ಯುವಕನನ್ನು ಅಪಹರಿಸಿ ಮೊಬೈಲ್ ಸುಲಿಗೆ ಮಾಡಿ ಕೊಲೆ ಯತ್ನ ಮಾಡಿದ ಆರೋಪಿಗಳ ಬಂಧನ
ಮಂಗಳೂರು : ಮಂಗಳೂರು ಕದ್ರಿ ಪೂರ್ವ ಠಾಣೆಯ ವ್ಯಾಪ್ತಿಯಲ್ಲಿ ಯುವಕನನ್ನು ಆತನ ಬೈಕ್ ಸಮೇತ ಅಪಹರಿಸಿ ಆತನ ಮೊಬೈಲ್ ಹಾಗು ಬೈಕನ್ನು ಕಿತ್ತುಕೊಂಡು ಸುಲಿಗೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಯತ್ನ ಮಾಡಿದ ಆರೋಪಿಗಳನ್ನು ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಅವರಿಂದ ಸುಲಿಗೆ ಮಾಡಿದ ರೂಪಾಯಿ 15.000 ಮೌಲ್ಯದ ವಿವೋ ಮೊಬೈಲ್, ,ಹಾಗೂ ರು 50.000/ ಮೌಲ್ಯದ ಪಿರ್ಯಾದಿದಾರರ ಪಲ್ಸರ್ ಎನ್.ಎಸ್ ಬೈಕ್ ನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಎರಡು ದ್ವಿ ಚಕ್ರ ವಾಹನಗಳನ್ನು ವಶ ಪಡಿಸಿ ಕೊಂಡಿರುತ್ತಾರೆ.
ಬಂಧೀತರನ್ನು ದೀರಾಜ್ ಕುಮಾರ್ @ ಧೀರು, (23), ಪ್ರಾಣೇಶ್ ಪೂಜಾರಿ (21), ನೀಕ್ಷಿತ್ ಪೂಜಾರಿ ( 21), ಪ್ರೀತಮ್ ಪೂಜಾರಿ ( 22), ನೀತಿನ್ ಪೂಜಾರಿ ( 20) ಎಂದು ಗುರುತಿಸಲಾಗಿದೆ.
ದಿನಾಂಕ: 15-04-2018 ರಂದು ಸಂಜೆ 04.30 ಗಂಟೆಗೆ ಜಲ್ಲಿಗುಡ್ಡೆ ಜಯನಗರ ನಿವಾಸಿ ಗ್ಲಾನ್ ಸನ್ ಎಂಬಾತನನ್ನು ಬಿಕರ್ನಕಟ್ಟೆ ಯಿಂದ ಆರೋಪಿಗಳು ಅವರ ದ್ವಿಚಕ್ರ ವಾಹನದಲ್ಲಿ ಬಲತ್ಕಾರವಾಗಿ ಕುಳ್ಳಿರಿಸಿಕೊಂಡು ಆತನ ಬೈಕ್ ನ್ನು ತೆಗೆದುಕೊಂಡು ಅಡ್ಯಾರಿನ ರೈಲ್ವೇ ಟ್ರಾಕ್ ಬಳಿ ಕರೆದುಕೊಂಡು ಹೋಗಿ ಹಣ ಕೊಡುವಂತೆ ಒತ್ತಾಯಿಸಿ ರೂ; 15,000/- ಮೌಲ್ಯದ ವಿವೋ ಮೊಬೈಲ್ ಪೋನ್ ನ್ನು ಕಸಿದುಕೊಂಡು ಆರೋಪಿಗಳು ಯುವಕನಿಗೆ ಚೂರಿ ತೋರಿಸಿ ಬೆದರಿಸಿ ಮನೆಯವರಿಗೆ ಪೋನ್ ಮಾಡಿ ರೂ: 1 ಲಕ್ಷ ಕೊಡುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿ ಅಲ್ಲಿಂದ ನೀರ್ ಮಾರ್ಗ ಕೇಲ್ರಾಯ್ ಗೆ ಕರೆದುಕೊಂಡು ಹೋಗಿ ಹಲ್ಲೇ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ. ಆರೋಪಿಗಳು ಎಲ್ಲರೂ ಕ್ರಿಮಿನಲ್ ಹಿನ್ನಲೆ ಹೊಂದಿರುವವರಾಗಿದ್ದು ಎಲ್ಲರೂ ಕೊಲೆಯತ್ನ ಪ್ರಕರಣದ ಆರೋಪಿಗಳಾಗಿರುತ್ತಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ವಿಪುಲ್ ಕುಮಾರ್ ರವರ ಮಾರ್ಗದರ್ಶನದಂತೆ ಹನುಮಂತರಾಯ, ಉಪ ಪೊಲೀಸ್ ಆಯುಕ್ತರು (ಕಾಸು) ಮತ್ತು ಉಮಾ ಪ್ರಶಾಂತ್ ಉಪ ಪೊಲೀಸ್ ಆಯುಕ್ತರು ಅಪರಾಧ ಹಾಗೂ ಸಂಚಾರ ರವರ ನಿರ್ದೇಶನದಂತೆ ಹಾಗೂ ಎಮ್ ಜಗದೀಶ್ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಕೇಂದ್ರ ವಿಭಾಗರವರ ನೇತೃತ್ವದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಮಾರುತಿ ಜಿ ನಾಯಕ, ಪಿಎಸ್ ಐ (ಕ್ರೈಂ) ನೀತು ಆರ್ ಗುಡೆ, ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ಜಯಾನಂದ, ಉಮೇಶ್, ಗಿರೀಶ್ ಜೋಗಿ, ಅಜೀತ್ ಮ್ಯಾಥ್ಯೂ,ರಾಘವೇಂದ್ರ, ಬಿರೇಂದ್ರ, ಹನುಮಂತ, ಹಾಗು ಮನೋಜ್ ಕಂಪ್ಯೂಟರ್ ಸೇಕ್ಷನ್ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದರು.