Home Mangalorean News Kannada News ಯುಪಿಎಲ್ ಹರಾಜು ಪ್ರಕ್ರಿಯೆ ಅಂತ್ಯ, ಫೆ.18 ರಂದು ಪಂದ್ಯಾವಳಿ  

ಯುಪಿಎಲ್ ಹರಾಜು ಪ್ರಕ್ರಿಯೆ ಅಂತ್ಯ, ಫೆ.18 ರಂದು ಪಂದ್ಯಾವಳಿ  

Spread the love

ಯುಪಿಎಲ್ ಹರಾಜು ಪ್ರಕ್ರಿಯೆ ಅಂತ್ಯ, ಫೆ.18 ರಂದು ಪಂದ್ಯಾವಳಿ  

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಪ್ರತಿಷ್ಠಿತ ಯುನಿವರ್ಸಿಟಿ ಪ್ರೀಮಿಯರ್ ಲೀಗ್ (ಯುಪಿಎಲ್) ಚುಟುಕು ಕ್ರಿಕೆಟ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆ ಮಂಗಳವಾರ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.

ಯುಪಿಎಲ್ ಕ್ರಿಕೆಟ್ ಪಂದ್ಯಾವಳಿಯು ವಿವಿ ಕಾಲೇಜಿನ ಕ್ರೀಡಾಂಗಣದಲ್ಲಿ ಇದೇ ಫೆಬ್ರವರಿ 18 ರಂದು ಬೆಳಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಪ್ರಾಂಶುಪಾಲ ಡಾ ಉದಯ ಕುಮಾರ್ ಎಂ.ಎ, ಯುಪಿಎಲ್ ಪಂದ್ಯಾವಳಿಯು ಕಾಲೇಜಿನ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿರಲಿ ಎಂದು ಶುಭಹಾರೈಸಿದರು.

ಪಂದ್ಯವಳಿಯಲ್ಲಿ 2 ವಿದ್ಯಾರ್ಥಿನಿಯರ ತಂಡ ಸೇರಿದಂತೆ, ಒಟ್ಟು 8 ತಂಡಗಳು ಭಾಗವಹಿಸಲಿವೆ. ತಂಡಗಳನ್ನು ಯುಸಿಎಮ್ ವಾರಿಯರ್ಸ್ , ಯುಸಿಎಮ್ ಬ್ರಿಗೇಡ್, ಯುಸಿಎಮ್ ಜಾಗ್ವಾರ್ಸ್, ಯುಸಿಎಮ್ ಇಲವೆನ್ಸ್, ಯುಸಿಎಮ್ ಸ್ಟ್ರೈಕರ್ಸ್, ಯುಸಿಎಮ್ ರಾಯಲ್ಸ್, ಯುಸಿಎಮ್ ಪಿಂಕ್ ಪ್ಯಾಂಥರ್ಸ್ ಹಾಗೂ ಯುಸಿಎಮ್ ಬ್ಲೂ ಏಂಜೆಲ್ಸ್. ಪ್ರತಿಯೊಂದು ತಂಡಕ್ಕೂ ಪ್ರಾಧ್ಯಾಪಕರು ಮಾಲೀಕರಾಗಿರುತ್ತಾರೆ ಮತ್ತು ಪ್ರತಿ 6 ವಿದ್ಯಾರ್ಥಿಗಳ ತಂಡದಲ್ಲೂ ಒಬ್ಬರು ಪ್ರಾಧ್ಯಾಪಕರು ಆಡಲಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಉಪ ನಿರ್ದೇಶಕ ಡಾ. ಕೇಶವಮೂರ್ತಿ, ವಿದ್ಯಾರ್ಥಿ ಸಂಘದ ನಾಯಕ ಸಂಪತ್ ಬಿ ಮತ್ತು ಕ್ರೀಡಾ ಕಾರ್ಯದರ್ಶಿ ಮನೀಶ್ ಕುಮಾರ್ ಹಾಗೂ ಕಾವ್ಯಾ, ಮತ್ತು ತಂಡಗಳ ಮಾಲೀಕರು ಉಪಸ್ಥಿತರಿದ್ದರು.


Spread the love

Exit mobile version