Home Mangalorean News Kannada News ಯುವಕರನ್ನು ಸ್ವಾವಲಂಬಿಗಳಾಗಿ ಮಾಡಲು ಪಣತೊಟ್ಟು ದುಡಿಯುವೆ: ವಿನಯ್ ಕುಮಾರ್ ಸೊರಕೆ

ಯುವಕರನ್ನು ಸ್ವಾವಲಂಬಿಗಳಾಗಿ ಮಾಡಲು ಪಣತೊಟ್ಟು ದುಡಿಯುವೆ: ವಿನಯ್ ಕುಮಾರ್ ಸೊರಕೆ

Spread the love

ಯುವಕರನ್ನು ಸ್ವಾವಲಂಬಿಗಳಾಗಿ ಮಾಡಲು ಪಣತೊಟ್ಟು ದುಡಿಯುವೆ: ವಿನಯ್ ಕುಮಾರ್ ಸೊರಕೆ

ಕಾಪು: ಯುವಕರು ರಾಷ್ಟ್ರದ ಶಕ್ತಿ . ದೇಶ ಅಭಿವೃದ್ಧಿ ಯಾಗ ಬೇಕಾದ ರೆ ಯುವಶಕ್ತಿಯ ಏಳಿಗೆಯಾಗಬೇಕು. ಕಾಪು ಕ್ಷೇತ್ರದಲ್ಲಿ ಬಹಳಷ್ಟು ಯುವಶಕ್ತಿಗಳಿಗೆ ಶಕ್ತಿಯನ್ನು ತುಂಬಿ ಅವರು ಸ್ವಾವಲಂಬಿ ಯಾಗಿ ಬದುಕಲು ಅವಕಾಶ ಕಲ್ಪಿಸುವ ಕಾರ್ಯ ಆಗಬೇಕಾಗಿದೆ ಎಂದು ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಕಾಪು ರಾಜೀವ ಭವನದಲ್ಲಿ ನಡೆದ ಕಾಪು ಕ್ಷೇತ್ರ ದಕ್ಷಿಣ ಭಾಗದ ಯುವ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು ಅಲ್ಲದೆ ಗ್ರಾಮೀಣ ಯುವ ಕಾಂಗ್ರೆಸ್ ಪದಾಧಿಕಾರಿಗಳ ನೇಮಕಾತಿ ಪತ್ರವನ್ನು ಶಾಸಕರು ವಿತರಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ದಿನೇಶ್ ಕೋಟ್ಯಾನ್ ಗೀತಾ ವಾಗ್ಲೆ, ಪ್ರಭಾವತಿ ಸಾಲ್ಯಾನ್, ಫರ್ಜಾನ, ಅಜೀಜ್, ಕಿಶೋರ್ ಕುಮಾರ್, ನವೀನ್, ದೀಪಕ್, ನಿಯಾಜ್, ಇಮ್ರಾನ್, ಪ್ರಭಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು


Spread the love

Exit mobile version