲಾ ಶೆಣೈ ಕೆ. ಯು.ಜಿ.ಸಿ-ಸ್ಯಾಪ್ ಸಂಯೋಜಕರು ಯು.ಜಿ.ಸಿ-ಸ್ಯಾಪ ಚಟುವಟಿಕೆಗಳ ಬಗ್ಗೆ ವರದಿ ನೀಡಿದರು. ಡಾ. ತಾರಾವತಿ ಎನ್. ಸಿ. ಅವರು ವಂದನಾರ್ಪಣೆ ಸಲ್ಲಿಸಿದರು. ಪೆÇ್ರ. ಮೋನಿಕ ಸದಾನಾಂದ ತಾಂತ್ರಿಕ ಅಧಿವೇಶನಗಳನ್ನು ನಡೆಸಿಕೊಟ್ಟರು. ಲವೀನಾ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.