ಯುವಕನ ಲೂಟಿಗೈದ ಆರೋಪಿಗಳ ಬಂಧನ
ಮಂಗಳೂರು: ಸ್ನೇಹಿತನ ಜತೆಗೂಡಿ ನಡೆದುಕೊಂಡು ಹೋಗುತ್ತಿದ್ದ ಯುವಕನ್ನನ್ನು ಲೂಟಿಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪಣಂಬೂರು ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಂದರ್ ನಿವಾಸಿ ಮಹಮ್ಮದ್ ಫವಾದ್ (21) ಮತ್ತು ಕಂಕನಾಡಿ ನಿವಾಸಿ ಮಹಮ್ಮದ್ ಅಫ್ರಿದಿ (19) ಎಂದು ಗುರುತಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 11 ರಂದು ರಾತ್ರಿ 8.30 ಗಂಟೆಗೆ ಬೈಕಂಪಾಡಿ ಗ್ರಾಮದ ಕೈಗಾರಿಕಾ ಪ್ರಧೇಶದ ಲೆಮಿನಾ ಫ್ಯಾಕ್ಟರಿ ಯ ಬಳಿಯಲ್ಲಿ ರಸ್ತೆಯಲ್ಲಿ ತನ್ನ ಸ್ನೇಹಿತ ಬಾನೇಸರ್ ಎಂಬವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಪಶ್ಚಿಮ ಬಂಗಾಲ ಮೂಲದ ರಾಜು ಸರ್ಕಾರ್ ಎಂಬವರನ್ನು ಕಪ್ಪು ಬಣ್ಣದ ಹೋಂಡಾ ಆಕ್ಟೀವಾ ಸ್ಕೂಟರ್ ನಲ್ಲಿ ಬಂದ ಇಬ್ಬರು ಯುವಕರು ಅವರನ್ನು ನಿಲ್ಲಿಸಿ ಅವರ ಶರ್ಟ್ ಪಾಕೇಟ್ ನಲ್ಲಿದ್ದ ಒಂದು ಮೊಬೈಲ್ ಮತ್ತು ಕೈಯಲ್ಲಿದ್ದ ಒಂದು ಮೊಬೈಲ್ ಮತ್ತು ಶರ್ಟ್ ಪಾಕೇಟ್ ಗೆ ಕೈ ಹಾಕಿ ಬಲತ್ಕಾರವಾಗಿ ರೂ. 130/- ಹಣವನ್ನು ಕಿತ್ತುಕೊಳ್ಳುತ್ತಿದ್ದಂತೆಯೇ ಪಿರ್ಯಾದಿದಾರರು ಬೊಬ್ಬೆ ಹೊಡೆದಿದ್ದು ಕೂಡಲೇ ಸ್ಕೂಟರ್ ನಲ್ಲಿ ಬಂದಿದ್ದ ಇಬ್ಬರು ಕಿತ್ತುಕೊಂಡ ಎರಡು ಮೊಬೈಲ್ ಫೋನ್ ಮತ್ತು ನಗದು ಹಣದ ಸಮೇತ ಅಲ್ಲಿಂದ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಕುಡುಂಬೂರು ಕಡೆಗೆ ಪರಾರಿಯಾಗಿದ್ದು, ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದಿನಾಂಕ: 12-02-2018ರಂದು ಪ್ರಕರಣದ ದಾಖಲಾಗಿದ್ದು, ಆರೋಪಿಗಳ ಪತ್ತೆಯ ಬಗ್ಗೆ ಪಣಂಬೂರು ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಅದರಂತೆ ಈ ದಿನ ದಿನಾಂಕ 13-02-2018 ರಂದು ಮಂಗಳೂರು ತಾಲೂಕು ಪಣಂಬೂರು ಠಾಣಾ ವ್ಯಾಪ್ತಿಯ ಕುದುರೆಮುಖ ಬಸ್ಸು ನಿಲ್ದಾಣದ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿರುತ್ತಾರೆ. ಆರೋಪಿಗಳಿಬ್ಬರನ್ನು ದಸ್ತಗಿರಿ ಮಾಡಿ ಅವರುಗಳಿಂದ ಕೃತ್ಯಕ್ಕೆ ಬಳಸಿದ ಒಂದು ಹೋಂಡಾ ಆಕ್ಟೀವಾ ಸ್ಕೂಟರ್ ಮತ್ತು ಸುಲಿಗೆ ಮಾಡಿದ ಎರಡು ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ಶ್ರೀ ರಫೀಕ್.ಕೆ.ಎಮ್, ಪಣಂಬೂರು ಠಾಣಾ ಪಿ.ಎಸ್.ಐ ಕ್ರೈಂ ಶ್ರೀ ಕುಮರೇಶನ್ ಹಾಗೂ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.